ವಿಚ್ಚೇದನಕ್ಕೆ ಮುಂದಾದ ಬಾಲಿವುಡ್ ಜೋಡಿ..!! ಯಾರ್ ಗೊತ್ತಾ..?
ಸೆಲೆಬ್ರೆಟಿಗಳಲ್ಲಿ ಒಂದಷ್ಟು ಜನ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ಸಪ್ತಪದಿ ತುಳಿದು ಲೈಫ್ ನ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ..ಆದರೆ ಮತ್ತೆ ಕೆಲವು ಸೆಲೆಬ್ರೆಟಿಗಳು ಸಾಕಪ್ಪ ಸಾಕು ಈ ಸಂಸಾರದ ಕಥೆ ಅಂತ ಮ್ಯಾರೆಜ್ ಲೈಫ್ ಗೆ ಗುಡ್ ಬೈ ಹೇಳುತ್ತಿದ್ದಾರೆ. 3 ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಈ ಜೋಡಿ ದಾಂಪತ್ಯ ಜೀವನದ ನಂತರ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.. ಆ ಜೋಡಿ ಮತ್ಯಾರು ಅಲ್ಲ.. ನಿರ್ಮಾಪಕ ಮಧು ಮಂಟೇನ ಮತ್ತು ಸ್ಟಾರ್ ಡಿಸೈನರ್ ಮಸಾಬ ಗುಪ್ತಾ ಇದೀಗ ಇವರಿಬ್ಬರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.
ಸದ್ಯ ಈ ಜೋಡಿಗೆ ವಿಚ್ಚೇದನ ಬೇಕಂತ್ತೆ.. 25 ಆಗಸ್ಟ್ 2018 ರಿಂದ ತಾತ್ಕಾಲಿಕವಾಗಿ ಬೇರ್ಪಟ್ಟಿರುವ ಈ ಜೋಡಿ ಕೊನೆಗೂ ವಿಚ್ಛೇದನ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ.. . ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಚ್ಛೇದನ ವಿಷಯವನ್ನು ಅವರು ಈ ಮೊದಲು ತಿಳಿಸಿದ್ದರು. ತಾವು ದೂರವಾಗಲು ಬಯಸುತ್ತಿದ್ದು, ನಮ್ಮ ದಾಂಪತ್ಯ ಜೀವನದ ಮೇಲೆ ಅಕಾರಣದಿಂದ ಒತ್ತಡವಾಗುತ್ತಿದೆ.
ಜೊತೆಯಾಗಿರಲು ಕಷ್ಟವಾಗುತ್ತಿದೆ. ಅದಕ್ಕಾಗಿ ಮೊದಲು ದೂರವಾಗಿ ತಮ್ಮಿಬ್ಬರಿಗೆ ಏನು ಬೇಕೆಂದು ನೋಡಲು ನಿರ್ಧರಿಸುವುದಾಗಿ ತಿಳಿಸಿದ್ದರು.ಇದೀಗ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿರುವುದನ್ನು ನೋಡಿದರೆ ವಿಚ್ಛೇದನ ಬಹುತೇಕ ಖಚಿತವಾಗಿದೆ. ಮಸಾಬ ಗುಪ್ತ ಯಾವುದೇ ಜೀವನಾಂಶ ಕೇಳಿಲ್ಲವಂತೆ.. ಒಟ್ಟಾರೆ ಮದುವೆಯಾಗಿ ಮೂರೇ ವರ್ಷಕ್ಕೆ ವಿಚ್ಛೇದನ ಪಡೆದುಕೊಳ್ಳುತ್ತಿದೆ ಈ ಜೋಡಿ…
Comments