ಉಪೇಂದ್ರ ಮಗಳ ಮೊದಲ ಸಿನಿಮಾ ಯಾವುದು ಗೊತ್ತಾ..? ಆ್ಯಕ್ಟಿಂಗ್ ನೋಡಿದ್ರೆ ದಂಗಾಗ್ತೀರಾ..?!!!

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಅವರಿಗೆ ಎರಡು ಮುದ್ದಾದ ಮಕ್ಕಳಿದ್ದಾರೆ. ಅತ್ತ ಉಪೇಂದ್ರ ರಾಜಕೀಯ ಪ್ರವೇಶ ಮಾಡಿದ್ರೆ, ಇತ್ತ ಪ್ರಿಯಾಂಕ ಸಿನಿಮಾ ಕಡೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಾವಷ್ಟೇ ಅಲ್ಲಾ, ತಮ್ಮ ಮಕ್ಕಳನ್ನು ಸ್ಯಾಂಡಲ್’ವುಡ್ ಗೆ ಪರಿಚಯ ಮಾಡಿಸಿದ್ದಾರೆ. ಈಗಾಗಲೇ ಪುತ್ರನ ಸಿನಿಮಾ ಬಂದಿದ್ದಾಗಿದೆ. ಈಗ ಮಗಳ ಸರದಿ. ಹೇಳಿ ಕೇಳಿ ಅಪ್ಪ-ಅಮ್ಮ ಇಬ್ಬರು ಕಲಾವಿದರು. ಈಗ ಮಗಳ ಮೊದಲ ಸಿನಿಮಾಗೆ ಸಿಕ್ಕಾಪಟ್ಟೆ ಸಾಥ್ ಕೊಡುತ್ತಿದ್ದಾರೆ ಪೋಷಕರು. ಅಂದಹಾಗೇ ಮಗಳ ಫಸ್ಟ್ ಸಿನಿಮಾ 'ದೇವಕಿ' ಟೀಸರ್ ರಿಲೀಸ್ ಆಗಿದೆ.
ಅಪ್ಪ ಉಪೇಂದ್ರ ಪ್ರಜಾಕೀಯ ಮೂಲಕ ರಾಜಕೀಯ ಎಂಟ್ರಿ ಮಾಡುತ್ತಿದ್ದರೇ ಇತ್ತ ಅವರ ಅಭಿನಯದ ನಿರೀಕ್ಷಿತ ಸಿನಿಮಾ ಐ ಲವ್ ಯೂ ರಿಲೀಸ್ ಗೆ ರೆಡಿಯಾಗ್ತಿದೆ. ಒಟ್ಟಾರೆ ಇದರ ನಡುವೆ ಫ್ಯಾಮಿಲಿ ಕೂಡ ಮ್ಯಾನೇಜ್ ಮಾಡ್ತಿರುವ ಉಪೇಂದ್ರ ಅವರ ಸ್ವೀಟ್ ಡಾಟರ್ ಫಸ್ಟ್ ಸಿನಿಮಾ ಸ್ಟೆಪ್ ನೋಡೋಕೆ ಕಾತುರರಾಗಿದ್ದಾರೆ ಉಪ್ಪಿ ಅಭಿಮಾನಿಗಳು.
ಉಪೇಂದ್ರ ಮಗಳು ಐಶ್ವರ್ಯ ಉಪೇಂದ್ರ ಅಭಿನಯದ ದೇವಕಿ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಚಿತ್ರರಂಗದಲ್ಲಿ ಹೊಸ ಕಲರವ ಮೂಡಿಸುವುದು ಗ್ಯಾರಂಟಿ.ಪ್ರಿಯಾಂಕ ಉಪೇಂದ್ರ ಪುತ್ರಿಯ ಮೊದಲ ಸಿನಿಮಾ ಇದಾಗಿದ್ದು ಇದರ ಫಸ್ಟ್ ಲುಕ್ ನಟಿ ಪಾರೂಲ್ ಯಾದವ್ ಬಿಡುಗಡೆ ಮಾಡಿದ್ದಾರೆ. ಚೈಲ್ಡ್ ಮಾಫಿಯಾ ಕುರಿತಾಗಿ ಮಾಡಿರುವ ಸಿನಿಮಾ ಬಗ್ಗೆ ಈಗಾಗಲೇ ಗಾಮಧಿನಗರದಲ್ಲಿ ಸಿಕ್ಕಾಪಟ್ಟೆ ಟಾಕ್ ಶುರುವಾಗಿದ್ದು. ದೇವಕಿ ಸಿನಿಮಾ ಟೀಸರ್‌ನಲ್ಲಿ ನೈಜ ದೃಶ್ಯದ ರೀತಿಯಲ್ಲೇ ತೊರಿಸಿದ್ದಾರೆ ಚಿತ್ರ ನಿರ್ದೇಶಕ ಲೋಹಿತ್. ಈ ಹಿಂದೆ ಮಮ್ಮಿ ಸಿನಿಮಾ ನಿರ್ದೇಶನ ಮಾಡಿದ್ದು ಅದರಲ್ಲೂ ಪ್ರಿಯಾಂಕ ನಾಯಕಿ ಆಗಿ ಅಭಿನಯಿಸಿದ್ದಾರೆ.
Comments