ಅಂಬಿ ಅಭಿಮಾನಿಯ ಕಥೆ ಸಿನಿಮಾವಾಗ್ತಿದೆ..!! ಕಥೆಗೆ ನಾಯಕನ್ಯಾರು..?
ಸ್ಯಾಂಡಲ್’ವುಡ್ ನಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ಸಾಕಷ್ಟಿವೆ.. ನವ ನಿರ್ದೇಶಕರು ವಿಭಿನ್ನ ಕಥೆಗಳನ್ನು ಇಟ್ಟುಕೊಂಡು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ… ಅದೇ ಸಾಲಿಗೆ ಸೇರುವ ಮತ್ತೊಂದು ಚಿತ್ರ ಎಂದರೆ ಅದು ಪತಿಬೇಕು ಡಾಟ್ ಕಾಮ್.. ಈ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು ರಾಕೇಶ್.. ಈ ನವಿರಾದ ಕಥೆಯನ್ನು ಎಳೆಯಾಗಿ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಕಾರಣದಿಂದಲೇ ರಾಕೇಶ್ ಮುಂದೆ ಯಾವ ಸಿನಿಮಾವನ್ನು ನಿರ್ದೇಶನ ಮಾಡಬಹುದು ಎಂಬ ಪ್ರಶ್ನೆ ಸಿನಿ ರಸಿಕರಲ್ಲಿ ಕಾಡದೆ ಇರಲಾರದು..
ಹೌದು ರಾಕೇಶ್ ನ ಮುಂದಿನ ಸಿನಿಮಾ ಗೆ ಈಗಾಗಲೇ ಟೈಟಲ್ ಫಿಕ್ಸ್ ಆಗಿದೆ.. ರಾಕೇಶ್ ಅವರ ಮುಂದಿನ ಚಿತ್ರಕ್ಕೆ ‘ಫ್ಯಾನ್ ಆಫ್ ರೆಬೆಲ್ ಸ್ಟಾರ್’ ಎಂಬ ಟೈಟಲ್ ನಿಗಧಿ ಪಡಿಸಿದ್ದಾರೆ. ಹೆಸರೇ ಹೇಳುವಂತೆ ಇದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರವಾಗಿದೆ. ಈ ಸಿನಿಮಾ ರೆಬಲ್ ಸ್ಟಾರ್ ಅವರ ಉಸಿರಿನಂತಿದ್ದ ಮಂಡ್ಯದ ಮಣ್ಣಲ್ಲಿಯೇ ನಡೆಯುತ್ತದೆ. ಚಿತ್ರೀಕರಣವನ್ನು ಕೂಡ ಮಂಡ್ಯದಲ್ಲಿಯೇ ಮಾಡಲೂ ರಾಕೇಶ್ ಫ್ಲ್ಯಾನ್ ಮಾಡಿದ್ದಾರೆ.
ಆದರೆ ಈ ಸಿನಿಮಾದಲ್ಲಿ ಅಂಬಿ ಅಭಿಮಾನಿಯಾಗಿ ನಟಿಸುತ್ತಿರುವವರು ಯಾರು ಎಂಬುದನ್ನು ಮಾತ್ರ ನಿರ್ದೇಶಕ ರಾಕೇಶ್ ಇನ್ನೂ ತಿಳಿಸಿಲ್ಲ..ಈ ಚಿತ್ರದ ಹೀರೋ ಅಂಬರೀಶ್ ಆಪ್ತ ವಲಯದಲ್ಲಿದ್ದವರು ಅನ್ನೋದರ ಹೊರತಾಗಿ ಬೇರೆ ಯಾವ ಸುಳಿವೂ ಕೂಡ ಸಿಕ್ಕಿಲ್ಲ… ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾವೇ ರೆಬಲ್ ಸ್ಟಾರ್ ಅವರ ಕೊನೆಯ ಸಿನಿಮಾ ವಾಗಿತ್ತು.. ಅವರ ಹೆಸರಲ್ಲಿ ಮತ್ತೊಂದು ಸಿನಿಮಾ ಬರುತ್ತಿರುವುದು ಅಭಿಮಾನಿಗಳಿಗೆ ಖುಷಿಯನ್ನು ಕೊಟ್ಟಿದೆ.
Comments