ಪ್ರಿನ್ಸ್ ಮಹೇಶ್ ಬಾಬು ಜೊತೆ ನಟಿಸಲು ‘ನೋ’ ಎಂದ ಕನ್ನಡದ ಸ್ಟಾರ್ ನಟ..!!

ಇತ್ತಿಚಿಗೆ ಸ್ಯಾಂಡಲ್’ವುಡ್ ಮಂದಿ ಪರಭಾಷೆಗಳತ್ತ ಮುಖ ಮಾಡುತ್ತಿದ್ದಾರೆ.. ಪರಭಾಷೆಯಲ್ಲಿ ಅವಕಾಶ ಸಿಗುವುದೆ ದೊಡ್ಡ ವಿಷಯ ಎನ್ನುತ್ತಾರೆ.. ಅಂತಹುದರಲ್ಲಿ ತೆಲುಗು ಇಂಡಸ್ಟ್ರಿಯವರು ಕರೆದರೆ ಇಲ್ಲೊಬ್ಬ ಸ್ಟಾರ್ ನೋ ಎಂದಿದ್ದಾರೆ.. ಸ್ಯಾಂಡಲ್ ವುಡ್ ನವರು ನಟ ನಟಿಯರಿಗೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡಿ ಸೈ ಎನಿಸಿಕೊಳ್ಳಬೇಕು ಎಂಬ ಭಾಷೆ ಇರುತ್ತದೆ.. ಸಾಕಷ್ಟು ಸ್ಯಾಂಡಲ್ ವುಡ್ ಮಂದಿ ಈಗಾಗಲೇ ತೆಲುಗು ಸಿನಿಮಾದತ್ತ ಮುಖ ಮಾಡಿದ್ದಾರೆ. ಆದರೆ ರಿಯಲ್ ಸ್ಟಾರ್ ಉಪೇಂದ್ರ ಮಾತ್ರ ತೆಲುಗು ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.
ಅಂದಹಾಗೇ ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬೇರೆ ಇಂಡಸ್ಟ್ರಿಯವರ ಜೊತೆಯೂ ಕೂಡ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ.. ಬೇರೆ ಇಂಡಸ್ಟ್ರಿಯ ಸ್ಟಾರ್ ಗಳ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ಉಪೇಂದ್ರ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿಯೇ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮಲ್ಟಿ ಸ್ಟಾರ್ ಸಿನಿಮಾ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತಂತೆ...
ಅದ್ಯಾಕೋ ಗೊತ್ತಿಲ್ಲ ಉಪ್ಪಿ ಬೇರೆ ಭಾಷೆಯಲ್ಲಿ ನಟಿಸಲು ಮನಸ್ಸು ಮಾಡಲೇ ಇಲ್ಲ. ಆ ಚಿತ್ರವನ್ನು ಕೂಡ ರಿಜೆಕ್ಟ್ ಮಾಡಿದರು. ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ನಟಿಸಲು ಉಪ್ಪಿಯನ್ನು ಕೇಳಿದರೆ ಅದಕ್ಕೂ ಕೂಡ ಉಪ್ಪಿ'ನೋ' ಎಂದಿದ್ದಾರೆ. ಉಪ್ಪಿ ರಾಜಕೀಯಕ್ಕೆ ಬಂದ ನಂತರ ಸಿನಿಮಾ ಕಡೆ ಅಷ್ಟೊಂದು ಒಲವು ತೋರಿಸುತ್ತಿಲ್ಲ. ಉಪೇಂದ್ರ ಪ್ರಜಾಕೀಯ ಪಕ್ಷದ ಚಟುವಟಿಕೆಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಉಪ್ಪಿ 'ಐ ಲವ್ ಯೂ ' ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಜಾಕೀಯ ಪಕ್ಷದಲ್ಲಿ ಯಾವ ಸೆಲೆಬ್ರೆಟಿಗಳು ಕೂಡ ಇರುವುದಿಲ್ಲ.. ಇಲ್ಲಿ ಕಾಮನ್ ಮ್ಯಾನ್ ಗಳಿಗಷ್ಟೆ ಅವಕಾಶ ಎಂದಿದ್ದಾರೆ.
Comments