‘ನೀವೂ ಹುಟ್ಟಿದ ಮೇಲೆ ನಿಮ್ಮ ತಾಯಿ ‘ಹಾಟ್’ ಆಗಿಯೇ ಕಾಣ್ತಿದ್ರಾ’ : ಸಿಡಿದೆದ್ದಿದ್ಯಾಕೆ ಖ್ಯಾತ ನಟಿ..?!!!

ಅಂದಹಾಗೇ ಸ್ಟಾರ್’ ನಾಯಕಿಯರು ಸುಖಾಸುಮ್ಮನೇ ಟ್ರೋಲ್ ಆಗುತ್ತಾರೆ. ನಟಿಯರು ಹಾಕಿರುವ ಫೋಟೋ, ವಿಡಿಯೋಗಳಿಂದ ನೆಟ್ಟಿಗರ ಬಾಯಿಗೆ ಆಹಾರವಾಗಿ ಬಿಡುತ್ತಾರೆ. ಸಮೀರಾ ನೆನಪಿರ ಬೇಕಲ್ಲವೇ....ಸುದೀಪ್ ಅಭಿನಯದ ಕನ್ನಡ ಸಿನಿಮಾ ವರದನಾಯಕ ಹೀರೋಯಿನ್ ಸಮೀರಾ ರೆಡ್ಡಿ ಯವರು ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದಾರೆ. 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ವರಿಸಿದ ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.
ಸದ್ಯ ಎರಡನೇ ಮಗುವಿಗೆ ಗರ್ಭಿಣಿಯಾಗಿರುವ ಸಮೀರಾ ತಮ್ಮ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅವರ ತೂಕಈ ಗ ಹೆಚ್ಚಾಗಿದೆ, ಫೋಟೋ ನೋಡಿದ ಕೆಲವರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಸಮೀರಾ ದೇಹ ಶೇಪ್ ಬಗ್ಗೆ ಮಾತನಾಡಿದ್ದಾರೆ. ಟ್ರೋಲಿಗರಿಗೆ ಪ್ರತಿಕ್ರಿಯಿಸಿದ ಸಮೀರಾ “ನೀವು ಕೂಡ ನಿಮ್ಮ ತಾಯಿಯ ಗರ್ಭದಿಂದ ಜನಿಸಿದ್ದೀರಾ….? ಆಗ ನಿಮ್ಮ ತಾಯಿಯ ದೇಹ ಪರ್ಫೆಕ್ಟ್ ಆಗಿ ಇತ್ತಾ?. ನೀವು ಜನ್ಮ ಪಡೆದ ನಂತರ ನಿಮ್ಮ ತಾಯಿಯ ಬಳಿ ಈ ರೀತಿ ಪ್ರಶ್ನೆ ಕೇಳಿದ್ದೀರಾ? ಈಗಲೂ ನಿಮ್ಮ ತಾಯಿ ಹಾಟ್ ಆಗಿ,, ಅದೇ ಗ್ಲಾಮರ್ ನಿಂದ ಕೂಡಿದ್ದಾರಾ ಎಂದು ಖಾರವಾಗಿ ಕೇಳಿದ್ದಾರೆ. ಗರ್ಭ ಧರಿಸುವುದು ನೈಸರ್ಗಿಕ ಪ್ರಕ್ರಿಯೆ. ಜನ್ಮ ನೀಡಿದ ಮೇಲೆ ಯಾರೂ ಅದೇ ಗ್ಲಾಮರ್ ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದಿದ್ದಾರೆ.ಕರೀನಾ ಕಪೂರ್ ರಂತೆ ಮಗುವಿಗೆ ಜನ್ಮ ನೀಡಿ ಹಾಟ್ ಆಗಿ ಕಾಣಿಸಲು ಸಾಧ್ಯವಿಲ್ಲ ಎಂದು ಹೇಳಿ ಟ್ರೋಲರ್ಸ್‍ಗೆ ಚಳಿ ಬಿಡಿಸಿದ್ದಾರೆ. ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರವಾಗಿರುವ ಸಮೀರಾ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
Comments