ಕುರುಕ್ಷೇತ್ರ ಸಿನಿಮಾಗಷ್ಟೆ ಅಲ್ಲ..!! ಹರಿಪ್ರಿಯಾ, ಉಪೇಂದ್ರ ಚಿತ್ರಕ್ಕೂ ಎದುರಾಯ್ತು ರಿಲೀಸ್ ಸಮಸ್ಯೆ..!!!

ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾದ ಹಿನ್ನಲೆಯಲ್ಲಿಯೇ ನೀತಿ ಸಂಹಿತೆ ಜಾರಿಯಾಗಿದೆ.. ಹಾಗಾಗಿಯೇ ಸ್ಯಾಂಡಲ್ ವುಡ್ ಬಹು ನೀರಿಕ್ಷಿತ ಸಿನಿಮಾವಾದ ಕುರುಕ್ಷೇತ್ರ ಚಿತ್ರಕ್ಕೂ ಕೂಡ ಬ್ರೇಕ್ ಬಿದ್ದಿದೆ.. ಈ ಸಿನಿಮಾದಲ್ಲಿ ನಿಖಿಲ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ… ಮಂಡ್ಯ ಲೋಕಸಭಾ ಅಖಾಡದಿಂದ ನಿಖಿಲ್ ಕಣಕ್ಕೆ ಇಳಿಯುತ್ತಿದ್ದಾರೆ.. ಹಾಗಾಗಿ ಕುರುಕ್ಷೇತ್ರ ಸಿನಿಮಾಗೂ ಕೂಡ ನೀತಿಸಂಹಿತೆ ಜಾರಿಯಾಗಿದೆ..
ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ಮತ್ತು ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಸಿನಿಮಾಗಳ ಪ್ರಚಾರವನ್ನು ಈ ಸಂದರ್ಭದಲ್ಲಿ ಇದೀಗ ಮಾಡುವಂತಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲು ತಯಾರಾಗಿರುವ ನಿಖಿಲ್ ಕುಮಾರ್ ಮತ್ತು ಸುಮಲತಾ ಅಭಿನಯದ ಯಾವ ಚಿತ್ರಗಳು ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ. ನಿಖಿಲ್ ಅಭಿನಯದ ಕುರುಕ್ಷೇತ್ರ ಏಪ್ರಿಲ್ 5ಕ್ಕೆ ತೆರೆಗೆ ತರುವ ತಯಾರಿ ನಡೆಸಿದ್ದರು ನಿರ್ಮಾಪಕ ಮುನಿರತ್ನ. ಆದ್ರೆ, ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಕುರುಕ್ಷೇತ್ರ ಬಿಡುಗಡೆಗೆ ಇದೀಗ ಬ್ರೇಕ್ ಬಿದ್ದಿದೆ. ದರ್ಶನ್ ಅಭಿಮಾನಿಗಳು ಈ ವಿಷಯದಿಂದ ನಿರಾಸೆಯಾಗಿದೆ..
ಸುಮಲತಾ ಮತ್ತು ನಟಿ ಹರಿಪ್ರಿಯಾ ಅಭಿನಯದ 'ಡಾಟರ್ ಅಫ್ ಪಾರ್ವತಮ್ಮ' ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದೆ.. ಆದರೆ ಸುಮಲತಾ ಕೂಡ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸೂಚನೆ ನೀಡಿರುವುದರಿಂದ ಸದ್ಯಕ್ಕೆ ಈ ಚಿತ್ರದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಲಿದೆ.
ರಿಯಲ್ ಸ್ಟಾರ್ ಉಪೇಂದ್ರ ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ.. ಉಪ್ಪಿ ಮತ್ತು ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಸಿನಿಮಾಗೂ ಕೂಡ ಎಲೆಕ್ಷನ್ ಬಿಸಿ ತಟ್ಟಲಿದೆ. ಪ್ರಜಾಕೀಯ ಪಕ್ಷದ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ ನಿಲ್ಲಿಸುವ ತಯಾರಿ ನಡೆಸುತ್ತಿರುವ ಉಪೇಂದ್ರ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದ್ರೆ, ತಮ್ಮ ಪಕ್ಷ ಎಲೆಕ್ಷನ್ ನಲ್ಲಿ ಭಾಗಿಯಾಗುತ್ತಿರುವ ಕಾರಣ ಉಪ್ಪಿಯ ಐ ಲವ್ ಯೂ ಚಿತ್ರವೂ ಸದ್ಯಕ್ಕೆ ರಿಲೀಸ್ ಆಗುವುದು ಅನುಮಾನವಾಗಿದೆ.. ಒಟ್ಟಾರೆ ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ ಗಳಿಗೆ ಎಲೆಕ್ಷನ್ನಿಂದಾಗಿ ಬ್ರೇಕ್ ಬಿದ್ದಂತೆ ಆಗಿದೆ..,ಚುನಾವಣೆ ಮುಗಿಯುವವರೆಗೂ ಕೂಡ ಇವರ ಯಾವ ಸಿನಿಮಾಗಳು ಕೂಡ ಬಿಡುಗಡೆಯಾಗುವಂತಿಲ್ಲ..
Comments