ಮದುವೆಯಾಗಿದ್ದೀನಿ, ಆದ್ರೂ ನಾನು ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೇನೆಂದ ಖ್ಯಾತ ನಟಿ…!!!

13 Mar 2019 8:30 AM | Entertainment
12118 Report

ನಾಯಕಿಯರಿಗೆ ಮದುವೆಯಾದ್ರೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತವೆ ಎಂಬ ಮಾತಿದೆ. ಕೆಲ ನಟಿಯರ ಜೀವನದಲ್ಲೂ ಅದೇ ರೀತಿ  ನಡೆದಿದ್ದೂ ಇದೆ,  ಅದಕ್ಕೆ ಕಾರಣವೂ ಇದೆ. ಏಕೆಂದರೆ ನಟಿಯರಿಗೆ ಪಾತ್ರ ಮಾಡಲು ಕೆಲ ಕಂಡಿಷನ್’ಗಳಿರುತ್ತವೆ. ಗಂಡ, ಫ್ಯಾಮಿಲಿ ಅಂತಾ ಬೇಜಾನ್ ರೀಸನ್ ಗಳಿರುತ್ತವೆ. ಆದರೆ ಇದಕ್ಕೆ ಕೆಲ ಹೀರೋಯಿನ್ಗಳು ತದ್ವಿರುದ್ಧ, ಮದುವೆಯಾದ್ರೆ ಏನಂತೆ….? ನಾವು ಯಾವ ಪಾತ್ರ ಮಾಡಕ್ಕೂ ರೆಡಿ ಅಂತಾರೆ. ಅಷ್ಟೇ ನಮ್ಮ ಗ್ಲಾಮರ್, ಬ್ಯೂಟಿ ಇರೋತನ ನಮ್ಮ ಟ್ಯಾಲೆಂಟ್ ನ್ನು ಪರದೆ ಮೇಲೆ ತೋರಿಸಲು ನಾವು ಸಿದ್ಧರಾಗಿದ್ದೇವೆ ಎನ್ನುತ್ತಾರೆ. ಅಂತಹ ಹೀರೋಯಿನ್’ಗಳ ಪೈಕಿ ನಟಿ ಸ್ವಾತಿ ಕೂಡ ಒಬ್ಬರು.

ಅಂದಹಾಗೇ ಹಾಟ್ ಸಿನಿಮಾಗಳಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದ ನಟಿ ಸ್ವಾತಿ ನಾಯ್ಡು ಕಳೆದ ತಿಂಗಳು 23 ರಂದು ತನ್ನ ಸ್ನೇಹಿತ  ಅವಿನಾಶ್ ಜೊತೆ ಸಪ್ತಪದಿ ತುಳಿದಿದ್ದರು. ಹೀಗೇ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ವಯಸ್ಕರ ಸಿನಿಮಾದಿಂದಾಗಿ ಗುರುತಿಸಿಕೊಂಡಿದ್ದೇನೆ. ನಾನು ಮುಂದೆಯೂ  ಅಂತಹ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತೀನಿ. ಅದರಲ್ಲಿ, ತಪ್ಪೇನು, ನನ್ನ ಪತಿ ನನ್ನ ಕೆಲಸಕ್ಕೆ ಗೌರವಿಸುತ್ತಾರೆ. ಮದುವೆಯ ಬಳಿಕವೂ ನಾನು ಗ್ಲಾಮರ್ ಆಗಿ  ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ. ವಯಸ್ಕರ ಚಿತ್ರಗಳಲ್ಲಿ ನಟಿಸುವುದು ನನ್ನ ವೃತ್ತಿಯಾಗಿರುವುದರಿಂದ ಅದರಲ್ಲಿ ನಟಿಸುವುದು ತಪ್ಪಲ್ಲ. ಕ್ರಿಕೆಟಿಗರು ಜರ್ಕಿನ್ ಧರಿಸಿ ಆಡುವಂತೆ ನಾನು ಹಾಟ್ ಸೀನ್‌ಗಳಲ್ಲಿ ಹಾಟ್ ಹಾಟ್ ಆಗಿ ನಟಿಸುತ್ತೇನೆ ಎಂದಿದ್ದಾರೆ.

ಅಂದಹಾಗೇ ಸ್ವಾತಿ ನಾಯ್ಡು ತೆಲುಗು ಸಿನಿಮಾದ ನಟಿ. ತನ್ನ ಸ್ನೇಹಿತ ಅವಿನಾಶ್  ಜೊತೆ ಒಂದಷ್ಟು ತಿಂಗಳು ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಇಟ್ಟುಕೊಂಡಿದ್ದ ಇವರು,  ಬಳಿಕ ಮದುವೆಯಾಗಿದ್ದಾರೆ. ಅಂದಹಾಗೇ ತಮ್ಮ ಲವ್ ವಿಚಾರ ಮಾತನಾಡಿದಾಗ ನನ್ನ ಪೋಷಕರು ಮೊದ ಮೊದಲು ಒಪ್ಪಿಕೊಳ್ಳುವುದು ಬಹಳ ಕಷ್ಟವಾಯ್ತ, ಒಬ್ಬಳೇ ಮಗಳಾದ್ದರಿಂದ  ಅವರ ಮನಸನ್ನು ನಾನು ಬದಲಾಯಿಸಿ ಒಪ್ಪಿಕೊಳ್ಳುವಂತೆ ಮಾಡಿದೆ ಎಂದು ಸ್ವಾತಿ ತಿಳಿಸಿದ್ದಾರೆ. ಅವಿನಾಶ್ ಮನೆಯವರು ಕೂಡ ನನ್ನನ್ನು ವಿರೋಧಿಸುತ್ತಿದ್ದರು. ಆದಾಗ್ಯೂ ನೀವು ನನ್ನನ್ನು ಪ್ರೀತಿಸುತ್ತಿದ್ದರೆ ವಿವಾಹವಾಗಿ ಎಂದಾಗ ಅವರು ನನ್ನನ್ನು ವಿವಾಹವಾದರು ಎಂದು ಮಾಹಿತಿ ನೀಡಿದ್ದಾರೆ.ನನಗೆ ಮತ್ತು ಅವಿನಾಶ್ ಗೆ ಪರಸ್ಪರ ಪ್ರೀತಿಯ ಪಾಲುದಾರರು ಸಿಕ್ಕಿದ್ದಾಗಿದೆ. ಖಂಡಿತಾ ಅವರು ಬಯಸುವ ಪ್ರೀತಿಯನ್ನು ನಾನು ಕೊಡುತ್ತೇನೆ, ನಾನು ಬಯೋಸದನ್ನು ಅವರು ಕೊಡುತ್ತಾರೆ ಎಂದು ಸ್ವಾತಿ ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments