‘ಅಮ್ಮ ಕೊಟ್ಟ ನಿಂಬೆಹಣ್ಣು ಇಟ್ಟುಕೊಂಡೇ ಸ್ಮಶಾನಕ್ಕೆ ಹೋಗ್ತಿದ್ದೆ’ : ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ…

ಅಂದಹಾಗೇ ನಟಿ ರಾಧಿಕಾ ಅವರು ತಮ್ಮ ಬಹು ನಿರೀಕ್ಷಿತ ಸಿನಿಮಾ ದಮಯಂತಿ ಸಿನಿಮಾ ಶೂಟಿಂಗ್’ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಬ್ಯುಸಿ ನಡುವೆ ರಾಧಿಕಾ ಸಂಬಂಧ ಮತ್ತೊಂದು ನ್ಯೂಸ್ ಹರಿದಾಡಿತ್ತು. ಅದೇನೆಂದರೆ ಚಿತ್ರೀಕರಣ ಮಾಡುವಾಗ ಆಗಾಗ್ಗ ರಾಧಿಕಾ ಅವರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವುದೋ ದುಷ್ಟ ಶಕ್ತಿ ಪ್ರಭಾವವಿದೆ ಎಂದು. ಹೇಳಿ ಕೇಳಿ ಸಿನಿಮಾ ಕಥೆಗೆ, ಸ್ಮಶಾನದಲ್ಲಿ ಚಿತ್ರೀಕರಣವಿತ್ತು. ಅಂದಹಾಗೇ ಶೂಟಿಂಗ್ ವೇಳೆ ರಾಧಿಕಾ ಸ್ಮಶಾನದಲ್ಲಿ ಒಂದೆರಡು ಬಾರಿ ಅಚಾನಕ್ ಆಗಿ ಬಿದ್ದಿದ್ದರಂತೆ. ಆದರೆ ಅಲ್ಲಿದ್ದವರು ಸ್ಮಶಾನದಲ್ಲಿ ಹಾಗೆಲ್ಲಾ ಬೀಳಬಾರದು, ಇದಕ್ಕೊಂದು ಶಾಂತಿ ಮಾಡಿಸಬೇಕು. ಬಿದ್ದಿದ್ದರ ಪರಿಣಾಮ ನೀವು ಏನಾದ್ರೂ ಪೂಜೆ ಮಾಡಿಸಿ ಎಂದಿದ್ದರಂತೆ, ಅದರಂತೆ...
ಸ್ಮಶಾನದಲ್ಲಿ ರಾಧಿಕಾ ಅವರು ಬಿದ್ದಿರುವ ಬಗ್ಗೆ ದೊಡ್ಡ ಸುದ್ದಿಯಾಗಿತ್ತು.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಧಿಕಾ ಅವರು ಅಂದು ಶಾಂತಿನಗರ ಸ್ಮಶಾನದಲ್ಲಿ ಶೂಟಿಂಗ್ ವೇಳೆ ನಡೆದ ಅವಘಡದಿಂದ ನಾನು ಡೈಲಾಗ್ ಹೇಳುತ್ತಾ ಕ್ಯಾಮರಾ ನೋಡುತ್ತಿದ್ದೆ, ಹಾಗಾಗಿ ಬಿದ್ದು ಬೆನ್ನಿಗೆ ಪೆಟ್ಚಾಯಿತು. ಕೇವಲ ಎರಡು ದಿನಗಳಷ್ಟೇ ನಾನು ರೆಸ್ಟ್ನಲ್ಲಿದ್ದೆ, ಈಗ ಎಂದಿನಂತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.ಅಂದಹಾಗೇ ನನಗೆ ಯಾವ ತೊಂದರೆಯೂ ಆಗಿಲ್ಲ, ಕ್ಯಾಮೆರಾ ನೋಡುತ್ತಿದ್ದೆ, ಅಚಾನಕ್ ಆಗಿ ಬೀಳುತ್ತಿದ್ದೆ. ಇದೇನು ಎಂದು ಅರ್ಥವಾಗಿಲ್ಲ. ಆದರೆ ಅಮ್ಮ ಸ್ಮಶಾನದಲ್ಲಿ ಶೂಟಿಂಗ್ ಇದ್ದ ವೇಳೆ ಅಮ್ಮ ನನಗೆ ಪೂಜೆ ಮಾಡಿಸಿದ ನಿಂಬೆ ಹಣ್ಣು ಕೊಟ್ಟಿದ್ದರು. ನಾನು ಅದನ್ನು ಶೂಟಿಂಗ್ ಇದ್ದ ದಿನ ತೆಗೆದುಕೊಂಡು ಹೋಗುತ್ತಿದ್ದೆ. ಇದರ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ಅಮ್ಮನಿಗಾಗಿ ನಾನು ತೆಗೆದುಕೊಂಡು ಹೋಗುತ್ತಿದ್ದೆ ಎಂದಿದ್ದಾರೆ ರಾಧಿಕಾ. ಶೂಟಿಂಗ್ ವೇಳೆ ಬಿದ್ದು ಗಾಯ ಮಾಡಿಕೊಂಡ ಕುಮಾರಸ್ವಾಮಿಗೆ ಡಾಕ್ಟರ್ ವಿಶ್ರಾಂತಿಯ ಸಲಹೆ ನೀಡಿದ್ದರು. ಸದ್ಯ ವಿಶ್ರಾಂತಿಯ ನಂತರ ಮತ್ತೆ ರಿಟರ್ನ್ ಆಗಿದ್ದಾರೆ. ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Comments