ದೀರ್ಘ ಮಾತುಕತೆಯಲ್ಲಿ ರಾಕಿಂಗ್ ಸ್ಟಾರ್, ಸುಮಲತಾಗೆ ಹೇಳಿದ್ದೇನು : ಫೈನಲ್ ನಿರ್ಧಾರ….?!!!
ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದ ಹಿಂದೆ ಸರಿಯುತ್ತಾರೆ ಎಂಬ ವದಂತಿಗೆ ನಟಿ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಸುಮಲತಾಗೆ ಕನ್ನಡದ ಕೆಜಿಎಫ್ ಕಿಂಗ್ ಯಶ್ ಸಾಥ್ ಕೂಡ ಇದೆ. ಈಗಾಗಲೇ ದರ್ಶನ್ ರನ್ನು ನನ್ನ ದೊಡ್ಡ ಮಗ ಎಂದಿರುವ ಸುಮಲತಾ, ಯಶ್ ಕೂಡ ನನ್ನ ಜೊತೆಯೇ ಇರುತ್ತಾರೆ. ಮಂಡ್ಯದ ಸೊಸೆಯಾಗಿ ನಾನು ಏನು ಮಾಡಬೇಕೋ ಅದನ್ನು ನಾನು ಮಾಡ್ತೀನಿ, ಅದಕ್ಕೆ ಈಗ ನನ್ನ ಕಿರಿಮಗ ಯಶ್. ಅವರು ಕೂಡ ಸಾಥ್ ಕೊಡುತ್ತಿದ್ದಾರೆ. ಇವರೆಲ್ಲಾ ನನ್ನ ಹಿಂದೆ ಇರೋದರಿಂದ ನನಗೆ ಯಾವ ಭಯವೂ ಇಲ್ಲ. ಅವರಿಬ್ಬರು ನನಗೆ ಆನೆಬಲ ಇದ್ದಂತೆ ಎಂದಿದ್ದರು.
ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ತಾವು ಸುಮಲತಾ ಅವರಿಗೆ ಚುನಾವಣೆಯಲ್ಲಿ ಬೆಂಬಲ ಕೊಡುವುದಾಗಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲದೇ ಇದ್ದರೂ, ಅಭಿಷೇಕ್ ಮತ್ತು ಅಂಬರಿಶ್ ಜೊತೆ ಯಶ್ ಗಿದ್ದ ಆತ್ಮೀಯತೆ, ಮತ್ತು ಪ್ರೀತಿಯಿಂದ ಯಶ್ ಅವರು ಖಂಡಿತಾ ಸುಮಲತಾಗೆ ಸಪೋರ್ಟ್ ಮಾಡ್ತಾರೆ ಎಂಬುದೇ ಸಹಜವಾಗೇ ಅಭಿಪ್ರಾಯ ಇತ್ತು.ಇಂದು ಸುಮಲತಾರನ್ನು ಖುದ್ದು ಯಶ್ ಅವರೇ ಭೇಟಿ ಮಾಡಿ, ಮಾತುಕತೆ ನಡೆಸಿದರು. ನಿನ್ನೆ ಬೆಂಗಳೂರಿನ ಪ್ರೆಸ್ಟಿಜ್ ಅಪಾರ್ಟ್‌ಮೆಂಟ್‌ನಲ್ಲಿ ಯಶ್ ಮತ್ತು ಸುಮಲತಾ ಭೇಟಿಯಾಗಿದ್ದಾರೆ. ಆದರೆ....
ಈ ವೇಳೆ ಲೋಕಸಭೆ ಚುನಾವಣೆ ಬಗ್ಗೆ ಇಬ್ಬರೂ ಸುಮಾರು 4 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಏನು ಮಾತನಾಡಿದ್ದಾರೆ ಎಂಬ ಖಚಿತ ಮಾಹಿತಿ ಇಲ್ಲದಿದ್ದರೂ, ಅವರು ಖಂಡಿತಾ ಕ್ಯಾಂಪೇನ್ಗೆ ಒಂದು ತಯಾರಿ ನಡೆಸಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ಯಶ್ ಮತ್ತು ದರ್ಶನ್ ಅಭಿಮಾನಿಗಳ ಬಳಗವಿದೆ. ಇದರಿಂದ ಸುಮಲತಾ ಅವರಿಗೆ ಖಂಡಿತಾ ಸಪೋರ್ಟ್ ಸಿಗುತ್ತೆ ಎಂಬುದು ಮೇಲ್ನೋಟಕ್ಕೆ ಗೊತ್ತಾದ್ರೂ ಆ ನಾಲ್ಕು ಗಂಟೆಗಳ ಅವಧಿಯಲ್ಲಿ ಬೇರೆ ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ನಟಿ ಸುಮಲತಾ ಎಂಬುದು ಕಾದು ನೋಡಬೇಕಿದೆ.ಮಂಡ್ಯದಲ್ಲೂ ಯಶ್ಗೆ ಜೆಡಿಎಸ್ ನಾಯಕರ ಜೊತೆ ಒಳ್ಳೆ ಸಂಬಂಧವಿದೆ. ಆದರೆ ಅಂಬಿ ಮನೆಯವರ ಜೊತೆ ಇದ್ದ ಯಶ್ ಸಂಬಂಧ ಇದೀಗ ರಾಜಕೀಯವಾಗಿ ಏನಾಗುತ್ತೋ..ಒಟ್ಟಾರೆ ಯಶ್ ಅಧಿಕೃತವಾಗಿ ಎಲ್ಲಿಯೂ ರಾಜಕೀಯವಾಗಿ ಅಥವಾ ಸುಮಲತಾ ವಿಚಾರವಾಗಿ ಹೇಳಿಕೆ ನೀಡಿಲ್ಲ. ಆದರೂ ನಿಖಿಲ್ ಕುಮಾರಸ್ವಾಮಿ ಜೊತೆ ಅವರಿಗೆ ಒಳ್ಳೆ ಸ್ನೇಹವಿದೆ. ಇದರ ನಡುವೆ ಸುಮಲತಾ ರಾಜಕೀಯ ಪ್ರವೇಶ ಯಶ್’ಗಾಗಲೀ ದರ್ಶನ್’ಗಾಗಲೀ, ಸುದೀಪ್’ಗಾಗಲೀ ಇಕ್ಕಟ್ಟಿನ ಪರಿಸ್ಥಿತಿ ತಂದಿರೋದಂತೂ ನಿಜ.
Comments