ಅಪ್ಪ ಆಗ್ತಿದ್ದಾರೆ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ : ಸೀಮಂತ ಸಂಭ್ರಮದಲ್ಲಿ ಸಿರಿಯಲ್ ನಟಿ…!!!
ಶನಿವಾರ ಮತ್ತು ಭಾನುವಾರ ಬಂದ್ರೆ ಆ ರಿಯಾಲಿಟಿ ಶೋ ನೋಡೋಕೆ ಜನ ಕಾತುರರಾಗಿರುತ್ತಾರೆ. ನಕ್ಕು ನಗಿಸೋ ಆ ನಟನೆಂದರೆ ಅಭಿಮಾನಿಗಳಿಗೆ ಅಚ್ಚು-ಮೆಚ್ಚು. ಅಂದಹಾಗೇ ಕನ್ನಡ ಕಿರುತೆರೆಯ ಮೋಸ್ಟ್ ಫೇವರೆಬೆಲ್ ಶೋ ಮಜಾ ಟಾಕೀಸ್'ನ ನಿರೂಪಕ ಸೃಜನ್ ಲೋಕೇಶ್ ಇದೀಗ ಡಬಲ್ ಖುಷಿಯಲ್ಲಿದ್ದಾರೆ. ಅಂದಹಾಗೇ ನಟ ಸೃಜನ್ ಅವರು ತಾನು ತಂದೆಯಾಗ್ತಿರುವ ಖುಷಿಯಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ.
ಸೃಜನ್ ಲೋಕೇಶ್ ಅವರ ಪತ್ನಿ ಗ್ರೀಷ್ಮಾ ಅವರ ಸೀಮಂತ ಕಾರ್ಯಕ್ರಮ ಸೃಜನ್ ನಿವಾಸದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿದೆ. ಗ್ರೀಷ್ಮಾ ಕೂಡ ಸೀರಿಯಲ್ ನಟಿಯಾಗಿದ್ದು, ಸೃಜನ್ ಕುಟುಂಬ ಕಲಾವಿದರ ಕುಟುಂಬ ಎಂದೇ ಹೆಸರುವಾಸಿಯಾಗಿದೆ. ಗ್ರೀಷ್ಮಾ ಅವರು ಸೀಮಂತ ಕಾರ್ಯಕ್ರಮ ಭಾರೀ ಸಂಭ್ರಮದಿಂದ ನಡೆದಿದೆ. ಆ ಖುಷಿಯ ಕ್ಷಣಗಳ ಫೋಟೋಗಳನ್ನು ನಟಿ ಶ್ವೇತಾ ಚಂಗಪ್ಪ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಸೀರೆಯನ್ನು ಸೃಜನ್ ಲೋಕೇಶ ಪತ್ನಿ ಗ್ರೀಷ್ಮಾ ಅವರು ತಮ್ಮ ಮುದ್ದು ಮಗುವಿಗಾಗಿ ಎದುರು ನೋಡುತ್ತಿದ್ದಾರೆ. ಅಂದಹಾಗೇ ಸ್ನೇಹಿತೆಯ ಸೀಮಂತ ಕಾರ್ಯಕ್ರಮದ ಕೆಲ ಸಂತಸದ ಕ್ಷಣಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಶ್ವೇತಾ ಚಂಗಪ್ಪ ಅವರು, “ನಾವೆಲ್ಲರೂ ಸ್ನೇಹಿತರು, ಒಂದೇ ಕುಟಂಬದವರು ಕೂಡ ಆಗಿದ್ದೇವೆ. ಶ್ರೀಘದಲ್ಲೇ ಈ ಕುಟುಂಬಕ್ಕೆ ಪುಟ್ಟ ಕಂದಮ್ಮ ಬರುತ್ತದೆ. ಅದಕ್ಕಾಗಿ ನಾನು ಕಾಯುತ್ತಿದ್ದೇವೆ. ಐ ಲವ್ ಯೂ ಗ್ರೀಷ್ಮಾ” ಎಂದು ಟ್ವೀಟ್ ಮಾಡಿ ಸೀಮಂತ ಕಾರ್ಯಕ್ರಮದಲ್ಲಿ ತೆಗೆದುಕೊಂಡಿದ್ದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.2010 ರಲ್ಲಿ ನಟಿ ಗ್ರಿಷ್ಮಾ ಅವರನ್ನು ಸೃಜನ್ ಅವರು ಮದುವೆಯಾಗಿದ್ದಾರೆ. ಈಗಾಗಲೇ ಈ ಮುದ್ದು ಜೋಡಿಗೆ ಪುಟ್ಟ ಕಂದಮ್ಮ ಇದೆ.
Comments