ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ..? !
ರಾಜ್ಯಾದ್ಯಂತ ಲೋಕಸಭೆ ಚುನಾವಣೆ ಕಾವು ರಂಗೇರುತ್ತಿದೆ. ಮತ್ತೊಂದು ಕಡೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಫೀವರ್. ಒಂದು ಕಡೆ ರಾಜಕೀಯ ಅಖಾಡ ಸಿದ್ಧಗೊಂಡಿದೆ. ಚುನಾವಣೆಗೆ ಎಲೆಕ್ಷನ್ ಡೇಟ್ ಕೂಡ ಫಿಕ್ಸ್ ಆಗಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದ್ವಿತೀಯ ಏಪ್ರಿಲ್ 23 ಮತ್ತು 24ರಂದು ನಿಗಧಿಯಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಂದೂಡುವ ಸಾಧ್ಯತೆಗಳಿವೆ. ಅಂದಹಾಗೇ ಲೋಕಸಭೆ ಚುನಾವಣೆ ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿದೆ.
ಚುನಾವಣೆ 23 ರಂದು ನಡೆಯಲಿದೆ. ಅದೇ ದಿನ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆಯು ಇರುವುದರಿಂದ ಪರೀಕ್ಷೆಗೆ ಕೂರಲಿರುವ ಅಭ್ಯರ್ಥಿಗಳಿಗೆ ಮತದಾನ ಮಾಡಲು ಅಡ್ಡಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗುವುದು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಡೇಟ್ ಬದಲಾವಣೆಯಾದರೇ ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚು ಅವಧಿ ಸಿಕ್ಕಿದಂತಾಗುತ್ತದೆ.ಕರ್ನಾಟಕ ರಾಜ್ಯ ಮತ್ತು ಹೊರ ರಾಜ್ಯಗಳ ಯುವಕ-ಯುವತಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ ಚುನಾವಣೆ ಮತ್ತು ಪರೀಕ್ಷೆ ಎರಡೂ ಒಂದೇ ದಿನಾಂಕದಲ್ಲಿರುವುದರಿಂದ ಸಿಇಟಿ ಪರೀಕ್ಷೆ ಡೇಟ್ ಬದಲಾಗುವ ಸಾಧ್ಯತೆ ಇದೆ.
Comments