ಪ್ರೀತಿಸಿದವನನ್ನೇ ವರಿಸಿದ 'ಯುವರತ್ನ' ಸಿನಿಮಾ ನಾಯಕಿ....
ಅಂದಹಾಗೇ ಕನ್ನಡ ಸಿನಿಮಾವೊಂದರ ನಾಯಕಿ ತಮಿಳು ನಟನ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ತಮಿಳಿನ ಸೂಪರ್ ಡೂಪರ್ ಸಿನಿಮಾ ರಾಜಾರಾಣಿ ಖ್ಯಾತಿಯ ನಟ ಆರ್ಯ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ 'ಯುವರತ್ನ'ದ ಹೀರೋಯಿನ್ ಸಯ್ಯೇಷಾ ಸೈಗಲ್ ಅವರ ಮದುವೆ ನಿನ್ನೆ ವಿಜೃಂಭಣೆಯಿಂದ ಹೈದರಬಾದ್ ನಲ್ಲಿ ನೆರವೇರಿದೆ. ಸದ್ಯ ಆರ್ಯ ಮತ್ತು ಸಯ್ಯೇಷಾ ಜೋಡಿಯ ಮದುವೆ ಫೋಟೋಶೂಟ್ ಶನಿವಾರವೇ ಅದ್ಧೂರಿಯಾಗಿ ನಡೆದಿದ್ದೂ, ಸಾಮಾಜಿಕ ಜಾಲತಾಣಗಳಲ್ಲಿ ಅವರಿಬ್ಬರ ಪೋಟೋಗಳನ್ನು ಸಯ್ಯೇಶಾ ತಮ್ಮ ಇನ್ಸ್’ಸ್ಟ್ರಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರು ಪ್ಯಾಲೇಸ್‍ನಲ್ಲಿ ರಾಜ-ರಾಣಿ ರೀತಿಯ ಉಡುಪನ್ನು ಧರಿಸಿರುವ ಆರ್ಯ, ಸಯ್ಯೇಷಾ ಕಂಗೊಳಿಸುತ್ತಿದ್ದಾರೆ. ಇವರಿಬ್ಬರ ಮದುವೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿದ್ದು ಕಾಲಿವುಡ್ ಮತ್ತು ಬಾಲಿವುಡ್ನ ನಟ ನಟಿಯರದಂಡೇ ಹಗರಿದು ಬಂದಿದೆ. ಹೈದರಾಬಾದ್‍ನ ತಾಜ್ ಫುಕ್ನಮ್ ಪ್ಯಾಲೇಸ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಹೊಸಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಸಯ್ಯೇಷಾ ಅವರು ನಟ-ನಿರ್ಮಾಪಕ ಸುಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಮಗಳಾಗಿದ್ದು, ಶಹೀನ್ ಅವರು `ಮಹಾ-ಸಂಗ್ರಮ್’ ಮತ್ತು’ ಆಯಿ ಮಿಲಾನ್ ಕಿ ರಾತ್’ ನಂತಹ ಸಿನಿಮಾದಲ್ಲಿ ಹೆಸರುವಾಸಿಯಾಗಿದ್ದಾರೆ.
ಸಯ್ಯೇಷಾ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾ ಮೂಲಕ ಸ್ಯಾಂಡಲ್’ವುಡ್ ಗೆ ಕಾಲಿಟ್ಟಿದ್ದಾರೆ. 2018 ರ `ಘಜಿನಿಕಾಂತ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಯ್ಯೇಷಾ ಅವರು ನಟ ಆರ್ಯರನ್ನು ಭೇಟಿಯಾಗಿದ್ದು, ಅಂದಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳ ಒಪ್ಪಿಗೆ ಸೂಚಿಸಿದ ಮೇರೆಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Comments