ನಟ ಯಶ್ ಕೊಲೆಗೆ ರೌಡಿಗಳು ಸುಪಾರಿ ಪಡೆದಿದ್ದೂ ನಿಜನಾ…! : ರಾಕಿಂಗ್ ಸ್ಟಾರ್ ಶಾಕಿಂಗ್ ಹೇಳಿಕೆ…?!!!

11 Mar 2019 11:05 AM | Entertainment
452 Report

ಅಂದಹಾಗೇ  ಸ್ಯಾಂಡಲ್’ವುಡ್ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆಯಲಾಗಿದೆ ಎಂಬ ಬಗ್ಗೆ ವಿಚಾರ ಹಬ್ಬುತ್ತಿದ್ದಂತೇ  ಇಡೀ ಗಾಂಧಿನಗರವೇ  ಬೆಚ್ಚಿ ಬಿದ್ದಿತ್ತು. ಆ ಸ್ಟಾರ್ ನಟ ಯಾರೆಂಬುದು ಮಾತ್ರ ಇಲ್ಲಿಯವರೆಗೂ ಗೊತ್ತಾಗಿರಲಿಲ್ಲ. ಆದರೆ ಮೊನ್ನೆಯಷ್ಟೇ  ಆ ಸ್ಟಾರ್ ಯಾರೆಂದು ಗೊತ್ತಾಯ್ತು. ಸ್ಟಾರ್ ನಟನ ಕೊಲೆಗೂ ಸುಪಾರಿ ಸುದ್ದಿ ಕೇಳಿ ಸ್ಟಾರ್ ಫ್ಯಾನ್ಸ್ ವಯಯದಲ್ಲಿ ಆತಂಕ ಮನೆ ಮಾಡಿದೆ. ಅಂದಹಾಗೇ ನಟನ ಹತ್ಯೆಗೆ ಸುಪಾರಿ ಪಡೆದಿದ್ದ ರೌಡಿಗಳು ಸದ್ಯ ಅಂದರ್ ಆಗಿದ್ದಾರೆ. ಸುಪಾರಿ ಕೊಟ್ಟಿದ್ದು ಯಾರು ಅಂತಾ ಗೊತ್ತಿಲ್ಲ, ಆದರೆ ಆ ನಟ  ಯಾರೆಂದು ಬಯಲಾಗಿದೆ.  ಆ ಸ್ಟಾರ್ ಬೇರೆ ಯಾರು ಅಲ್ಲಾ...… ರಾಕಿಂಗ್  ಸ್ಟಾರ್ ಯಶ್.

 

ನಟನ ಹತ್ಯೆಗೆ ರೌಡಿಗಳು ಸುಪಾರಿ ಪಡೆದಿದ್ದಾರೆಂಬ ಸುದ್ದಿ ಎಲ್ಲೆಡೆ ಭಿತ್ತರವಾಗುತ್ತಿದ್ದಂತೇ ಯಶ್ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಯಶ್ ಮನೆಯವರು, ಆಪ್ತರು ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಈ ಬಗ್ಗೆ ನಟ ಯಶ್ ಹೇಳಿದ್ದೇನು ಗೊತ್ತಾ..?   ಕೆಲವರು ಸುಪಾರಿ ಹತ್ಯೆಯ ನಟ ಯಶ್ ಅಂತಾ ಭಿತ್ತರ ಮಾಡುತ್ತಿದ್ದಾರೆ, ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಆದರೆ ಇದೇನು ಅಂತಾನೇ ನನಗೆ ಅರ್ಥ ಆಗ್ತಾ ಇಲ್ಲ. ಇದನ್ನು ಕೇಳಿ ನಾನು ಕೂಡ ಶಾಕ್ ಆದೆ. ಆದರೆ ಬಂಧಿತರ ಮೇಲೆ ದಾಖಲಾದ ಎಫ್‍ಐಆರ್ ನ್ನು ನಾನು ನೋಡಿದ್ದೀನಿ, ಅಲ್ಲಿಯೂ ಕೇವಲ ನಟ ಎಂಬುವುದು ಮಾತ್ರ ಉಲ್ಲೇಖಿಸಲಾಗಿದೆ. ಆದರೆ ನಾನು ಅಂತಾ ಹೇಳಿಲ್ಲ. ಈ ರೀತಿ ನನ್ನ ಹೆಸರು ಬಳಕೆ ಮಾಡುವುದರಿಂದ ಆಪ್ತರು ಹಾಗೂ ಕುಟುಂಬಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ನಟ ಯಶ್ ಬೇಸರ ವ್ಯಕ್ತಪಡಿಸಿದರು. ಈಗಾಗಲೇ ನಾನು ಗೃಹಸಚಿವ ಎಂ.ಬಿ ಪಾಟೀಲ್ ಜೊತೆ ಮಾತನಾಡಿದ್ದು, ಅವರು ಸಹ ಆ ನಟ ನಾನು ಅಲ್ಲ ಎಂಬುವುದನ್ನು ಖಚಿತ ಪಡಿಸಿದ್ದಾರೆ.

ನನ್ನ ಮೇಲಿನ ಕಾಳಜಿಯಿಂದ ಸುದ್ದಿಗಳು ಭಿತ್ರವಾಗುತ್ತಿವೆ. ಆದರೆ ನಮ್ಮ ಚಂದನವನದಲ್ಲಿ ನಟನೊಬ್ಬನ ಹತ್ಯೆಗೆ  ಸುಪಾರಿ ಕೊಡುವ ಕಲಾವಿದರು ಇಲ್ಲ. ಇಂತಹ ಸುದ್ದಿಗಳಿಂದ ಚಂದನವನದ ವಾತವರಣ ಹಾಳಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ನನಗೆ ಬೆದರಿಕೆ ಕರೆಗಳು ಬಂದಿಲ್ಲ. ನನ್ನನ್ನು ಹತ್ಯೆ ವಿಚಾರ ಶುದ್ಧ ಸುಳ್ಳು.. ನನ್ನನ್ನು ಯಾರು ಏನು ಮಾಡೋದಕ್ಕೆ ಆಗಲ್ಲ. ಸುಳ್ಳು ಸುದ್ದಿ ಭಿತ್ತರವಾಗುತ್ತವೆ. ಸಿಸಿಬಿ ಡಿಜಿಪಿ ಅಲೋಕ್ ಕುಮಾರ್ ಜೊತೆ ಎರಡು ಗಂಟೆ ಮೊದಲು ಮಾತನಾಡಿದ್ದು, ಇದೊಂದು ಇಂಡಸ್ಟ್ರಿಯ ನಿರ್ಮಾಪಕರ ಜಗಳ ಎಂದು ವೈಯಕ್ತಿಕವಾಗಿ ಹೇಳಿದರು. ಈ ಪ್ರಕರಣದಲ್ಲಿ ಯಾವ ಸ್ಟಾರ್ ಕಲಾವಿದರು ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ತಿಳಿಸಿದರು.ಕನ್ನಡ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಲಾಗಿತ್ತು.  ಆದರೆ ಪೊಲೀಸರು ಯಾವ ಸ್ಟಾರ್ ಅಂತಾ ಬಹಿರಂಗಗೊಳಿಸಿರಲಿಲ್ಲ. ಆದರೆ ಇತ್ತೀಚೆಗೆ ನಟ ಯಶ್ ಹತ್ಯೆಗೆ ಸುಪಾರಿ ಪಡೆದಿದ್ದಾರೆ ಸ್ಲಂ ಭರತನ ಸಹಚರರು ಎಂದಬ ಮಾಹಿತಿ ಹೊರ ಬೀಳುತ್ತಿದ್ದಂತೇ ಗಾಂಧಿನಗರವೇ ಬೆಚ್ಚಿ ಬಿದ್ದಿದೆ.

 

Edited By

Kavya shree

Reported By

Kavya shree

Comments