‘ಆಂಟಿ’ ಎಂದು ಕರೆದು ಅವಮಾನಿಸಿದ ಆ ನಟನಿಗೆ ಕರೀನಾ ಕೊಟ್ಳು ತಿರುಗೇಟು : ಹೇಗಿತ್ತು ಗೊತ್ತಾ..?
ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ನಟಿಯರು ಸಿಕ್ಕಾಪಟ್ಟೆ ಕಾಂಟ್ರೋವರ್ಸಿಗೆ ಒಳಗಾಗಿ ಬಿಡುತ್ತಾರೆ. ಇದು ಹೇಳಿ ಕೇಳಿ ಮೊಬೈಲ್ ಮೀಡಿಯಾ. ಅಂದಹಾಗೇ ಬಾಲಿವುಡ್ ನಟಿಯರಂತೂ ದಿನಕ್ಕೊಂದು ಸುದ್ದಿಯಲ್ಲಿರುತ್ತಾರೆ. ಬಾಲಿವುಡ್’ನ ಮೋಸ್ಟ್ ಬ್ಯೂಟಿಫುಲ್ ಹೀರೋಯಿನ್ ಕರೀನಾ ಕಪೂರ್ ಕೆಲವರ ಮೇಲೆ ಸಿಡಿಮಿಡಿಗೊಂಡಿದ್ದಾರೆ. ಅವರು ಕರೆದ ಆ ಹೆಸರಿಗೆ ಕೋಪಗೊಂಡಿದ್ದಾಳೆ ಬೋಬೋ.
ಕರಿನಾ ಕಪೂರ್ ಒಂದು ಮಗುವಿನ ತಾಯಿಯಾಗಿದ್ದರೂ ಅದೇ ಸೌಂದರ್ಯ, ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಕರಿನಾ ಮಗನಿಗೂ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಫ್ಯಾನ್ಸ್. ಕರೀನಾ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಹಿಂದೆಂಗಿಂತಲೂ ಕರೀನಾ ಮತ್ತಷ್ಟು ಸುಂದರಿಯಾಗಿದ್ದಾರೆ. ಹೀಗಿರುವಾಗ ಯಾರು ತಾನೇ ಹೇಳ್ತಾರೆ ಆಕೆ ಒಂದು ಮಗುವಿನ ತಾಯಿಯಂತಾ… ಆದರೆ ಕೆಲವರು ಸೋಶಿಯಲ್ ಮಿಡಿಯಾದಲ್ಲಿ ಆಕೆಯನ್ನು ರೇಗಿಸಿದ್ದಾರೆ. ಆ ಹೆಸರಿನಿಂದ ಕರೆದು ಆಕೆಯ ಕೋಪ ನೆತ್ತಿಗೇರುವಂತೆ ಮಾಡಿದ್ದಾರೆ. ಆ ಹೆಸರಿನಿಂದ ಕರೆದ್ರೇ ಕರಿನಾಗೆ ಯಾಕಿಷ್ಟು ಸಿಟ್ಟು..? ಅಷ್ಟಕ್ಕೂ ಅಭಿಮಾನಿಗಳು ಆಕೆಯನ್ನು ಏನೆಂದು ಕರೆದಿದ್ದಾರೆ ಗೊತ್ತಾ..? ಅಷ್ಟೇ ಅಲ್ದೇ ಕಾರ್ಯಕ್ರಮವೊಂದರಲ್ಲಿ ಆಕೆಯನ್ನು ನಟ ಅರ್ಬಾಜ್ ಖಾನ್ ಕೂಡ ಆಕೆಯನ್ನು ಆ ಹೆಸರಿನಿಂದ ಕರೆದಿದ್ದಾರೆ. ಇದಕ್ಕೆ ಕರೀನಾ ಕೊಟ್ಟ ಉತ್ತರ ಏನು ಗೊತ್ತಾ..?.ನಟ ಅರ್ಬಾಜ್ ಖಾನ್, ನಟಿ ಸೋನಾಕ್ಷಿ ಸಿನ್ಹಾ ಮತ್ತು ನಿರ್ದೇಶಕ ಕರಣ್ ಜೋಹರ್ ಜೊತೆ ಕರೀನಾ ಕಪೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ನಟ ಅರ್ಬಾಜ್ ಅವರನ್ನು ಆಂಟಿ ಎಂದು ಫೋಟೋವೊಂದಕ್ಕೆ ಕಮೆಂಟ್ ಹಾಕಿದ್ದನ್ನು ತೋರಿಸಿದ್ರು.
ನೀವು ಈಗ ಆಂಟಿಯಾಗಿದ್ದೀರಿ, ಹುಡುಗಿಯರ ರೀತಿಯಲ್ಲಿ ಬಟ್ಟೆ ಹಾಕಿಕೊಂಡು ಮಕ್ಕಳ ರೀತಿ ಆಡೋದನ್ನು ನಿಲ್ಲಿಸಿ ಎಂದು ಕಮೆಂಟ್ ಮಾಡಲಾಗಿತ್ತು. ಕಮೆಂಟ್ ನೋಡುತ್ತ ಮುಗುಳನ್ಕಕ್ಕ ಕರೀನಾ, ಈ ರೀತಿಯ ಹೇಳಿಕೆಗಳಿಗೆ ನಾನು ಹೆಚ್ಚಿನ ಮಹತ್ವ ನೀಡಲ್ಲ. ಪ್ರಸಿದ್ಧ ವ್ಯಕ್ತಿ ಅಥವಾ ಕಲಾವಿದರಿಗೆ ಭಾವನೆಗಳಿಲ್ಲ ಎಂದು ಕೆಲವರು ತಿಳಿದುಕೊಂಡಿರುತ್ತಾರೆ. ಕೆಲವರು ಬೇರೆಯವರ ವೈಯಕ್ತಿಯ ವಿಚಾರವನ್ನು ಸಹ ತುಂಬಾ ಹಗುರುವಾಗಿ ತೆಗೆದುಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು. ಅಂದಹಾಗೇ ಕರೀನಾ ಗುಟ್ ನ್ಯೂಸ್ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಒಂದು ಸ್ಟಿಲ್ ಫೋಟೋ ರಿವೀಲ್ ಆಗಿತ್ತು. ಆ ಫೋಟೋ ನೋಡಿ ಕರೀನಾ ಅಭಿಮಾನಿಗಳು ಕರೀನಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂದು ಕಮೆಂಟ್ ಮಾಡಿದ್ದೂ ಕೂಡ ವೈರಲ್ ಆಗಿತ್ತು. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಆಂಟಿ ಎಂದು ಕರೆದ ಕೆಲವರಿಗೆ ಸಖತ್ತಾಗಿಯೇ ಮಾತಿನ ಚಾಟಿ ಬೀಸೋದರ ಮೂಲಕ ಉತ್ತರಕೊಟ್ಟಿದ್ದಳು ಬೆಕ್ಕಿನ ಕಣ್ಣಿನ ಈ ಸುಂದರಿ.
Comments