ಬಾಲಿವುಡ್ ನಟನ ಮೇಲೆ ಬಿತ್ತು ಕಿಚ್ಚನ ಪತ್ನಿ ಕಣ್ಣು : ದೃಷ್ಟಿ ತೆಗೆಸಿಕೊಳ್ಳಿ ಎಂದಿದ್ಯಾಕೆ..?!!!

ಅಂದಹಾಗೇ ಕಿಚ್ಚನ ಪತ್ನಿ ಪ್ರಿಯಾ, ಇಂಡಸ್ಟ್ರಿಯಿಂದ ದೂರವಿದ್ರೂ ಕೂಡ, ತುಂಬಾ ಹತ್ತಿರದವರಾಗಿದ್ದಾರೆ. ಸ್ಯಾಂಡಲ್’ವುಡ್ನಲ್ಲಿ ಏನೇ ಕಾರ್ಯಕ್ರಮವಾದ್ರೂ ಸುದೀಪ್ ಜೊತೆ ಪ್ರಿಯಾ ಬರೋದು ವಾಡಿಕೆ. ಅಂದಹಾಗೇ ಪ್ರಿಯಾ ಸುದೀಪ್ ಮತ್ತೊಂದು ಅಭ್ಯಾಸವೆಂದರೆ, ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಕಿಚ್ಚ ಮತ್ತು ಸುದೀಪ್ ಜೋಡಿಯ ರೊಮ್ಯಾಂಟಿಕ್ ಫೋಟೋಗೆ ಜಗ್ಗೇಶ್ ಟ್ವೀಟ್ ಮಾಡಿದ್ದೂ ವೈರಲ್ ಆಗಿತ್ತು. ಅಷ್ಟೇ ರೊಮ್ಯಾಂಟಿಕ್ ಆಗಿ ಜೂ.ಕಿಚ್ಚನನ್ನು ಎದುರು ನೋಡುತ್ತಿದ್ದೇವೆಂದು ನವರಸನಾಯಕ ಕಮೆಂಟ್ ಮಾಡಿದ್ರು. ಇದು ವೈರಲ್ ಆಗಿತ್ತು. ಅದಿರಲೀ ಬಿಡಿ, ಇದ್ದಕ್ಕಿದ್ದ ಹಾಗೇ ಕಿಚ್ಚನ ಪತ್ನಿ ಕಣ್ಣು ಆ ನಟನ ಮೇಲೆ ಯಾಕೆ ಬಿತ್ತು...?!
ಅಂದಹಾಗೇ ಆ ನಟನಿಗೆ ಮೊದಲು ಹೋಗಿ ದೃಷ್ಟಿ ತೆಗೆಸಿಕೊಳ್ಳಿ ಎಂದು ಕೂಡ ಹೇಳಿದ್ದಾರೆ. ಅಚ್ಚರಿಯಾಗಬಹುದಲ್ವಾ…ಹೌದು ಪ್ರಿಯಾ ಸುದೀಪ್ ರನ್ನು ಅಟ್ರಾಕ್ಟ್ ಮಾಡಿದ್ದು ಬಾಲಿವುಡ್ನ ಫೇಮಸ್ ನಟ ಮತ್ತು ಮಾಡೆಲ್ ಶಿವದಾಸನಿ. ಅವರಿಗೆ ನೀವ್ ಫಸ್ಟ್ ಹೋಗಿ ದೃಷ್ಟಿ ತೆಗೆಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ಯಾಕೆ ಅಂತೀರಾ..? ಅಂದಹಾಗೇ ಸುದೀಪ್ ಪತ್ನಿಗೂ, ಆ ನಟನಿಗೂ ಏನು ಸಂಬಂಧ ಗೊತ್ತಾ.?ಹೌದು.. ಇತ್ತೀಚೆಗೆ ನಟ ಅಫ್ತಾಬ್ ಶಿವದಾಸನಿ ಕುಟುಂಬದ ಮದುವೆಯ ಕಾರ್ಯಕ್ರಮ ರಾಜಸ್ಥಾನದಲ್ಲಿ ನಡೆದಿದೆ. ಈ ಸಂಭ್ರಮದಲ್ಲಿ ಪತ್ನಿ ನಿನ್ ದುಸಾಂಜ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋ ಮತ್ತು ಒಂಟಿಯಾಗಿ ತೆಗೆಸಿಕೊಂಡಿದ್ದ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ “ರಾಜ ಮತ್ತು ರಾಣಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ.
ಯಾವುದೇ ಮನೆಯಾದರೂ ಅದು ಕೋಟೆಯಾಗುತ್ತದೆ” ಎಂದು ಬರೆದುಕೊಂಡಿದ್ದರು. ಈ ಟ್ವೀಟ್ ಗೆ ಪ್ರಿಯಾ ಸುದೀಪ್ ಅವರು ರಿಯಾಕ್ಟ್ ಮಾಡಿದ್ದಾರೆ. ತುಂಬಾ ಲವ್ಲಿಯಾಗಿದೆ, ದೃಷ್ಟಿ ತೆಗೆಸಿಕೊಳ್ಳಿ ಎಂದು ಎರಡು ನಗುವಿನ ಎಮೋಜಿಯನ್ನು ಹಾಕಿ ರೀಟ್ವೀಟ್ ಮಾಡಿದ್ದಾರೆ. ಅಂದಹಾಗೇ ಅಫ್ತಾಬ್ ಶಿವದಾಸನಿ ಅವರು ಕಿಚ್ಚನ ಫ್ಯಾಮಿಲಿಗೆ ಆತ್ಮೀಯರು. ಈ ಹಿಂದೆ ಶಿವದಾಸನಿ ಹುಟ್ಟುಹಬ್ಬದ ಸಂದರ್ಭದಲ್ಲಿ ಬರ್ತ್ ಡೇ ಸರ್ಪ್ರೈಸ್ ಕೊಡಲು ಪ್ರಿಯಾ ಹಾಗೂ ಸುದೀಪ್ ಸರ್ಬಿಯಾ ದೇಶಕ್ಕೆ ಹೋಗಿದ್ದರು. ಅಲ್ಲಿ ಕೇಕ್ ತಂದು ಕಟ್ ಮಾಡಿಸಿ ಆಚರಣೆ ಮಾಡಿದ್ದರು. ಅಂದು ಕೂಡ ಸವಿ ನೆನಪುಗಳ ಸುಂದರ ಫೋಟೋಗಳನ್ನು ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಶಿವದಾಸನಿ ಅವರು ಬಾಲಿವುಡ್ ರಂಗಕ್ಕೆ ಬಾಲ್ಯದಲ್ಲಿಯೇ ಎಂಟ್ರಿಕೊಟ್ಟವರು. ನಟನಾಗಿ, ನಿರ್ಮಾಪಕನಾಗಿ, ಮಾಡೆಲ್ ಆಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.
Comments