ಮತ್ತೊಮ್ಮೆ ಕಾಂಟ್ರೋವರ್ಸಿ ಸುಳಿಯಲ್ಲಿ ರಶ್ಮಿಕಾ : ವೈರಲ್ ಆಯ್ತು ಗಾಸಿಪ್ ಹೀರೋ ಜೊತೆಗಿನ ಫೋಟೋ…?!!!

ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗಷ್ಟೇ ಕನ್ನಡಾಭಿಮಾನಿಗಳ ಕೋಪ ತಣ್ಣಗಾಗಿದೆ, ನನ್ನನ್ನು ಕ್ಷಮಿಸಿದ್ದೀರಾ, ನಾನು ನಿಮಗೆ ಥ್ಯಾಂಕ್ಸ್ ಹೇಳುತ್ತೇನೆಂದು ಅಭಿಮಾನಿಗಳ ಕುರಿತಾಗಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದರು. ಆದರೆ ಇದೀಗ ಫೋಟೋವೊಂದು ವೈರಲ್ ಆಗುವುದರ ಮೂಲಕ ರಶ್ಮಿಕಾ ಮತ್ತೊಮ್ಮೆ ಕಾಂಟ್ರೋವರ್ಸಿಗೆ ಸಿಲುಕುಹಾಕಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವೊಂದಿಷ್ಟು ಅಭಿಮಾನಿಗಳು.ಈ ಹಿಂದೆ ತೆಲುಗು ಆ್ಯಕ್ಟರ್ ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ಗೀತಾ ಗೋವಿಂದಂ ನಲ್ಲಿ ರಶ್ಮಿಕಾ ಅವರ ಲಿಪ್ಲಾಕ್ ದೃಶ್ಯ ವೈರಲ್ ಆಗಿತ್ತು. ಸಿನಿಮಾ ರಿಲೀಸ್ ಗೂ ಮುನ್ನವೇ ಆ ದೃಶ್ಯ ಕಾಂಟ್ರೋವರ್ಸಿಯಾಯ್ತು.
ಈ ರೀತಿ ರಶ್ಮಿಕಾ ತೆಲಗು ನಟ ವಿಜಯ್ ದೇವರಕೊಂಡಾ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು ಅದ್ಯಾಕೋ ಕನ್ನಡಾಭಿಮಾನಿಗಳಿಗೆ ಸರಿ ಕಾಣಲಿಲ್ಲ, ಅದೂ ಅಲದೇ ಅಷ್ಟೋತ್ತಿಗಾಗಲೇ ರಕ್ಷಿತ್ ಶೆಟ್ಟಿ ಜೊತೆ ಲವ್ ಬ್ರೇಕ್’ಕಪ್ ಆಗಿತ್ತು. ಈ ಎಲ್ಲಾ ಕಾರಣದಿಂದ ರಶ್ಮಿಕಾ ಮೇಲೆ ಕನ್ನಡಿಗ ಫ್ಯಾನ್ಸ್ ಗರಂ ಆಗಿದ್ದಂತೂ ನಿಜ. ಎಷ್ಟರ ಮಟ್ಟಿಗೆ ಅಂದ್ರೆ ಸಿನಿಮಾದಲ್ಲಿ ಕೆಲವೊಂದಿಷ್ಟು ಸೀನ್ ಗೆ ಕತ್ತರಿ ಹಾಕುವ ಮಟ್ಟಿಗೆ. ಅದೇನೆ ಇರಲಿ, ಸದ್ಯ ರಶ್ಮಿಕಾ ಅಭಿನಯದ ಯಜಮಾನ ಸಿನಿಮಾ ಸಕ್ಸಸ್ ಆಗಿದೆ. ಅದರ ಬೆನ್ನಲ್ಲೇ ರಶ್ಮಿಕಾ ಲೆಟರ್ ಕೂಡ ಬರೆದಿದ್ದರು. ಎಲ್ಲಾ ಮರೆತು ಎಲ್ಲವೂ ಸರಿ ಹೋಯ್ತು ಎನ್ನುವಾಗಲೇ ಹಾಟ್ ಜೋಡಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡರ ಹೊಸ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾ 'ಕಾಮ್ರೇಡ್' ಜತೆಯಾಗಿ ನಟಿಸುತ್ತಿದ್ದು, ಇದು ತೆಲುಗು, ತಮಿಳು ಅಲ್ಲದೆ, ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಮೂಲಕ ಈ ಹ್ಯಾಂಡ್ಸಮ್ ಜೋಡಿ ಕನ್ನಡದಲ್ಲೂ ಮೋಡಿ ಮಾಡಲಿದೆ. ಈ ಹಿಂದೆಯೇ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದ್ದು, ವಿಜಯ್ ರನ್ನು ತಬ್ಬಿಕೊಂಡ ರಶ್ಮಿಕಾ ಮಂದಣ್ಣ ಫೋಟೋಗೆ ಭಾರೀ ಲೈಕ್ಸ್ ಬಂದಿದೆ. ಈ ಸಿನಿಮಾದದ ಟೀಸರ್ ಮಾರ್ಚ್ 17 ರಂದು ಬಿಡುಗಡೆಯಾಗಲಿದ್ದು, ಮತ್ತಷ್ಟು ರೊಮ್ಯಾಂಟಿಕ್ ದೃಶ್ಯಗಳಿರಬಹುದೇ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುವಂತೆ ಮಾಡಿದೆ. ಏನೇ ಇರಲಿ ಸಿನಿಮಾ ಅಂದಮೇಲೆ ಎಲ್ಲಾ ವೈಭಿನ್ನ ರೀತಿಯ ದೃಶ್ಯಗಳು ಇರುತ್ತವೆ. ರಶ್ಮಿಕಾ ವೈಯಕ್ತಿಕ ಏನೇ ಇದ್ರೂ ಸಿನಿಮಾದಲ್ಲಿ ಅವರ ಪ್ರತಿಭಾವಂತಿಕೆಯನ್ನಷ್ಟೇ ಗುರುತಿಸಬೇಕಲ್ಲವೇ…
Comments