ಯಜಮಾನನ ಸಕ್ಸಸ್ ಖುಷಿಯಲ್ಲಿದ್ದ ಡಿ ಬಾಸ್'ಗೆ ಶಾಕಿಂಗ್..?!!!
ಸ್ಯಾಂಡಲ್ವುಡ್ ನ ಸ್ಟಾರ್’ಗಳಿಗೆ ಅಭಿಮಾನಿಗಳ ಕೊರತೆ ಏನಿಲ್ಲ…ಅಭಿಮಾನದ ಅಭಿಮಾನಕ್ಕೆ ನಮ್ಮ ಸ್ಯಾಂಡಲ್ ವುಡ್ ಸ್ಟಾರ್’ಗಳ ಅಭಿಮಾನಿಗಳೇ ಸಾಕ್ಷಿ ಎನ್ನಬಹುದು.. ಅದರಲ್ಲು ದರ್ಶನ್ ಗೆ ಒಂದು ಕೈ ಜಾಸ್ತಿ ಅಂತಾನೇ ಹೇಳಬಹುದು….ದರ್ಶನ್ಗೂ ಕೂಡ ಅಭಿಮಾನಿಗಳು ಎಂದರೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ… ಎಲ್ಲಾ ನಾಯಕರಿಗಿಂತ ಸ್ವಲ್ಪ ವಿಭಿನ್ನವಾಗಿಯೇ ನಿಲ್ಲುತ್ತಾರೆ.. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಕೂಡ ಅಭಿಮಾನಿಗಳು ಕೂಡ ದರ್ಶನ್ ಗೆ ಇದ್ದಾರೆ. ಆದರೆ ದರ್ಶನ್ರನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಪುಟಾಣಿಯೊಬ್ಬರು ಅಸುನೀಗಿದ್ದಾರೆ. ದಚ್ಚುನನ್ನು ನೋಡಲೇಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದ ಆಕೆ ಆಸೆ ತೀರಿಸಿಕೊಂಡಿದ್ದಾಳೆ.
ಸ್ವಲ್ಪ ದಿನಗಳ ಹಿಂದೆ ದರ್ಶನ್ ಒಬ್ಬ ವಿಶೇಷ ಅಭಿಮಾನಿಯನ್ನು ಭೇಟಿಯಾಗಿದ್ದರು.. ಆಕೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಪೂರ್ವಿಕಾ ಮೃತಪಟ್ಟಿದ್ದಾರೆ. ಜಿಲ್ಲೆ ಮದ್ದೂರು ತಾಲ್ಲೂಕಿನ ಪಣ್ಣೆದೊಡ್ಡಿ ಗ್ರಮಾದ ನಿವಾಸಿ ದರ್ಶನ್ ಅಭಿಮಾನಿ ಪೂರ್ವಿಕಾ(10)ರನ್ನು ಈ ಹಿಂದೆ ದರ್ಶನ್ ಭೇಟಿಯಾಗಿದ್ದರು. ದುರಾದೃಷ್ಟವಶಾತ್ ಪೂರ್ವಿಕಾ ಸಾವನಪ್ಪಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೇ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೂರ್ವಿಕಾಗೆ ಸಂತಾಪ ಸೂಚಿಸಿದ್ದಾರೆ. ಹೇಳಿ-ಕೇಳಿ ಮಂಡ್ಯ ಜಿಲ್ಲೆಯಲ್ಲಿ ದರ್ಶನ್ಗೆ ಅಪಾರ ಅಭಿಮಾನಿಗಳ ಬಳಗವಿದೆ. ದರ್ಶನ್'ರನ್ನು ನೋಡುವ ಇಚ್ಛೆ ವ್ಯಕ್ತಪಡಿಸಿದ್ದ ಪೂರ್ವಿಕಾಳ ಆಸೆಯನ್ನು ದರ್ಶನ್ ಪೂರೈಸಿದ್ದರು. ಯಜಮಾನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ವೇಳೆ ದರ್ಶನ್ ಪೂರ್ವಿಕಾರನ್ನು ಭೇಟಿಯಾಗಿ ಫೋಟೋ ಕೂಡ ತೆಗೆಸಿಕೊಂಡಿದ್ದರು.
Comments