ಹಿನ್ನಲೆ ಧ್ವನಿ ನೀಡೋಕೆ ಸುದೀಪ್ ಬೇಕಿತ್ತು, ಟ್ರೇಲರ್ ಲಾಂಚ್ಗೆ ದರ್ಶನ್ ಬೇಕಿತ್ತಾ..? ಏನಿದು 'ಉದ್ಘರ್ಷ'ದ ಉದ್ಧಟತನ..?!!!

ನಿರ್ದೇಶಕ ಸುನೀಲ್ ಕುಮಾರ್ ಅವರ ಸಿನಿಮಾ ಅಂದ್ರೆ ಆ ಕಥೆಯಲ್ಲಿ ಥ್ರಿಲ್ ಇರೋದಂತೂ ಕನ್ಫರ್ಮ್. ಅಂದಹಾಗೇ ದೇಸಾಯಿ ಅವರು ಮತ್ತೊಂದು ಬಹು ನಿರೀಕ್ಷಿತ ಸಿನಿಮಾ 'ಉದ್ಘರ್ಷ' ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಮಾಡಲು ಅತಿಥಿಯಾಗಿ ದರ್ಶನ್ ಅವರನ್ನು ಆಹ್ವಾನಿಸಲಾಗಿತ್ತು. ದಚ್ಚುಗೆ ಕಾರ್ಯಕ್ರಮದಲ್ಲಿ ಸರ್ಪ್ರೈಸ್ ಕೂಡ ಕೊಡಲಾಗಿತ್ತು. ಆದರೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ ಉದ್ಘರ್ಷ ಸಿನಿಮಾಗೆ ಸುದೀಪ್ ವಾಯ್ಸ್ ಕೊಟ್ಟಿದ್ದಾರೆ. ಆದರೆ ಸುದೀಪ್ ಅವರನ್ನೇ ಸಮಾರಂಭಕ್ಕೆ ಕರೆದಿಲ್ವಂತೆ.
ಮತ್ತೆ ಟ್ರೇಲರ್' ನಲ್ಲಿ ಕಿಚ್ಚ ಸುದೀಪ್ ನೀಡಿದ ವಾಯ್ಸ್’ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈಗಿದ್ದಾಗ ದರ್ಶನ್ ಮತ್ತು ಸುದೀಪ್ ಇಬ್ಬರನ್ನು ಟ್ರೇಲರ್ ಲಾಂಚ್ ಮಾಡಬಹುದು, ಇಬ್ಬರೂ ಒಂದೇ ವೇದಿಕೆಗೆ ಈ ಮೂಲಕ ಬರಬಹುದು ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆ ಕಾದಿತ್ತು. ಆದರೆ ಇಡೀ ಕಾರ್ಯಕ್ರಮದಲ್ಲಿ ದರ್ಶನ್ ಒಬ್ಬರೇ ಕಾಣಿಸಿಕೊಂಡಿದ್ದಾರೆ, ಸುದೀಪ್ ತಮ್ಮ ಸಿನಿಮಾ ಲೈಫ್ಗೆ ಬ್ರೇಕ್ ಕೊಟ್ಟ ನಿರ್ದೇಶಕ, ಸ್ಪರ್ಶ ಸಿನಿಮಾದ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ಅವರ ಸಮಾರಂಭಕ್ಕೆ ಕಿಚ್ಚ ಗೈರಾಗಿದ್ದರ ಬಗ್ಗೆ ಅನುಮಾನ ಇದೆ. ಇಬ್ಬರು ಬರಲಿದ್ದಾರೆಂಬ ನಿರೀಕ್ಷೆಯಲ್ಲಿದ್ದವರಿಗೆ ಸುದೀಪ್ ಗೈರು, ದಚ್ಚು ಮತ್ತು ಕಿಚ್ಚನ ಸಂಬಂಧದ ಅಂತರಕ್ಕೆ ಪುಷ್ಠಿ ನೀಡಿದಂತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದೀಪ್ ಗೈರು ಹಾಜರಿಗೆ ಸುನೀಲ್ ಕುಮಾರ್ ದೇಸಾಯಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಸುದೀಪ್ ಗೆ ಆಹ್ವಾನ ಕೊಟ್ಟಿರಲಿಲ್ಲ. ಅವರು ಸತತ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಟ್ರೇಲರ್ ಲಾಂಚ್ ಗೆ ಬನ್ನಿ ಎನ್ನುವುದು ಅವರಿಗೆ ಕಷ್ಟ ಕೊಟ್ಟಂತಾಗುವುದು. ಅವರ ಸಹಕಾರ ನಮಗೆ ಇದ್ದೇ ಇದೆ ಎಂದು ದೇಸಾಯಿ ಹೇಳಿದ್ದಾರೆ. ದೇಸಾಯಿ ಹೇಳಿಕೆಗೆ ಕಿಚ್ಚನ ಫ್ಯಾನ್ಸ್ ನಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ದತ್ತನಿಗೆ ಕೊಟ್ಟ ಇನ್ವಿಟೇಷನ್ ಕಿಚ್ಚನಿಗೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ಉದ್ಘರ್ಷ ಸಿನಿಮಾದ ಹೀರೋ ದರ್ಶನ್ ಅವರ ಸ್ನೇಹಿತ, ಯಜಮಾನ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡ ಠಾಕೂರ್ ಸಿಂಗ್ ಅವರು ದರ್ಶನ್'ಗೆ ಒಂದು ಕೆಜಿ ವಾಚ್ ನ್ನು ಗಿಫ್ಟ್ ಆಗಿ ನೀಡಿದ್ದಾರೆ.
Comments