'ಯಜಮಾನ' ನನ್ನು ನೋಡಲು ಕದ್ದುಮುಚ್ಚಿ ಹೋಗಿದ್ಯಾಕೆ ಈ ಸ್ಟಾರ್ ನಟ...?!!!
ಅಂದಹಾಗೇ ಸೆಲೆಬ್ರಿಟಿಗಳು ಪ್ರೈವೆಸಿಯಾಗಿರಬೇಕು ಅಂತಾ ಬಯಸೋದು ಕಾಮನ್. ಅಂದಹಾಗೇ ಅವರು ಪ್ರೈವಸಿಯಾಗಿ ಪಬ್ಲಿಕ್ ಪ್ಲೇಸ್ ಗಳಲ್ಲಿ ಓಡಾಡುವುದಕ್ಕೂ ಆಗುವುದಿಲ್ಲ. ಅಲ್ಲಿ ಫ್ಯಾನ್ಸ್ ಕಾಟ, ಏನೇ ಇದ್ರೂ ಸಾಮಾನ್ಯರಂತೇ ಸಿನಿಮಾ ನಟರಿಗೆ ಹೆಚ್ಚು ಪ್ರೈವೆಸಿ ಇರೋಲ್ಲ, ಅದಕ್ಕಾಗಿಯೇ ಅವರು ಮಾಲ್, ಥಿಯೇಟರ್ಗಳಿಗೆ ಹೋಗೋವಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ರೋಡ್ ಸೈಡ್ ನಿಂತು ಪಾನೀಪೂರಿ ತಿನ್ನುವುದು, ಗೂಡಂಗಡಿಯಲ್ಲಿ ಟೀ ಕುಡಿಯುವುದು, ಇವೆಲ್ಲಾ ಅವರಿಗೆ ಇಷ್ಟ ಇದ್ರೂ ಅದನ್ನು ಮಾಡೋಕಾಗಲ್ಲಾ ಅನ್ನೋ ಫೀಲ್ ತುಂಬಾ ಜನ ಆರ್ಟಿಸ್ಟ್’ಗಳಿಗಿದೆ.
ವೇಷ ಮರೆಸಿಕೊಂಡು ಸಿನಿಮಾ ನೋಡಿ ಬಂದಿದ್ದಾರೆ ಇಲ್ಲೊಬ್ಬ ಸ್ಟಾರ್ ನಟ. ಇತ್ತೀಚಿಗಷ್ಟೇ ಯಶ್ ಅಭಿನಯದ ಕೆಜಿಎಫ್ ಸಿನಿಮಾ ನೋಡಿ ಬಂದಿದ್ದರು. ಸದ್ಯಮಂಕಿ ಕ್ಯಾಪ್ ಹಾಕಿಕೊಂಡು ಯಾರಿಗೂ ತಿಳಿಯದಂತೆ ಹೊರಗೆ ಸುತ್ತಾಡಿ ಬರುತ್ತಾರೆ ನಟ ಜಗ್ಗೇಶ್. ಇತ್ತೀಚೆಗೆ ನವರಸನಾಯಕ ಜಗ್ಗೇಶ್ ಶೂಟಿಂಗ್ ಮುಗಿಸಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಂಕಿ ಕ್ಯಾಪ್ ಹಾಕಿಕೊಂಡು 4 ಕಿ.ಮೀ. ವಾಕ್ ಮಾಡಿ ಅದನ್ನು ಲೈವ್ ವಿಡಿಯೋ ಕೂಡಾ ಮಾಡಿದ್ದರು. ಇದೀಗ ಮತ್ತೆ ಜಗ್ಗೇಶ್ ಮುಸುಕುಧಾರಿಯಾಗಿ ಥಿಯೇಟರ್ನಲ್ಲಿ ಕುಳಿತು ದರ್ಶನ್ ಅವರ 'ಯಜಮಾನ' ಸಿನಿಮಾ ನೋಡಿ ಬಂದಿದ್ದಾರೆ.
ದರ್ಶನ್ ಅವರ ಸಿನಿಮಾ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಾಸಿಟೀವ್ ಆಗಿತ್ತು. ನನಗೂ ಕುತೂಹಲ ಹೆಚ್ಚಾಯ್ತು. ಯಜಮಾನನನ್ನು ಥಿಯೇಟರ್ ನಲ್ಲೇ ನೋಡಲೇ ಬೇಕೆಂದು ಒಂದು ಐಡಿಯಾ ಮಾಡಿದೆ. ಸಿನಿಮಾ ನೋಡಲೇ ಬೇಕೆಂಬ ಹಂಬಲದಿಂದ ಮಂಕಿಕ್ಯಾಪ್ ಹಾಕ್ಕೊಂಡು ಜನರ ಮಧ್ಯೆಯೇ ಸಿನಿಮಾ ನೋಡಿ ಬಂದೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನೋಡಿದ ಖುಷಿಯನ್ನು ಹಂಚಿಕೊಂಡಿದ್ದಾರೆ.ಆದರೆ ತಾನು ಯಾವ ಥಿಯೇಟರ್ನಲ್ಲಿ ಸಿನಿಮಾ ನೋಡಿದೆ ಎಂಬುದನ್ನು ಮಾತ್ರ ಜಗ್ಗೇಶ್ ಹೇಳಿಕೊಂಡಿಲ್ಲ. ಆದರೆ ಕನ್ನಡ ಚಿತ್ರಮಂದಿರದಲ್ಲೇ ಸಿನಿಮಾಗಳನ್ನು ನೋಡಿ ಎಂದು ಕನ್ನಡಿಗರಿಗೆ ವಿನಂತಿಸಿಕೊಂಡಿದ್ದಾರೆ ಜಗ್ಗೇಶ್. ಒಟ್ಟಿನಲ್ಲಿ ಜಗ್ಗೇಶ್ ಜನರೊಂದಿಗೆ ಕುಳಿತು ಥಿಯೇಟರ್ನಲ್ಲಿ ಸಿನಿಮಾ ನೋಡಿರುವುದು ಮಾತ್ರ ವಿಶೇಷ.
Comments