‘ನೀವೇನಾದ್ರೂ ಮನೆಗೆ ಬಂದ್ರೆ ಸಾಯಿಸಿಬಿಡ್ತೀನಿ’ ಎಂದು ಗಂಡನಿಗೆ ಎಚ್ಚರಿಕೆ ನೀಡಿದ ಸ್ಟಾರ್’ನಟನ ಪತ್ನಿ…?!!!

06 Mar 2019 5:53 PM | Entertainment
350 Report

ಅಂದಹಾಗೇ ಬಿ ಟೌನ್ನೇ ಅಂತಹದ್ದು. ಗಾಸಿಪ್, ಲವ್ ಬ್ರೇಕ್ಅಪ್, ಪತಿಯ ವಿರುದ್ಧ ಪತ್ನಿಯ ಸ್ಟೇಟ್ ಮೆಂಟ್, ಫ್ಯಾನ್ಸ್ ವಾರ್ ಹೀಗೆ ನಾನಾ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಫೇಸ್ ಬುಕ್, ಟ್ವಿಟ್ಟರ್, ಇನ್ಸ್,ಸ್ಟ್ರಗ್ರಾಂ ಬಂದ ಮೇಲಂತೂ ಬಾಲಿವುಡ್ ತಾರೆಯರ ಸುದ್ದಿಗೆ ಬರವೇ ಇಲ್ಲ,  ಅಂದಹಾಗೇ ಈ ಬಾರಿ ಸುದ್ದಿಯಲ್ಲಿರೋರು ನಟ  ಅಕ್ಷಯ್ ಖನ್ನಾ ಅಂಡ್ ಫ್ಯಾಮಿಲಿ. ಅದೂ ಒಂದು ಸ್ಟೇಟ್ ಮೆಂಟ್ ನಿಂದಾಗಿ. ‘ನೀವೂ ಮನೆಗೆ ಬಂದ್ರೆ ಸಾಯಿಸಿಬಿಡ್ತೀನಿ ಅಂತಾ ಕೋಪ ಮಾಡಿಕೊಂಡು ಪತಿಗೆ ಹೇಳಿದ್ದಾರಂತೆ ನಟ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ’. ಅಂದಹಾಗೇ ಅಂತಹ ತಪ್ಪೇನು ಮಾಡಿದ್ರು ಈ ಸ್ಟಾರ್ ನಟ..?!

 ಟ್ವಿಂಕಲ್ ಖನ್ನಾ, ತಮ್ಮ ಪತಿಯ ಹುಚ್ಚು ಸಾಹಸಕ್ಕೆ ಬೇಸತ್ತು ಈ ಮಾತನ್ನು ಹೇಳಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು ವೆಬ್ ಸೀರಿಸ್ ಒಂದರಲ್ಲಿ ನಟಿಸುತ್ತಿದ್ದಾರೆ. ತಮ್ಮ ಮೊದಲ ವೆಬ್ ಸೀರಿಸ್ ’ದಿ ಎಂಡ್’ ಪ್ರಮೋಷನ್ ವೇಳೆ ಕೈ-ಕಾಲುಗಳಿಗೆ ಬೆಂಕಿ ಹಚ್ಚಿಕೊಂಡು ಕಾರ್ಯಕ್ರಮಕ್ಕೆ ಎಂಟ್ರಿ ನೀಡಿದ್ದರು. ಈ ಸಂಬಂಧ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಟ್ವಿಂಕಲ್ ಖನ್ನಾಗೆ ಕೋಪ ಬಂದಿದೆ. ಈಗ ನನಗೆ ಈಗ ಗೊತ್ತಾಗಿದೆ, ನೀವು ಕೈ ಕಾಲುಗಳಿಗೆ ಬೆಂಕಿ ಹಂಚಿಕೊಂಡು ಸಾಹಸ ಮಾಡಿದ್ದೂ… ನೀವು ಈ ಬೆಂಕಿಯಲ್ಲಿ ಸತ್ತಿಲ್ಲ ಎಂದರೆ ನೀವು ಮನೆಗೆ ಬಂದಾಗ ನಾನೇ ಸಾಯಿಸುತ್ತೇನೆ” ಎಂದು ಟ್ವೀಟ್ ಮಾಡಿ, “ದೇವರೇ ನನ್ನನ್ನು ರಕ್ಷಿಸು” ಎಂಬ ಹ್ಯಾಶ್‍ಟ್ಯಾಗ್ ಬಳಸಿ ರೀ ಟ್ವೀಟ್ ಮಾಡಿದ್ದಾರೆ.

ಅಂದಹಾಗೇ ಟ್ವಿಂಕಲ್ ಖನ್ನಾ ಅವರ ಟ್ವೀಟ್ ಮೆಸೇಜ್’ಗೆ ಅಭಿಮಾನಿಗಳು ಹೇಗೆ ರಿಯಾಕ್ಟ್ ಮಾಡಿದ್ದಾರೆ ಗೊತ್ತಾ..?!ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರನ್ನ ಫಾಲೋ ಮಾಡುತ್ತಿರುವ  ಅಭಿಮಾನಿಗಳು ಟ್ವಿಂಕಲ್ ಖನ್ನಾ ಟ್ವೀಟ್’ ಗೆ ಸಿಕ್ಕಾಪಟ್ಟೆ ಲೈಕ್ಸ್ ಕೊಟ್ಟಿದ್ದು ಮುಂದಿನ ಅಪ್ಡೇಟ್ ತಿಳಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಾವು ಕುತೂಹಲದಿಂದ ಇದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಗಂಡನ ಮೇಲಿನಿಂದ ಕಾಳಜಿಗೆ ಈ ಥರಾ ಮಾಡಬೇಡಿ ಎಂದು ಟ್ವಿಂಕಲ್ ಖನ್ನಾ ಈ ರೀತಿ ಹೇಳಿದ್ದಾರೆ. ಅವರ ಕಾಳಜಿಗೆ ಹಲವು ಜನ ಫ್ಯಾನ್ಸ, ಅಕ್ಷಯ್ ಮೇಲಿಟ್ಟಿರುವ ಪ್ರೀತಿಗೆ ಟ್ವಿಂಕಲ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By

Kavya shree

Reported By

Kavya shree

Comments