ಆ ಟೈಟಲ್ ಕೇಳುತ್ತಿದ್ದಂತೇ ರಾಘಣ್ಣ ನನ್ನನ್ನು ಕರೆದು ಭಾವುಕರಾಗಿ ಬಿಗಿದಪ್ಪಿಕೊಂಡ್ರು..!!!

ಅಂದಹಾಗೇ ಬಹಳ ವರ್ಷಗಳ ನಂತರ ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಬಹಳ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಸಿನಿಮಾ ಅಮ್ಮನ ಮನೆ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಸಿನಿಮಾ ಬಗ್ಗೆ ಅನೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಘಣ್ಣ ಅಲಿಯಾಸ್ ರಾಘವೇಂದ್ರ ರಾಜ್ ಕುಮಾರ್'ಗಾಗಿಯೇ ಈ ಕಥೆ ಎಣೆಯಲಾಗಿದೆ ಎನ್ನುತ್ತಾರೆ ಅಮ್ಮನ ಮನೆ ನಿರ್ದೇಶಕರು. ಅಂದಹಾಗೇ ಸಿನಿಮಾಗೆ ಇಟ್ಟಿರುವ 'ಅಮ್ಮನ ಮನೆ' ಶೀರ್ಷಿಕೆ ಕೇಳಿ ರಾಘಣ್ಣ ಎಷ್ಟು ಖುಷಿಪಟ್ಟಿದ್ದಾರೆ ಅಂದರೆ ಅದನ್ನು ಪದಗಳಲ್ಲಿ ಹೇಳೋಕ್ಕಾಗಲ್ಲಾ ಎನ್ನುತ್ತಾರೆ ಸಿನಿಮಾ ನಿರ್ದೇಶಕ ನಿಖಿಲ್ ಮಂಜು.
ಅಂದಹಾಗೇ ಅವರು ಹೇಳುವಹಾಗೇ, ನಾನು ಸಿನಿಮಾ ಕಥೆ ಬರೆಯುವಾಗ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಮನಸ್ಸಲ್ಲಿಟ್ಟುಕೊಂಡೇ ಕಥೆ ಬರೆದೆನು. ಅಂದಹಾಗೇ ಸಿನಿಮಾ ಟೈಟಲ್ ಹೇಳಿದಾಗ ರಾಘಣ್ಣ ನನ್ನನ್ನು ಕರೆದು ಬಿಗಿದಪ್ಪಿಕೊಂಡ್ರು, ಅಷ್ಟು ಇಷ್ಟಪಟ್ರು ಸಿನಿಮಾ ಟೈಟಲ್’ನ್ನು. ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅವರ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ, ಟೈಟಲ್ ಕೇಳುತ್ತಿದ್ದಂತೇ ಕ್ಷಣ ಭಾವುಕರಾದ್ರಂತೆ ರಾಘಣ್ಣ ಎಂದು ನೆನಪಿಸಿಕೊಂಡರು ನಿಖಿಲ್ ಮಂಜು.ನನ್ನ ತಂದೆಗೆ ಪಕ್ಷಪಾತವಾಗಿ ಅವರು ಪಟ್ಟ ಕಷ್ಟವನ್ನು ತೆರೆ ಮೇಲೆ ರಾಘಣ್ಣನ ಮೂಲಕ ತೋರಿಸಿದ್ದೇನೆ.
ಇದರಲ್ಲಿ ತಾಯಿ-ಮಗನ ಭಾವನಾತ್ಮಕ ದೃಶ್ಯಗಳು ಕೂಡ ಇವೆ ಎನ್ನುತ್ತಾರೆ ನಿರ್ದೇಶಕರು. ಸಿನಿಮಾದಲ್ಲಿ ಎರಡು ಪಾತ್ರವನ್ನು ಒಟ್ಟೊಟ್ಟಿಗೆ ಕರೆದುಕೊಂಡು ಹೋಗಲಾಗುತ್ತದೆ. ರಾಜೀವ ಎನ್ನುವ ಪಾತ್ರವನ್ನು ರಾಘಣ್ಣ ನಿಭಾಯಿಸಿದ್ದು ಅವರು ಪಿಟಿ ಟೀಚರ್ ಕ್ಯಾರೆಕ್ಟರ್'ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರ ವೃತ್ತಿ ಮತ್ತು ಕೌಟುಂಬಿಕ ಜೀವನವನ್ನು ಹೇಗೆ ಸಮತೋಲನದಿಂದ ತೆಗೆದುಕೊಂಡು ಹೋಗುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಅಂದಹಾಗೇ ಸಿನಿಮಾದ ಎಲ್ಲಾ ಹಾಡುಗಳಿಗೂ ರಾಘವೇಂದ್ರ ರಾಜ್ ಕುಮಾರ್ ಅವರೇ ಧ್ವನಿ ನೀಡಿದ್ದಾರೆ. ಇನ್ನು ಚಿತ್ರ ತಯಾರಿಕೆಗೆ 8 ತಿಂಗಳು ಹಿಡಿಯಿತಂತೆ. 30 ದಿನಗಳಲ್ಲಿ ಶೂಟಿಂಗ್ ಮಾಡಲಾಯಿತು. ಚಿತ್ರದಲ್ಲಿ ಮೂರು ಹಾಡುಗಳಿದ್ದು ಎಲ್ಲದಕ್ಕೂ ರಾಘಣ್ಣ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಬಿ ಜಯಶ್ರೀಯವರು ರಾಘಣ್ಣ ಅವರ ತಾಯಿ ಪಾತ್ರವನ್ನು ಮತ್ತು ಮಾನಸಿ ಸುಧೀರ್ ನಾಯಕನ ಪತ್ನಿ ಪಾತ್ರವನ್ನು ಮಾಡಿದ್ದಾರೆ. ಈಗಾಗಲೇ ಸಿನಿಮಾದಲ್ಲಿನ ರಾಘವೇಂದ್ರ ರಾಜ್ ಕುಮಾರ್ ಅವರ ಜೋಕರ್ ಪೋಸ್ಟರ್'ಗಳು ಭಾರೀ ಸದ್ದು ಮಾಡುತ್ತಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಇದೇ ಶುಕ್ರವಾರದಂದು ಅಮ್ಮನ ಮನೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮೂಲಕ ಅಮ್ಮನ ಮನೆ ಸಿನಿ ತಂಡಕ್ಕೆ ಶುಭ ಹಾರೈಕೆ.
Comments