ಭದ್ರಾವತಿ ಭುವನ ಸುಂದರಿಗೆ ಒಲಿದುಬಂತು ಬಿ ಟೌನ್’ನಿಂದ ಭರ್ಜರಿ ಆಫರ್..!

ಅಂದಹಾಗೇ ಭದ್ರಾವತಿಯ ಹುಡುಗಿ ಈಗ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೇ ಇಂಜಿನಿಯರ್ ವಿದ್ಯಾಭ್ಯಾಸ ಮಾಡುತ್ತಿದ್ದ ಆಶಾ ಭಟ್ ನೋಡಲು ಎಷ್ಟು ಸುಂದರವೋ, ಅಷ್ಟೇ ಪ್ರತಿಭಾವಂತೆ ಕೂಡ ಹೌದು. ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಆಶಾ ಸದ್ಯ ಹಿಂದಿ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಜಂಗ್ಲಿಗೆ ನಾಯಕಿಯಾಗಿ ಆಶಾ ಸೆಲೆಕ್ಟ್ ಆಗಿದ್ದಾರೆ.ಅಂದಹಾಗೇ ಈ ಸಿನಿಮಾದಲ್ಲಿ ವಿದ್ಯುತ್ ಜಮ್ವಾಲ್ ನಾಯಕನಾಗಿದ್ದಾರೆ. ಈ ಸಿನಿಮಾಕ್ಕೆ ಇಬ್ಬರು ನಾಯಕಿಯರು. ಅವರಲ್ಲೊಬ್ಬಾಕೆ ಆಶಾ ಭಟ್, ಈಕೆ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗುತ್ತಿದೆ.
ಆಶಾ ಕನ್ನಡದವರಾಗಿದ್ದೂ, ಅದರಲ್ಲೂ ಭದ್ರಾವತಿ ಹುಡುಗಿ ಎಂಬುದೇ ಹೆಮ್ಮೆ. ಇಂದು ಬಿ ಟೌನ್ ಗೆ ಕಾಲಿಡುತ್ತಿದ್ದಾಳೆ. ಓದಿದ್ದೂ ಇಂಜಿನಿಯರ್ ಆದ್ರೂ ಫ್ಯಾಷನ್ , ಮಾಡೆಲ್ ಮೇಲೆ ಅತಿಯಾದ ವ್ಯಾಮೋಹ. ಓದುತ್ತಿರುವಾಗಲೇ ಮಿಸ್ ಸುಪ್ರಾ ಆಡಿಷನ್ ನಲ್ಲಿ ಸಣ್ಣ ಆತಂಕದ ನಡುವೆಯೇ ಆಶಾ ಭಾಗವಹಿಸಿದಳು.ಈ ನೀಳ ಸುಂದರಿ ಮುಂದೆ ಸೌಂದರ್ಯ ಸ್ಪರ್ಧೆಯ ಒಂದೊಂದೇ ಮೆಟ್ಟಿಲುಗಳನ್ನು ಏರಿದರು. 2014ರಲ್ಲಿ ಪೋಲೆಂಡ್‌ನಲ್ಲಿ ನಡೆದ 'ಮಿಸ್ ಸುಪ್ರಾ ಇಂಟರ್‌ನ್ಯಾಶನಲ್' ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದರು. ಈ ಸ್ಪರ್ಧೆಯಲ್ಲಿ ಭುವನ ಸುಂದರಿ ಕಿರೀಟ ಧರಿಸಿ ವಿಶ್ವದ ಗಮನ ಸೆಳೆದರು. ಈ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ನಾರಿ ಆಶಾ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದಾರೆ. ಅಂದಹಾಗೇ ವಿಶ್ವ ಸುಂದರಿಯಾಗಿ ಗುರುತಿಸಿಕೊಳ್ಳುವ ಹೊತ್ತಿಗೆ ಸಿನಿಮಾ ಆಫರ್’ಗಳು ಒಂದೊಂದಾಗಿ ಆಶಾ ಬಳಿ ಬರ ತೊಡಗಿದವು. ಸ್ಯಾಂಡಲ್’ವುಡ್’ನಿಂದಲೂ ಕೂಡ ಅವಕಾಶಗಳು ಆಶಾ ಬಳಿ ಬರತೊಡಗಿದವು.
ಆದರೆ ಎಜುಕೇಶನ್ ಫಸ್ಟ್, ಸಿನಿಮಾ ನೆಕ್ಸ್ಟ್‌ಅಂತಿದ್ದ ಆಶಾ ಎಲ್ಲ ಆಫರ್‌ಗಳನ್ನೂ ನಯವಾಗಿ ತಿರಸ್ಕರಿಸಿದರು. ಇವೆಲ್ಲ ಆಗಿ ಭರ್ತಿ 5 ವರ್ಷ ಕಳೆದಿದೆ.ಅಂದಹಾಗೇ ಆಶಾ ಭಟ್ ಜಾಹೀರಾತು, ಕೆಲವೊಂದು ಫ್ಯಾಷನ್ ಶೋಗಳನ್ನು ಬಿಟ್ಟರೆ ಸಿನಿಮಾದತ್ತ ಮುಖ ಮಾಡಿರಲಿಲ್ಲ, ಆದರೆ ಇದೀಗ ನೇರವಾಗಿ ಬಾಲಿವುಡ್ ಮೂಲಕವೇ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ಭದ್ರಾವತಿಯ ಕನ್ನಡತಿಗೆ ಶುಭ ಹಾರೈಸೋಣ. ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಥರಾವೇ ಆಶಾ ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸೋಣ.
Comments