ಬಾಲ್ಯದಲ್ಲಿ ಈ ಕರಾಟೆ ಕಿಂಗ್ ಕಂಡ್ರೆ ಪವರ್ ಸ್ಟಾರ್'ಗೆ ಆಗ್ತಾ ಇರಲಿಲ್ವಂತೆ…!!! ಯಾಕೆ ಗೊತ್ತಾ..?
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಚಿತ್ರರಂಗಕ್ಕೆ ಬಾಲ್ಯದಲ್ಲಿಯೇ ಎಂಟ್ರಿ ಕೊಟ್ಟಿದ್ದರು. ಅಪ್ಪ, ನಟ ಸಾರ್ವಭೌಮ ರಾಜ್ ಕುಮಾರ್ ಜೊತೆಯೇ ಹಲವು ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೇ ಪುನೀತ್ ರಾಜ್ ಕುಮಾರ್ ಬಾಲ್ಯದಲ್ಲಿದ್ದಾಗ, ಸ್ಯಾಂಡಲ್’’ವುಡ್ ಸ್ಟಾರ್’ವೊಬ್ಬರ ದೊಡ್ಡ ಅಭಿಮಾನಿಯಂತೆ. ಅಂದೇ ಮತ್ತೊಬ್ಬ ಸ್ಟಾರ್ ಎದುರು ನಾನು ನಿಮ್ಮ ಫ್ಯಾನ್ ಅಲ್ಲಾ, ಅವರ ಅಭಿಮಾನಿ ಎಂದಿದ್ದರಂತೆ. ಅಪ್ಪು ಹೀಗೆ ಒಂದು ದಿನ ಫ್ಲೈಟ್ ನಲ್ಲಿ ಅಮ್ಮ ಪಾರ್ವತಮ್ಮ ಜೊತೆ ಚೆನ್ನೈಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ನಟ ಶಂಕರ್ ನಾಗ್ ಸಿಕ್ಕಿದ್ರು.
ಅಮ್ಮ ಮೊದಲೇ ನನಗೆ ಶಂಕರ್ ನಾಗ್ ಮತ್ತು ಅನಂತ್ ನಾಗ್ ಬಗ್ಗೆ ಹೇಳಿದ್ದರು. ಅವರ ಆ್ಯಕ್ಟಿಂಗ್, ಸಿನಿಮಾ ಪ್ರೀತಿ ಬಗ್ಗೆ ನನಗೆ ಹೇಳುತ್ತಿದ್ದರು. ಹೀಗೆ ಒಂದು ದಿನ ಶಂಕರ್ ನಾಗ್ ಸರ್ ಸಿಕ್ಕಾಗ ನಾನು ಅವರ ಎದುರೇ ನಾನು ನಿಮ್ಮ ಫ್ಯಾನ್ ಅಲ್ಲಾ, ನಾನು ಅನಂತ್ ನಾಗ್ ಅವರ ಫ್ಯಾನ್ ಅಂದ್ರಂತೆ. ಆಗಿನ್ನೂ ನಾನು ಪುಟ್ಟ ಹುಡುಗ. ಶಂಕರ್ ನಾಗ್ ನನ್ನ ಮಾತು ಕೇಳಿ ನಗಲಾರಂಭಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ನಾನು ಅಂದಿನಿಂದಲೂ ಅನಂತ್’ನಾಗ್ ಎಂದರೆ ಫೇವರೀಟ್, ಅವರ ಅಭಿಮಾನಿ ನಾನು. ಆದರೆ ಈಗ ನಾನು ಶಂಕರ್ ನಾಗ್ ಮತ್ತು ಅನಂತ್ ನಾಗ್ ಇಬ್ಬರ ಅಭಿಮಾನಿಯಾಗಿದ್ದೇನೆ ಎನ್ನುತ್ತಾರೆ. ಈ ಕುತೂಹಲ ಸಂಗತಿಯನ್ನ ಪುನೀತ್ ರಾಜ್‍ಕುಮಾರ್ ಕವಲುದಾರಿ ಸಿನಿಮಾ ಆಡಿಯೋ ಲಾಂಚ್ ಟೈಮಲ್ಲಿ ಹಂಚಿಕೊಂಡ್ರು.
Comments