ಸೆಲ್ಫಿ ಕೇಳಲು ಬಂದ ಯುವತಿಯಿಂದ ನಟ ಪ್ರಭಾಸ್ ಕೆನ್ನೆಗೆ ಏಟು…!!! ವಿಡಿಯೋ ವೈರಲ್...

ಸಾಮಾಜಿಕ ಜಾಲತಾಣಗಳಲ್ಲಿ ನಟ ಪ್ರಭಾಸ್ ಯಾವಾಗಲೂ ಸುದ್ದಿಯಲ್ಲಿರುವ ನಟ. ಇತ್ತೀಚೆಗೆ ನಟಿ ಅನುಷ್ಕಾ ಜೊತೆ ಪ್ರಭಾಸ್ ಒಟ್ಟಿಗೆ ಜಪಾನ್ ಗೆ ಹೋಗುತ್ತಿದ್ದಾರೆ ಎಂಬ ಸುದ್ದಿಯೂ ಭಾರೀ ಮಟ್ಟದಲ್ಲಿ ಚರ್ಚೆಯಾಗಿತ್ತು. ನಾವಿಬ್ರು ಕಪಲ್ಸ್ ಅಲ್ಲಾ, ಜಸ್ಟ್ ಫ್ರೆಂಡ್ಸ್ ಅಂತಾ ಇಬ್ಬರು ಎಷ್ಟೇ ಹೇಳಿದ್ರು ಅಭಿಮಾನಿಗಳು ನಂಬೋಕೆ ರೆಡಿಯಿಲ್ಲ ಬಿಡಿ. ಆದರೆ ಪ್ರಭಾಸ್’ಗೆ ಯುವತಿಯೊಬ್ಬಳು ಕೆನ್ನೆಗೆ ಹೊಡೆದಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅರೆ..! ಏನಪ್ಪಾ ಹೇಳ್ತಿದ್ದಾರೆ ಅನ್ಕೊಂಡ್ರಾ …?
ಹೌದು ನಟ ಪ್ರಬಾಸ್ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್. ಹೇಳಿ ಕೇಳಿ ಡಾರ್ಲಿಂಗ್ ಪ್ರಬಾಸ್‘ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋಯರ್ಸ್. ಟಾಲಿವುಡ್’ನಷ್ಟೇ ಅಲ್ಲಾ, ಹೊರ ದೇಶಗಳಲ್ಲಿ ಪ್ರಭಾಸ್ ಮ್ಯಾನರಿಸಂ ಗೆ ಅವರ ಸ್ಟೈಲ್’ ಗೆ ಫಿದಾ ಆಗೋದವರೇ ಇಲ್ಲ. ಆದರೆ ಅಭಿಮಾನಿಯೊಬ್ಬರು ಸೆಲ್ಫಿ ಕೇಳಲು ಹೋಗಿ ಕೆನ್ನೆಗೆ ಬಾರಿಸಿರುವ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ನಟ ಪ್ರಭಾಸ್‍ರನ್ನು ನೋಡಿದ ಆ ಹುಡುಗಿ ನೆಚ್ಚಿನ ಸ್ಟಾರ್ ಕಂಡು ಹಿರಿ ಹಿರಿ ಹಿಗ್ಗಿದಳು. ಪ್ರಭಾಸ್ ಬಳಿ ಹೋದ ಆ ಹುಡುಗಿ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಪೋಸ್ ಕೊಡುತ್ತಾರೆ. ಆದರೆ ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆದ ಸಂಭ್ರಮದಲ್ಲಿದ್ದ ಯುವತಿ ಸ್ಥಳದಲ್ಲೇ ಕುಣಿದು ಕುಪ್ಪಳಿಸಿ ಸಂತಸ ಪಟ್ಟಿದ್ದಾಳೆ. ಅಭಿಮಾನಿ ಫೋಟೋ ತೆಗೆಸಿಕೊಂಡು ಹೋಗುವ ಖುಷಿಯಲ್ಲಿಯೇ ಆಕೆ ಪ್ರಭಾಸ್ ಕೆನ್ನೆ ಟಚ್ ಮಾಡಲು ಮುಂದಾಗಿದ್ದಾಳೆ. ಆ ಬಿರುಸಿನಲ್ಲೇ ಪ್ರಭಾಸ್ ಕೆನ್ನೆಗೆ ಸವರಿದ್ದಾಳೆ. ಅದು ವಿಡಿಯೋದಲ್ಲಿ ನಟನ ಕೆನ್ನೆಗೆ ಬಾರಿಸಿದ ಹಾಗೇ ಕಾಣುತ್ತದೆ. ಆಕೆ ಮಾಡಿದ ರೀತಿಗೆ ಕ್ಷಣ ಪ್ರಭಾಸ್ ಅವಕ್ಕಾಗಿದ್ದು ಆ ನಂತರ ಸರಿಹೋಗಿದ್ದಾರೆ. ಅಂದಹಾಗೇ ನಟ ಪ್ರಭಾಸ್ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರ ಈಗಾಗಲೇ ಸಾಕಷ್ಟು ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಅಂದಹಾಗೇ ಈ ಸಿನಿಮಾ ಸುಮಾರು 300 ಕೋಟಿ ರೂ, ಬಿಗ್ ಬಜೆಟ್’ನಲ್ಲಿ ಮೂಡಿ ಬರುತ್ತಿದೆ. ಅಂದಹಾಗೇ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ನಾಯಕಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ.
Comments