ಬುಲ್ ಬುಲ್ ಬೆಡಗಿ ಸಹೋದರಿ ಸೀರಿಯಲ್’ಗೆ ಪ್ರೊಡ್ಯೂಸರ್ ಅಂತೆ ಈ ಸ್ಟಾರ್ ನಟ..?!!!

ಅಂದಹಾಗೇ ಸ್ಯಾಂಡಲ್ವುಡ್ ಕ್ವೀನ್, ಡಿಂಪಲ್ ಬೆಡಗಿ ರಚಿತಾ ರಾಂ ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್. ಅಂದಹಾಗೇ ಡಿಂಪಲ್ ಕ್ವೀನ್ ಸ್ಯಾಂಡಲ್ವುಡ್’ನಲ್ಲಿ ಬೆಳೆದ ಹಾಗೇ, ರಚಿತಾರಾಂ ಸಹೋದರಿ ಕೂಡ ಕನ್ನಡ ಕಿರುತೆರೆಯಲ್ಲಿ ಬೆಳೆದಿದ್ದಾರೆ. ಅಂದಹಾಗೇ ನಂದಿನಿ ಸಿರಿಯಲ್ ಮೂಲಕ ಜನಪ್ರಿಯಗಳಿಸಿರುವ ನಟಿ ನಿತ್ಯಾ ರಾಂ ಸ್ಯಾಂಡಲ್’ವುಡ್ ಸ್ಟಾರ್'ವೊಬ್ಬರ ನಿರ್ಮಾಣದಲ್ಲಿ ನಟಿಸಲಿದ್ದಾರೆ. ಈಗಾಗಲೇ ಉದಯ ಟಿವಿಯಲ್ಲಿ ಪ್ರಸಾರವಾಗುವ ನಂದಿನಿ ಧಾರವಾಹಿ ಮುಂದಿನ ಭಾಗಕ್ಕೆ ಕನ್ನಡದ ನಟ ದುಡ್ಡು ಹಾಕಲಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ಅವರೇ ನಂದಿನಿ ಸೀರಿಯಲ್ ನ ನೆಕ್ಸ್ಟ್ ಪ್ರೊಡ್ಯೂಸರ್. ಅಂದಹಾಗೇ ಧಾರವಾಹಿಯಲ್ಲಿ ಗ್ರಾಫಿಕ್ಸ್ , ವೈವಿದ್ಯಮಯ ಕಥೆ, ಪಾತ್ರಗಳ ಅಭಿನಯ ಎಲ್ಲವೂ ಡಿಫರೆಂಟ್ ಆಗಿದೆ. ಇನ್ನು ಮುಂದೆ ಸೀರಿಯಲ್ ನಿರ್ಮಾಣದ ಜವಬ್ದಾರಿಯನ್ನು ಮೊಟ್ಟ ಮೊದಲ ಬಾರಿಗೆ ರಮೇಶ್ ಅರವಿಂದ್ ಅವರು ವಹಿಸಲಿದ್ದು, ಈ ಮೂಲಕ ಮೊಟ್ಟ ಮೊದಲ ಬಾರಿಗೆ ನಟ ರಮೇಶ್ ಕಿರುತೆರೆಗೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ವಂದನ ಮೀಡಿಯಾ ಕ್ರಿಯೇಷನ್ಸ್ ಅಡಿಯಲ್ಲಿ ಈ ಸೀರಿಯಲ್ ಪ್ರಸಾರವಾಗುತ್ತಿದೆ.
Comments