ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಆಡಿ ಕಾರ್ ಗೆದ್ದ ಸ್ಟಾರ್ ನಟ..?!!!

ಅಂದಹಾಗೇ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಫೇಮಸ್ . ಕರಣ್ ಜೋಹರ್ ಅವರು ಈ ಶೋನ ನಿರೂಪಕರು. ಅಂದಹಾಗೇ ಈ ಶೋ ನಲ್ಲಿ ಭಾಗವಹಿಸಿದ್ದ ಸ್ಟಾರ್ ನಟನಿಗೆ ಗಿಫ್ಟ್ ರೂಪದಲ್ಲಿ ಆಡಿ ಕಾರ್ ಲಭಿಸಿದೆ. ಅಂದಹಾಗೇ ಆ ಕಾರಿನ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಮಾತೇ ಮಾತು. ಈ ಶೋನ ಸ್ಪರ್ಧೆಯಲ್ಲಿ ಆಡಿ ಕಾರ್’ನ್ನು ಆ ನಟ ಗೆದ್ದಿದ್ದಾರೆ. ಅಂದಹಾಗೇ ಆ ಐಷರಾಮಿ ಕಾರ್ ಪಡೆದುಕೊಂಡ ಕಲಾವಿದ ಯಾರು ಗೊತ್ತಾ..?
ಆಡಿ ಸಂಸ್ಥೆಯ ಎ5 ಸ್ಪೋರ್ಟ್ ಬ್ಯಾಕ್ ಕಾರು ಅಜಯ್ ದೇವಗನ್ ಅವರಿಗೆ ಗಿಫ್ಟ್ ಆಗಿ ಸಿಕ್ಕಿದೆ. ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಡಿ ತನ್ನ 2ನೇ ತಲೆಮಾರಿನ ಎ5 ಸ್ಪೋರ್ಟ್ ಬ್ಯಾಕ್ ಕಾರು ಆವೃತ್ತಿಗಳನ್ನು 2017ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ವಿನೂತನ ಕಾರುಗಳ ಆರಂಭಿಕ ಬೆಲೆ 54 ಲಕ್ಷ ರೂ. ಅಂದಹಾಗೇ ಈ ಖಾರುಗಳು ದೂರದ ಪ್ರಯಾಣಕ್ಕೆ ಉತ್ತಮವಾಗಿವೆ. ಕಾರಿನ ಮೌಲ್ಯ ದುಬಾರಿಯಾದ್ರೂ ಜನರ ಆಸೆ ಮಾತ್ರ ಕಡಿಮೆಯಾಗಿಲ್ಲ.ಆಡಿ ಇಂಡಿಯಾದ ರಾಹಿಲ್ ಅನ್ಸಾರಿ ಮಾತನಾಡಿ, ಆಡಿ ಇಂಡಿಯಾ ಇಂಥ ಕಾರ್ಯಕ್ರಮಗಳೊಂದಿಗೆ ಸದಾ ಕೈಜೋಡಿಸಿಕೊಂಡು ಬಂದಿದೆ. ಮನರಂಜನೆ ಮತ್ತು ಸ್ಫೋರ್ಟ್ ಶೋಗಳಿಗೆ ಜತೆಯಾಗುತ್ತಿದ್ದು, ಕಾಫಿ ವಿತ್ ಕರಣ್ ಮೂಲಕ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದಿದ್ದಾರೆ.
Comments