ನಟಿ ಪಿಗ್ಗಿ ವಿರುದ್ಧ ಪಾಕಿಗಳ ಆಕ್ರೋಶ…!!!

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕ್ ಉಗ್ರರ ಮೇಲೆ ಭಾರತೀಯ ಸೈನಿಕರು ದಾಳಿ ನಡೆಸಿ ಸರಿ ಸುಮಾರು 300 ಉಗ್ರರನ್ನು ಸದೆ ಬಡಿದೆದಿದ್ದರು. ಅಂದಹಾಗೇ ಪ್ರತೀಕಾರದ ದಾಳಿಗೆ ಹಲವು ತಾರೆಯರು ಸಂಭ್ರಮಿಸಿದರು. ಭಾರತೀಯರು ತಮ್ಮ ಯೋಧರನ್ನು ಕಳೆದುಕೊಂಡ ನೋವಿಗೆ ಸರಿಯಾಗಿ ತಕ್ಕ ಶಿಕ್ಷೆ ಮಾಡಿದ್ದೀರಿ ಎಂದು ವಾಯುಪಡೆಯನ್ನು ಅಭಿನಂಧಿಸಿದರು. ಇದರಂತೇ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಟ್ವೀಟ್ ಮಾಡುವುದರ ಮೂಲಕ ಭಾರತೀಯ ಯೋಧರನ್ನು ಕೊಂಡಾಡಿದ್ದರು. ನಟಿ ಪ್ರಿಯಾಂಕ ಚೋಪ್ರಾ ಕುಡ ಭಾರತೀಯ ಯೋಧರನ್ನು ಶ್ಲಾಘಿಸಿದ್ರು. ಟ್ವೀಟ್ ಮಾಡುವುದರ ಮೂಲಕ ಭಾರತೀಯ ವಾಯುಪಡೆಯನ್ನು ಅಭಿನಂದಿಸಿದರು. ಈ ವಿಚಾರವಾಗಿ ಪಾಕಿಗಳು ಪಿಗ್ಗಿ ಮೇಲೆ ಆಕ್ರೋಶಿತರಾಗಿದ್ದಾರೆ.
ಸದ್ಯ ಪ್ರಿಯಾಂಕ ಅವರ ಈ ಟ್ವೀಟ್ ಬಗ್ಗೆ ಪಾಕಿಸ್ತಾನ ನೆಟ್ಟಿಗರು ಗರಂ ಆಗಿದ್ದು, ಭಾರತಕ್ಕೆ ಬೆಂಬಲ ನೀಡಿ ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ ಪರಿಣಾಮ ಅಸಮಾಧಾನ ವ್ಯಕ್ತಪಡಿಸಿ ಆನ್‍ಲೈನ್ ಮೂಲಕ ಅಭಿಯಾನವನ್ನು ಆರಂಭಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಯೂನಿಸೆಫ್ ಸೌಹಾರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ ಏರ್ ಸ್ಟ್ರೈಕ್ ನಡೆಸಿದ ಬೆನ್ನಲ್ಲೆ ಪ್ರಿಯಾಂಕ ಅವರು ಕೂಡ ಟ್ವೀಟ್ ಮಾಡಿದ್ದರು. ಆದ್ದರಿಂದ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬುವುದು ಪಾಕ್ ವಾದವಾಗಿದೆ. ಈ ಆನ್ ಲೈನ್ ಅರ್ಜಿಗೆ ಸಾವಿರಾರರು ಮಂದಿ ಸಹಿ ಕೂಡ ಮಾಡಿದ್ದಾರೆ. ಪ್ರಮುಖವಾಗಿ ಯೂನಿಸಿಫ್ ಹ್ಯಾಶ್ ಟ್ಯಾಗ್ ಬಳಿಸಿ ಟ್ರೆಂಡ್ ಮಾಡುತ್ತಿದ್ದಾರೆ. ಆದರೆ ಪಾಕ್ ನೆಟ್ಟಿಗರ ಈ ಆನ್ ಲೈನ್ ಪಿಟಿಷನನ್ನು ಹೇಗೆ ಸ್ವೀಕಾರ ಮಾಡುತ್ತದೆ ಎಂಬುವುದನ್ನು ಕಾದುನೋಡ ಬೇಕಿದೆ.ಅಂದಹಾಗೇ ಪ್ರಿಯಾಂಕ ಚೋಪ್ರಾ ಅವರ ಇಬ್ಬರು ಪೋಷಕರು ಕೂಡ ಭಾರತ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಈ ಹಿಂದೆಯೂ ಕೂಡ ಪ್ರಿಯಾಂಕರ ಹಿಂದಿಯವರು ಎಂದು ಗೂಗಲ್ ಮಾಡಿ ಪ್ರಶ್ನಿಸಿದ್ದ ಮಂದಿಗೆ ತಿರುಗೇಟು ನೀಡಿದ್ದ ಅವರು, ಹಿಂದಿ ಎಂದರೆ ಭಾಷೆ ಅಷ್ಟೇ, ನಾನು ಹಿಂದೂ, ಅದು ಧರ್ಮ ಎಂದಿದ್ದರು.
Comments