ಯಶ್ ಲೈಫ್ ಗೆ ರಸಗುಲ್ಲಾ ಆಗಮನ : ರಾಧಿಕಾ ಹೇಳೋದೇನು ಗೊತ್ತಾ..?

ಸದ್ಯ ಯಶ್ ಸ್ಯಾಂಡಲ್ವುಡ್ನಲ್ಲಿ ಗಲ್ಲಾ ಪೆಟ್ಟಿಗೆಯ ಸರದಾರನಾಗಿದ್ದಾರೆ. ಕೆಜಿಎಫ್ ಅಂತಹ ಸಿನಿಮಾ ಮಾಡಿ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಒಂದು ಮುದ್ದಾದ ಹೆಣ್ಣು ಮಗುವಿಗೂ ಅಪ್ಪನಾಗಿರುವ ಯಶ್ ಸದ್ಯ ರಸಗುಲ್ಲಾ ಜೊತೆ ಟೈಮ್ ಸ್ಪೆಂಡ್ ಮಾಡ್ತಾರಂತೆ. ಇದನ್ನು ಕಂಡು ರಾಧಿಕಾ ಕೂಡ ಗರಂ ಆಗಿದ್ದಾರೆ. ನನಗೂ ಪ್ರೀತಿ ಕೊಡಿ ಎಂದು ಒಲವಿನಿಂದಲೇ ಮುನಿಸಿಕೊಂಡಿದ್ದಾರೆ. ರಸಗುಲ್ಲಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೆಸರೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಅಂತದ್ರಲ್ಲಿ ಯಶ್ ಗೆ ಇಷ್ಟವಾಗದೇ ಇರುತ್ತಾ..? ಅಂದಹಾಗೇ ನಾವು ಹೇಳ್ತಿರೋ ರಸಗುಲ್ಲಾ ತಿನ್ನೋ ತಿಂಡಿಯಲ್ಲಾ ರೀ…! ಅಂದಹಾಗೇ ಇದ್ದಕ್ಕಿದ್ದ ಹಾಗೇ ಯಶ್ ಜೀವನದಲ್ಲಿ ಬಂದ ರಸಗುಲ್ಲಾ ಯಾರಪ್ಪ..?
ಅಂತಾ ಯೋಚಿಸ್ತಿದ್ದೀರಾ. ಖಂಡಿತಾ ಅವರನ್ನು ಕಂಡರೆ ಯಶ್ಗೆ ಎಲ್ಲಿಲ್ಲದ ಪ್ರೀತಿ, ಯಾರನ್ನು ಫಸ್ಟ್ ಮಾತಾಡಸದೇ ಇದ್ರೂ ಅವರತ್ತಿರ ಹೋಗಿ ಮಾತನಾಡಿಕೊಂಡು ಬರುತ್ತಾರೆ ರಾಖಿಭಾಯ್. ಅವರನ್ನು ಒಮ್ಮೆ ನೋಡಿಲ್ಲಾ ಅಂದ್ರು ನಿದ್ದೆ ಬರಲ್ವಂತೆ ನಮ್ಮ ರಾಜಾಹುಲಿಗೆ. ನಿಂತ್ರೂ-ಕುಂತ್ರೂ ರಸಗುಲ್ಲಾದ್ದೇ ಯೋಚನೆ. ಅಂದಹಾಗೇ ರಾಕಿಂಗ್ ಸ್ಟಾರ್ ಯಶ್ ಲೈಫ್ ಗೆ ಬಂದಿರೋದು ಬೇರೆ ಯಾರು ಅಲ್ಲಾ, ತಮ್ಮ ಮುದ್ದಿನ ಮಗಳು ರಸಗುಲ್ಲಾ. ಅಂದಹಾಗೇ ಯಶ್ ಅಂಡ್ ರಾಧಿಕಾ ರ ಕ್ಯೂಟ್ ಕಿಡ್ ನ್ನು ಯಶ್, ರಸಗುಲ್ಲಾ ಅಂತಾನೇ ಕರೆಯೋದಂತೆ.
ಯಶ್ ಪ್ರೀತಿಯಿಂದ ತಮ್ಮ ಲವ್ಲಿ ಡಾಟರ್ ನ್ನು ರಸಗುಲ್ಲ ಎಂದು ಕರೆಯುತ್ತಾರೆ. ಎಲ್ಲರ ಫೇವರೀಟ್ ರಸಗುಲ್ಲಾ ಅಂದ್ರೆ ನನಗೆ ಪಂಚ ಪ್ರಾಣ ಅಂತಾರೆ ಮಿ. ರಾಮಾಚಾರಿ.ಈ ಹಿಂದೆ ಯಶ್ ಮಗಳ ಹೆಸರಿನ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿತ್ತು. ಯಶಿಕಾ ಅಂತಾ ಯಶ್ ಮಗಳಿಗೆ ಹೆಸರಿಡಬೇಕು ಎಂದು ಅಭಿಮಾನಿಗಳ ಮನವಿಯಾಗಿತ್ತು. ಆದರೆ ಇದರ ಬಗ್ಗೆ ಯಶ್ ಆಗಲೀ ರಾಧಿಕಾರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ನಾವಿನ್ನು ಹೆಸರಿಟ್ಟಿಲ್ಲ, ನಾಮಕರಣವಾದಾಗ ಖಂಡಿತಾ ಹೆಸರಿನ ಬಗ್ಗೆ ಯೋಚನೆ ಮಾಡ್ತೀವಿ ಅಂತಾ ಹೇಳಿ ಸುಮ್ಮನಾಗಿದ್ದರು. ಆದರೆ ಯಶ್ ಮಗಳನ್ನು ಪ್ರೀತಿಯಿಂದ ರಸಗುಲ್ಲಾ ಅಂತಾನೇ ಕರೆಯೋದಂತೆ.
Comments