ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಅಡ್ಡಿಯಾಗ್ತಾರ ಸಿಎಂ ಪುತ್ರ..!?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ… ಆದರೆ ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಸಿನಿಮಾ ಬಿಡುಗಡೆ ಯಾವಾಗ ಎಂಬ ಗುಟ್ಟನ್ನು ಮಾತ್ರ ಚಿತ್ರತಂಡ ಬಿಟ್ಟುಕೊಟ್ಟಿಲ್ಲ…. ದರ್ಶನ್ ಅವರ ಕೆರಿಯರ್ ನಲ್ಲೆ ಇದು ಬಹು ಮುಖ್ಯವಾದ ಚಿತ್ರವಾಗಿದೆ… ಆದರೆ ಸಿನಿಮಾ ಯಾಕೊ ಬಿಡುಗಡೆ ಆಗೋ ರೀತಿ ಕಾಣುತ್ತಿಲ್ಲ…
ಪ್ರತಿಬಾರಿಯು ಗ್ರಾಫಿಕ್ಸ್ ಕೆಲಸದಿಂದ ಕುರುಕ್ಷೇತ್ರ ಬಿಡುಗಡೆ ಲೇಟಾಗುತ್ತಿದೆ ಎಂದು ನಿರ್ಮಾಪಕರು ಹೇಳುತ್ತಿದ್ದರು. ಇದೀಗ ಕುರುಕ್ಷೇತ್ರ ಸಿನಿಮಾಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಈ ಸಿನಿಮಾಗೆ ನಿಖಿಲ್ ಕುಮಾರಸ್ವಾಮಿ ಅಡ್ಡಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ.. ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ ಎಂದು ಕೂಡ ಹೇಳಲಾಗುತ್ತಿದೆ.. ಒಂದು ವೇಳೆ ನಿಖಿಲ್ ಸ್ಪರ್ಧಿಸಿದ್ರೆ ಕುರುಕ್ಷೇತ್ರ ಬಿಡುಗಡೆ ಗೆ ಸಮಸ್ಯೆಯಾಗೋದು ಪಕ್ಕಾ ಗ್ಯಾರಂಟಿಯಾಗಿದೆ.
ಚುನಾವಣೆಯ ದಿನಾಂಕ ಘೋಷಣೆಯಾದರೆ ಸಾಕು ನೀತಿ ಸಂಹಿತೆ ಜಾರಿಯಾಗುತ್ತದೆ. ಚುನಾವಣಾ ನೀತಿ ಸಂಹಿತೆ ಮುಗಿಯುವವರೆಗೂ ಸಿನಿಮಾ ರಿಲೀಸ್ ಮಾಡುವಂತಿಲ್ಲ. ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚುನಾವಣೆ ನೀತಿ ಸಂಹಿತೆ ಮುಗಿಯುವವರೆಗೂ ಸಿನಿಮಾ ಬಿಡುಗಡೆಯಾಗಲ್ಲ.. ಒಟ್ಟಾರೆ ಕುರುಕ್ಷೇತ್ರ ಸಿನಿಮಾವನ್ನು ಕಣ್ತುಂಬಿಕೊಳ್ಳಲ್ಲು ಅಭಿಮಾನಿಗಳು ಇಷ್ಟು ಎಷ್ಟು ದಿನ ಕಾಯೋಬೇಕೋ ಗೊತ್ತಿಲ್ಲ..
Comments