ರಾಕಿಂಗ್ ದಂಪತಿಯ ಮಗಳ ಹೆಸರೇನು...? ನಾಮಕರಣ ಯಾವಾಗ ಗೊತ್ತಾ…?

ಕಳೆದ ವರ್ಷದ ಅಂತ್ಯದಲ್ಲಿ ರಾಕಿಂಗ್ ಸ್ಟಾರ್ ಗೆ ಡಬಲ್ ಧಮಾಕ ಸಿಕ್ಕಿತ್ತು.. ಒಂದು ಕಡೆ ಕೆಜಿಎಫ್ ಬಿಡುಗಡೆಯಾದರೆ ಮತ್ತೊಂದು ಕಡೆ ಮುದ್ದು ಮಹಾಲಕ್ಷ್ಮಿ ಮನೆಗೆ ಬಂದಿದ್ದಳು… ಸದ್ಯಕ್ಕೆ ಯಶ್ ಮನೆಯಲ್ಲಿ ಸಂಭ್ರಮದ ವಾತವರಣ ನೆಲೆಯೂರಿದೆ…ಡಬಲ್ ಖುಷಿಯಲ್ಲಿ ಯಶ್-ರಾಧಿಕಾ ಪಂಡಿತ್ ಇದ್ದರೆ, ಅಭಿಮಾನಿಗಳು ಮಾತ್ರ ಯಶ್ ಮುದ್ದು ಮಗಳ ಹೆಸರಿನ ಕುರಿತು ಸಿಕ್ಕಾಪಟ್ಟೆ ಚರ್ಚೆ ನಡೆಸುತ್ತಿದ್ದಾರೆ.
ಯಶ್-ರಾಧಿಕಾ ಪಂಡಿತ್ ಮಗಳಿಗೆ 'ಯಶಿಕಾ' ಅಂತ ಹೆಸರಿಡಬೇಕು ಎಂದು ಕೆಲ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ರಾಶಿ ಎನ್ನುವ ಹೆಸರಿಡಬೇಕು ಎಂದು ಒತ್ತಾಯ ಮಾಡುತ್ತಿದ್ದರು… ಆದರೆ ಮಗಳ ಹೆಸರಿನ ಬಗ್ಗೆ ಇನ್ನೂ ಯಾವುದೇ ಆಯ್ಕೆ ಮಾಡಿಲ್ಲ ಮೊಗ್ಗಿನ ಮನಸಿನ ಹುಡುಗಿ ಸ್ಪಷ್ಟಪಡಿಸಿದ್ದಾರೆ. ಮಗಳಿಗೆ ಐದು ತಿಂಗಳು ತುಂಬಿದಾಗ ನಾಮಕರಣ ಮಾಡುತ್ತೇವೆ ಎಂದು ನಟಿ ರಾಧಿಕಾ ತಿಳಿಸಿದ್ದಾರೆ. . ಯಶ್-ರಾಧಿಕಾ ಪಂಡಿತ್ ಮಗಳಿಗೆ ಸದ್ಯ ಮೂರು ತಿಂಗಳು ತುಂಬಿದೆ. ಹೀಗಾಗಿ ಯಶ್-ರಾಧಿಕಾ ಪಂಡಿತ್ ಮಗಳ ಹೆಸರನ್ನು ತಿಳಿದುಕೊಳ್ಳಲು ಅಭಿಮಾನಿಗಳು ಇನ್ನೂ ಎರಡು ತಿಂಗಳು ಕಾಯಲೇಬೇಕು… ಒಟ್ಟಿನಲ್ಲಿ ಯಶ್ ಬಾಕ್ಸ್ ಆಪೀಸ್ ನ ಸುಲ್ತಾನ ಆಗಿಬಿಟ್ಟಿದ್ದಾರೆ. ಇದೀಗ ಕೆಜಿಎಫ್ 2 ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ.
Comments