ವಿಂಗ್ ಕಮಾಂಡರ್ ಅಭಿನಂದನ್ ಪಾತ್ರದಲ್ಲಿ ಮಿಂಚಲಿದ್ದಾರೆ ಕನ್ನಡದ ಈ ಸ್ಟಾರ್ ನಟ..!!

ಪುಲ್ವಾಮ ದಾಳಿಯ ನಂತರ ನಮ್ಮ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆದವು.. ಸೇನೆಗೆ ಸೇರಿಕೊಂಡು ನಮ್ಮ ಭಾರತಮಾತೆಯ ಸೇವೆ ಮಾಡಬೇಕು ಎಂದು ಅದೆಷ್ಟೊ ಯುವಕರು ನಿರ್ಧಾರ ಮಾಡಿಕೊಂಡರು.. ಇದೇ ಹಿನ್ನಲೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಬಂಧಿಸಿಟ್ಟುಕೊಂಡಿತ್ತು.. ನಂತರ ಅವರನ್ನು ಬಿಡುಗಡೆ ಮಾಡಿದರು. ಅವರಿಗೆ ಇಡೀ ಚಿತ್ರರಂಗವಷ್ಟೆ ಅಲ್ಲದೆ ಎಲ್ಲಾ ಕ್ಷೇತ್ರದವರು ಅವರಿಗೆ ಶುಭಾಷಯದ ಮಹಾ ಪೂರವನ್ನೆ ತಿಳಿಸಿದರು.. ಈ ಬಗ್ಗೆ ಸಿನಿಮಾ ಆಲೋಚನೆಯಲ್ಲಿದ್ದಾರೆ ಕೆಲವು ನಿರ್ದೇಶಕರು…
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ನಟಸಾರ್ವಭೌಮ' ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದೆ… ಅವರ ಮುಂದಿನ ಸಿನಿಮಾ 'ಯುವರತ್ನ' ಸಿನಿಮಾ ಚಿತ್ರೀಕರಣಕ್ಕಾಗಿ ಹುಬ್ಬಳ್ಳಿಗೆ ಹೋಗಿದ್ದ ಪುನೀತ್ ರಾಜಕುಮಾರ್, ವಾಪಸ್ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಚಿತ್ರದುರ್ಗದಲ್ಲಿ ಚಿತ್ರಮಂದಿರಕ್ಕೆ ತೆರಳಿದ್ದಾರೆ. 'ನಟಸಾರ್ವಭೌಮ' ವೀಕ್ಷಿಸುತ್ತಿದ್ದ ಪ್ರೇಕ್ಷಕರು ಪುನೀತ್ ರಾಜಕುಮಾರ್ ಅವರನ್ನು ಕಂಡು ಖುಷಿ ಪಟ್ಟಿದ್ದಾರೆ..
'ನಟಸಾರ್ವಭೌಮ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದುರ್ಗದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಪುನೀತ್ ರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.. ಈ ಸಮಯದಲ್ಲಿ ಮಾತನಾಡಿದ ಪುನೀತ್ ರಾಜಕುಮಾರ್, ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದಾರೆ.. ಇದು ಹೆಮ್ಮೆಯ ವಿಷಯವಾಗಿದೆ. ಅಭಿನಂದನ್ ಅವರ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಮಾಡುತ್ತೇನೆ ಎಂದು ತಿಳಿಸಿದರು..
Comments