ಕಿಚ್ಚ ಸುದೀಪ್ ಮೇಲೆ ದಾಖಲಾಯ್ತು ದೂರು..!? ಕಾರಣ ಏನ್ ಗೊತ್ತಾ..?
ಇತ್ತಿಷಿಗೆ ಸಾಕಷ್ಟು ಸ್ಟಾರ್ ಕಲಾವಿದರ ಮೇಲೆ ದೂರು ದಾಖಲು ಆಗುತ್ತಿವೆ.. ಇದೀಗ ಕಿಚ್ಚ ಸುದೀಪ್ ಮೇಲೆ ದೂರು ನೀಡಲು ಮುಸ್ಲಿಂ ಯುವಕರು ಮುಂದಾಗಿದ್ದಾರೆ.. ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ.. ಇದೀಗ ಆ ಸಿನಿಮಾದ ನಿರ್ದೇಶಕ ಮತ್ತಿ ಸುದೀಪ್ ಮೇಲೆ ದೂರು ದಾಖಲಿಸಿವಂತೆ ಮುಸ್ಲಿಂ ಯುವಕರು ಪಟ್ಟು ಹಿಡಿದಿದೆ.. ಈ ಘಟನೆ ನಡೆದಿರುವುದು ಬೀದರ್’ನಲ್ಲಿ… ಈ ಸಿನಿಮಾದ ಚಿತ್ರಿಕರಣದ ವೇಳೆ ವಿರೋಧ ವ್ಯಕ್ತವಾಗಿದೆ..
ಕೋಟೆಯಲ್ಲಿದ್ದ ಮುಸ್ಲಿಂ ಪ್ರಾರ್ಥನಾ ಸ್ಥಳದಲ್ಲಿ ಚಿತ್ರಿಕರಣ ಮಾಡುವ ಸಮಯದಲ್ಲಿ ಮುಸ್ಲಿಂ ಯುವಕರ ಗುಂಪಿನಿಂದ ಅಡ್ಡಿಯುಂಟಾಗಿದೆ. ಮಜೀದ್ ನಲ್ಲಿ ಹಿಂದು ಮೂರ್ತಿಗಳು ಇಟ್ಟಿದ್ದಕ್ಕೆ ಮುಸ್ಲಿಂ ಯುವಕರು ತೀರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೀದಿಯಲ್ಲಿ ಇಟ್ಟಿದ್ದ ಹಿಂದು ಮೂರ್ತಿ ತೆರವುಗೊಳಿಸಲು ರಾತ್ರೊ ರಾತ್ರಿ ಜಿಲ್ಲಾಧಿಕಾರಿ ಮನೆಯ ಎದುರು ಪ್ರತಿಭಟನೆ ನಡೆದಿದೆ. ಸೈರಾ ನರಸಿಂಹ ರೆಡ್ಡಿ ಇದೊಂದು ಇತಿಹಾಸವುಳ್ಳ ಸಿನಿಮಾವಾಗಿದೆ. ಹೀಗಾಗಿ ನಗರದ ಬಹುಮನಿ ಕೋಟೆಯಲ್ಲಿ ಹಿಂದೂ ಮೂರ್ತಿಗಳನ್ನಿಟ್ಟು ಶೂಟಿಂಗ್ ಸೆಟ್ ಹಾಕಲಾಗಿತ್ತು.. ಹಿಂದೂ ಮೂರ್ತಿಗಳನ್ನು ಇಟ್ಟಿದ್ದಕ್ಕೆ ತೀರ್ವ ಆಕ್ರೋಶ ಉಂಟಾಗಿದೆ..
ಹಿಂದು ಮೂರ್ತಿಗಳು ಹಾಗೂ ಚಿತ್ರೀಕರಣಕ್ಕೆ ಹಾಕಲಾಗಿದ್ದ ಸೇಟ್ ನ್ನ ರಾತ್ರೋ ರಾತ್ರಿ ಪೊಲೀಸರು ತೆರವುಗೊಳಿಸಿದ್ದಾರೆ. ಇದೀಗ ಬಹುಮನಿ ಕೋಟೆ ಸುತ್ತಮುತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ.
Comments