ಹುಳಿ ಮಾವಿನಕಾಯಿ ತಿನ್ನೋದಕೋಸ್ಕರನೇ ಸ್ಟಾರ್ ನಟಿ ಈ ಸಿನಿಮಾವನ್ನು ಒಪ್ಕೊಂಡ್ರಂತೆ..!!

ಸ್ಟಾರ್ ನಟರು ಸಿನಿಮಾದ ಕಥೆ ಕೇಳಿ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ… ಕೆಲವರಿಗೆ ಅದರಲ್ಲಿರುವ ಕಥೆ ಇಷ್ಟ ಆದರೆ ಮತ್ತೆ ಕೆಲವರು ಸಿನಿಮಾದ ಬೇರೆ ಬೇರೆ ಇಂಟರೆಸ್ಟಿಂಗ್ ವಿಷಯಕ್ಕಾಗಿ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ.. ಅದೇ ರೀತಿ ಇಲ್ಲೊಬ್ಬ ನಟಿ ಸಿನಿಮಾವನ್ನು ಒಪ್ಪಿಕೊಂಡಿರುವ ಬಗ್ಗೆ ಕಾರಣ ಕೊಟ್ಟಿರೋದನ್ನ ಕೇಳುದ್ರೆ ನಗಬೇಕೋ, ಅಳಬೇಕೋ ಒಂದು ಗೊತ್ತಾಗುವುದಿಲ್ಲ… ಸದ್ಯ ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹೊಸ ಅವತಾರದಲ್ಲಿ ತೆರೆ ಮೇಲೆ ಬರಲು ಸಿದ್ದವಾಗುತ್ತಿದ್ದಾರೆ.. ಪಿಗ್ಗಿಯ ಮುಂದಿನ ಸಿನಿಮಾ 'ಚಪ್ಪಕ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದಲ್ಲಿ ದೀಪಿಕಾ ಆ್ಯಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ...ರಾಜಿ ಖ್ಯಾತಿಯ ಮೇಘನಾ ಗುಲ್ಜಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.. ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮೀ ಅಗರ್ ವಾಲ್ ಪಾತ್ರದಲ್ಲಿ ದೀಪಿಕಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆ್ಯಸಿಡ್ ದಾಳಿಯ ನಂತರ ಬರುವಂತಹ ಪರಿಸ್ಥಿತಿಯನ್ನು ಹೆಣ್ಣು ಮಕ್ಕಳು ಎದುರಿಸಲು ಧೈರ್ಯ, ಮನೋಸ್ಥೈರ್ಯ ಇರಬೇಕು. ಈ ರೀತಿಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ ಹಾಗೂ ಈ ಸಿನಿಮಾಗೆ ದೀಪಿಕಾ ಹೆಚ್ಚು ಹೊಂದಿಕೊಳ್ಳುತ್ತಾರೆ… ಹಾಗಾಗಿ ಈ ಸಿನಿಮಾಗಾಗಿ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ನಿರ್ದೇಶಕಿ ಮೇಘನಾ ತಿಳಿಸಿದ್ದಾರೆ.. ಬಾಲಿಕಾ ವಧು ಖ್ಯಾತಿಯ ವಿಕ್ರಾಂತ್ ಮಾಸಿ ದೀಪಿಕಾಗೆ ಈ ಚಿತ್ರದಲ್ಲಿ ಸಾಥ್ ಕೊಡಲಿದ್ದಾರೆ. ಈ ಚಿತ್ರದಲ್ಲಿ ಮಾವಿನ ಕಾಯಿಗೆ ಉಪ್ಪು. ಮೆಣಸಿನ ಪುಡಿ ಹಾಕಿಕೊಂಡು ತಿನ್ನುವ ದೃಶ್ಯ ಇದೆ. ಮಾವಿನಕಾಯಿ ತಿನ್ನುವುದಕ್ಕಾಗಿಯೇ ನಾನು ಈ ಚಿತ್ರ ಒಪ್ಪಿಕೊಂಡೇ ಎಂದು ದೀಪಿಕಾ ತಮಾಷೆಯಾಗಿ ಹೇಳಿಕೊಂಡಿದ್ದಾರೆ….
Comments