ಕೊಹ್ಲಿ ಜೊತೆ ಡೇಟಿಂಗ್ ಮಾಡಿದ್ರಾ ಈ ಸ್ಟಾರ್ ನಟಿ…!!
ಸ್ಟಾರ್ ನಟ ನಟಿಯರು ಆಗಿಂದಾಗೆ ಡೇಟಿಂಗ್ ಹೋಗುವುದು ಕಾಮನ್…. ಡೇಟಿಂಗ್ ಅಂದ ತಕ್ಷಣ ಸಾಕಷ್ಟು ಕಲಾವಿದರು ನಮ್ಮ ಕಣ್ಣ ಮುಂದೆ ಬರುತ್ತಾರೆ… ಇದೀಗ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ.. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾಗಿ ಹ್ಯಾಪಿ ಲೈಫ್ ಲೀಡ್ ಮಾಡುತ್ತಿದ್ದಾರೆ.. ವಿರಾಟ್ ಮದುವೆಗೂ ಮೊದಲೇ ಸಾಕಷ್ಟು ನಟಿಯರ ಜೊತೆ ಡೇಟಿಂಗ್ ಮಾಡಿದ್ರು ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿತ್ತು…ಅದರಲ್ಲೂ ಮಿಲ್ಕಿ ಬ್ಯೂಟಿಯ ಹೆಸರು ಕೊಹ್ಲಿ ಜೊತೆ ತಳುಕು ಹಾಕಿಕೊಂಡಿತ್ತು…
ಆದರೂ ಕೊಹ್ಲಿ ಮತ್ತು ಅನುಷ್ಕಾ ಇದ್ಯಾವುದರ ಜೊತೆನೂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ… ನಂತರ ಒಂದೇ ಜಾಹಿರಾತಿನಲ್ಲಿ ಇಬ್ಬರು ನಟಿಸಿದ್ದರು.. ಅಲ್ಲಿಂದ ಇವರಿಬ್ಬರ ನಡುವಿನ ಗಾಸಿಪ್ ಮತ್ತಷ್ಟು ಸುದ್ದಿ ಮಾಡಿತ್ತು… ಇದೀಗ ಬಹಳಷ್ಟು ವರ್ಷಗಳ ನಂತರ ತಮನ್ನಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.. ವಿರಾಟ್ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ..2012ರ ಸಮಯದಲ್ಲಿ ವಿರಾಟ್ ಕೊಹ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ಆಗಿ ಆಗಷ್ಟೆ ಗುರುತಿಸಿಕೊಳ್ಳುತ್ತಿದ್ದರು.
ಅಷ್ಟರಲ್ಲಾಗಲೇ ತಮನ್ನಾ ಖ್ಯಾತಿ ಗಳಿಸಿಕೊಂಡಿದ್ದ ನಟಿ. ಅಂತಹ ಸಮಯದಲ್ಲಿ ಇಬ್ಬರು ಒಂದು ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು. ಅದಾದ ಬಳಿಕ ಇವರಿಬ್ಬರ ಬಗ್ಗೆ ಹೊಸ ಹೊಸ ಸುದ್ದಿಗಳು ಹರಿದಾಡಲು ಪ್ರಾರಂಭವಾಗಿದ್ದವು… ಜಾಹೀರಾತು ಮಾಡಬೇಕಾದರೇ ನಾನು ಕೊಹ್ಲಿ ಜೊತೆ ಒಂದು ಸ್ವಲ್ಪ ಸಮಯ ಮಾತನಾಡಿರುವುದು ಅಷ್ಟೇ. ಅದಾದ ನಂತರ ನಾನು ಕೊಹ್ಲಿ ಜೊತೆ ಮಾತಾಡಿಲ್ಲ ಮತ್ತು ಭೇಟಿ ಕೂಡ ಮಾಡಿಲ್ಲ ಎಂದು ನಟಿ ತಮನ್ನಾ ಸ್ಪಷ್ಟನೆಯನ್ನು ನೀಡಿದ್ದಾರೆ.
Comments