ಸ್ಯಾಂಡಲ್ ವುಡ್ನಲ್ಲೆ ಈ ದಾಖಲೆ ಮಾಡಿದ ಮೊದಲ ಹೀರೋಹಿನ್ ಎಂಬ ಪಟ್ಟ ಗಿಟ್ಟಿಸಿಕೊಂಡ ಕರ್ನಾಟಕದ ಕ್ರಶ್ …!!
ಸ್ಯಾಂಡಲ್ವುಡ್ ಸ್ಟಾರ್ ಹೀರೋಯಿನ್’ಗಳ ಸಾಲಿನಲ್ಲಿ ಸದ್ಯ ರಶ್ಮಿಕಾಗೆ ಮೊದಲ ಸ್ಥಾನ ಸಿಕ್ಕಿದೆ. ಕೆಲವೊಂದಿಷ್ಟು ದಿನ ವೈಯಕ್ತಿಕ ಬದುಕಿನ ಗಾಸಿಪ್’ಗಳಿಗೆ ಜನರ ಬಾಯಿಗೆ ಆಹಾರವಾಗಿದ್ದ ರಶ್ಮಿಕಾ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕನ್ನಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಈ ಕಿರಿಕ್ ಹುಡುಗಿ ಸದ್ಯ ಫ್ಯಾನ್ಸ್ ಮನ ಗೆಲ್ಲೋದರಲ್ಲಿ ಯಶಸ್ವಿಯಾಗಿದ್ದಾರೆ… ಸ್ವಲ್ಪ ದಿನಗಳ ಹಿಂದೆ ಬಂಡೀಪುರ ಅರಣ್ಯ ಕಾಪಾಡುವಲ್ಲಿ ನಮ್ಮೊಟ್ಟಿಗೆ ಕೈ ಜೋಡಿಸಿ ಎಂದಿದ್ದರು… ಈ ವಿಷಯವಾಗಿ ರಶ್ಮಿಕಾಳನ್ನು ಸಾಮಾಜಿಕ ಕಳಕಳಿ ಇರುವ ನಾಯಕಿ ಎಂದೇ ರಶ್ಮಿಕಾರನ್ನು ಕರೆಯಲಾಗುತ್ತಿದೆ. ಆದರೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ….
ಸಿನಿಮಾ ಬಿಡುಗಡೆಯಾಗುವಾಗ ಸಾಮಾನ್ಯವಾಗಿ ಥಿಯೇಟರ್ ಮುಂದೆ ಆ ಸಿನಿಮಾದ ಹೀರೋ ಕಟೌಟ್ ಹಾಕುವುದು ಗಾಂಧೀನಗರದಲ್ಲಿ ಕಾಮನ್ ಆಗಿಬಿಟ್ಟಿದೆ… ಆದರೆ ಈ ಬಾರಿ ಸ್ಯಾಂಡಲ್ ವುಡ್ ಹೀರೋಗಳನ್ನು ಮೀರಿಸಿ ನಿಂತಿದ್ದಾರೆ ನಾಯಕಿ ರಶ್ಮಿಕಾ ಮಂದಣ್ಣ. ಯಜಮಾನ ಸಿನಿಮಾ ನಿನ್ನೆಯಷ್ಟೆ ಬಿಡುಗಡೆಯಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ…, ನರ್ತಕಿ ಥಿಯೇಟರ್ ಮುಂದೆ ಚಾಲೆಂಜಿಂಗ್ ಸ್ಟಾರ್ ಆಳೆತ್ತರದ ಕಟೌಟ್ ಎಲ್ಲರನ್ನೂ ಸೆಳೆದಿತ್ತು. ದರ್ಶನ್ ಅಭಿಮಾನಿಗಳು ಮಾಡಿದ ಕೆಲಸವನ್ನೇ ಇದೀಗ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಕೂಡ ಮಾಡಿದ್ದಾರೆ.. ಇದೀಗ ಥಿಯೇಟರ್ ಮುಂದೆ ರಶ್ಮಿಕಾ ಕಟೌಟ್ ರಾರಾಜಿಸುತ್ತಿದೆ… ಇದು ಸ್ಯಾಂಡಲ್ ವುಡ್ ಮಟ್ಟಿಗೆ ದಾಖಲೆ ಎನ್ನಬಹುದು... ಈ ರೀತಿ ಹೀರೋಯಿನ್ ಗಳ ಬೃಹತ್ ಕಟೌಟ್ ಹಾಕಿ, ಅದಕ್ಕೆ ಹೂ ಮಾಲೆ ಹಾಕಿಸಿಕೊಂಡ ಹೆಗ್ಗಳಿಕೆ ಇದೀಗ ಕರ್ನಾಟಕದ ಕ್ರಶ್ ರಶ್ಮಿಕಾ ಪಾಲಾಗಿದೆ ಎನ್ನಬಹುದು.. ತಮಿಳು ಚಿತ್ರರಂಗಕ್ಕೆ ಕಾಲಿಟ್ಟರುವ ಸಾನ್ವಿಗೆ ಯಶಸ್ಸು ಸಿಗಲಿ ಅನ್ನೋದು ಅಭಿಮಾನಿಗಳ ಆಸೆ…
Comments