ಕಮಾಂಡರ್ ಅಭಿನಂದನ್ ರಿಲೀಸ್ ಆದ್ರು ನಿಲ್ಲದ ಪಾಕ್ ಕ್ಯಾತೆ ..?!!!



ನಿನ್ನೆಯಷ್ಟೇ ಕತ್ತಲು ಕವಿದು ಬೆಳಕು ಹರಿದಾಗಿದೆ. ಬೆಳಕಿನಲ್ಲಿ ಸಂಭ್ರಮಿಸುವ ಹಾಗೇ ಇಡೀ ಭಾರತವೇ ಖುಷಿಯಾಚರಣೆಯಲ್ಲಿ ಮುಳುಗಿಹೋಯ್ತು. ಭಾರತದ ಸುಪುತ್ರ ಪಾಕ್’ನೆಲದಿಂದ ರಿಲೀಸ್ ಆಗಿ ತಾಯ್ನಾಡಿಗೆ ಬಂದ ಸಂಭ್ರಮಕ್ಕೆ ನಮ್ಮವರು ಕುಣಿದು ಕುಪ್ಪಳಿಸಿದ್ರು. ಎಲ್ಲಾ ಕಂಡೀಷನ್’ಗಳನ್ನು ವಾಪಸ್ ಪಡೆದು ಶಾಂತಿ ಮಂತ್ರ ಜಪಿಸುತ್ತಾ, ಯುದ್ಧ ಬೇಡ ಮಾತುಕತೆಯಲ್ಲಿಯೇ ಕದನ ನಿಲ್ಲಿಸೋಣವೆಂದ ಕಿಡಿಗೇಡಿ ಪಾಕ್, ಈಗ ವಿಶ್ವಸಂಸ್ಥೆಗೆ ಹೋಗಲು ಸಜ್ಜಾಗಿದೆ.
ಭಾರತದ ವಿರುದ್ಧ ಆರೋಪಗಳ ಪಟ್ಟಿ ಹಿಡಿದು ದೂರು ಕೊಡಲು ಹೋಗುತ್ತಿದೆ. ಅಂದಹಾಗೇ ಪಾಕ್ ಬುದ್ಧಿ ನಾಯಿ ಬಾಲದ ಡೊಂಕಿನಂತೆ ಪದೇ ಪದೇ ಖ್ಯಾತೆ ತೆಗೆದು ಸುಖಾ ಸುಮ್ಮನೇ ಭಾರತದ ಮೇಲೆ ಎರಗುವಂತಿದೆ. ಅಂದಹಾಗೇ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಪಾಕ್ ನ ದೂರು ಕೊಡಲು ಮುಂದಿಡುತ್ತಿರುವ ಕಾರಣಗಳೇನು ಗೊತ್ತಾ..? ಮೊದಲಿನಿಂದಲೂ ಮೊಂಡುವಾದ ಮಾಡಿಕೊಂಡು ಬರುತ್ತಿರುವ ಪಾಕಿಸ್ತಾನ ಇದೀಗ ದಾಳಿ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಆರೋಪ ಮಾಡುತ್ತಿದೆ. ಭಾರತದ ವಾಯುಪಡೆ ನಡೆಸಿದ ದಾಳಿಯಲ್ಲಿ ಯಾವುದೇ ಉಗ್ರರು ಸಾವನಪ್ಪಿಲ್ಲ, ಭಾರತ ಹೇಳಿದಂತೆ ಬಾಲ್ ಕೋಟ್ ನಲ್ಲಿ ಯಾವುದೇ ಉಗ್ರ ನೆಲೆಗಳು ಇಲ್ಲ ಎಂದು ವಾದಿಸುತ್ತಿದ್ದ ಪಾಕಿಸ್ತಾನ, ಇದೀಗ ತನ್ನ ವಾದವನ್ನು ಸಮರ್ಥಿಸಲು ಹೊಸ ತಂತ್ರ ರೂಪಿಸಿದೆ. ಭಾರತ ನಡೆಸಿದ ದಾಳಿಯ ವೇಳೆ ಅರಣ್ಯದಲ್ಲಿ ಪೈನ್ ಮರಗಳು ಹಾನಿಯಾಗಿವೆ ಈ ವಿಚಾರವನ್ನು ಮುಂದಿಟ್ಟುಕೊಂಡು ಇದು ಜೈವಿಕ ಭಯೋತ್ಪಾದನೆ ಎಂದು ವಿಶ್ವಸಂಸ್ಥೆಗೆ ದೂರು ನೀಡಲು ಪಾಕಿಸ್ತಾನ ನಿರ್ಧರಿಸಿದೆ. ಅಂದಹಾಗೇ ಭಾರತೀಯ ವಾಯುಪಡೆ ನಡೆಸಿದ ದಾಳಿಯಿಂದಾಗಿ ನಮ್ಮ ಪರಿಸರ ನಾಶವಾಗಿದೆ. ಪೈನ್ ಮರಗಳು ನೆಲಕ್ಕುರುಳಿವೆ. ಅಪಾರ ಪ್ರಮಾಣದಲ್ಲಿ ನಮ್ಮ ಪರಿಸರ ಸರ್ವನಾಶವಾಗಿದೆ. ಇದರಿಂದ ಭಾರೀ ವ್ಯತಿರಿಕ್ತಪರಿಣಾಮ ಉಂಟಾಗಿದೆ. ಇದನ್ನು ಮುಂದಿಟ್ಟುಕೊಂಡು ನಾವು ಭಾರತದ ವಿರುದ್ಧ ದೂರು ಸಲ್ಲಿಸಲು ಸಜ್ಜಾಗಿದ್ದೇವೆ ಎಂದು ಪಾಕ್ ತಿಳಿಸಿದೆ.
Comments