ಬಾಲಿವುಡ್ ಸ್ಟಾರ್ ನಟರಿಂದ ಹರಿದುಬಂತು ಪೈಲೆಟ್ ಅಭಿನಂದನ್ ಗೆ ಅಭಿನಂದನೆಯ ಮಹಾಪೂರ...
ಕೊನೆಗೂ ಭಾರತೀಯ ವಿಂಗ್ ಕಮಾಂಡರ್ ಸಿಂಹದಂತೆ ಪಾಕ್ ನೆಲದಿಂದ ಬಿಡುಗಡೆಗೊಂಡು ಭಾರತವನ್ನು ಸೇರಿದ್ದಾರೆ. ಭಾರತೀಯರ ಸಂಭ್ರಾಮಚರಣೆ ಮುಗಿಲು ಮುಟ್ಟಿದೆ. ಸಾಮಜಿಕ ಜಾಲತಾಣಗಳಲ್ಲಿ ಅಭಿನಂದನ್’ಗೆ ಅಭಿಮಾನದ ಹೊಳೆಯೇ ಹರಿದುಬಂದಿದೆ. ಬಾಲಿವುಡ್ ಸ್ಟಾರ್ ನಟರೆಲ್ಲರೂ ನಾವು ಡಮ್ಮಿ ಹೀರೋಗಳು, ನಿಜವಾದ ಹೀರೋ ಅಭಿನಂದನ್ ವರ್ಧಮಾನ್ ಎಂದು ಬೆನ್ನು ತಟ್ಟಿದ್ದಾರ
ಬಾಲಿವುಡ್’ನ ಕಿಂಗ್ ಖಾನ್ ಶಾರುಖ್ ಟ್ವೀಟ್ ಮಾಡುವುದರ ಮೂಲಕ ಅಭಿನಂದನ್ ಗೆ ವಿಶ್ ಮಾಡಿದ್ದಾರೆ. ಮನೆಗೆ ಹಿಂದಿರುಗಿರುವ ವೀರ ಯೋಧ ಅಭಿನಂದನ್ ವರ್ಧಮಾನ್ ಅವರಿಗೆ ಸ್ವಾಗತ, ನಿಮ್ಮ ಧೈರ್ಯದಿಂದಲೇ ನಾವು ಶಕ್ತಿವಂತರಾಗಿದ್ದೇವೆ. ನಿಮಗೆ ನಾವು ಎಂದಿಗೂ ಕೃತಜ್ಞರಾಗಿದ್ದೇವೆ ಎಂದು ಟ್ವೀಟ್’ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಡಿಪ್ಪಿ ಪತಿ ರಣವೀರ್ ಸಿಂಗ್ ಕೂಡ ಟ್ವೀಟ್ ಮಾಡಿದ್ದು, ನಿಮ್ಮ ಧೈರ್ಯವೇ ಇಡೀ ದೇಶಕ್ಕೆ ಪ್ರೇರಣೆ ಎಂದು ಬರೆದುಕೊಂಡಿದ್ದಾರೆ. ಇವರಷ್ಟೇ ಅಲ್ಲದೇ ಬಾಲಿವುಡ್ ಸ್ಟಾರ್’ನಟರಾದ ಅನುಷ್ಕಾ ಶರ್ಮಾ,ಅಭಿಷೇಕ್ ಬಚ್ಚನ್ , ಅರ್ಜುನ್ ಕಪೂರ್ ದೀಪಿಕಾ ಪಡುಕೋಣೆ , ಆಲಿಯಾ ಭಟ್ ಸೇರಿದಂತೇ ಅನೇಕರು ಇಂಡಿಯಾನ್ ಫ್ಲಾಗ್ ಹಾಕುವುದುರ ಮೂಲಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿನಂದನ್’ಗೆ ಅಭಿನಂದನೆ ತಿಳಿಸಿದ್ದಾರೆ.
Comments