ಶಾಕಿಂಗ್...ಆಸ್ಪತ್ರೆಯಲ್ಲಿದ್ದ ನಟಿ ವಿಜಯಲಕ್ಷ್ಮಿಗೆ ಕಿರುಕುಳ : ಟಾರ್ಚರ್ ಕೊಟ್ಟಿದ್ಯಾರು ಗೊತ್ತಾ..?

ನಟಿ ವಿಜಯಲಕ್ಷ್ಮಿ ಸದ್ಯ ಮಲ್ಯಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದಾಖಲಾಗಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೇ ಮಾಧ್ಯಮಗಳಲ್ಲಿ ಕಲಾವಿದರನ್ನು ಅಂಗಲಾಚಿದ್ದ ವಿಡಿಯೋ ವೈರಲ್ ಆಗಿತ್ತು. ನಾಗಮಂಡಲದ ನಾಯಕಿ ಸ್ಟಾರ್ ಕಲಾವಿದರತ್ತಿರ ಕಷ್ಟ ಹೇಳಿಕೊಂಡರು ಇದೂವರೆಗೂ ಯಾವ ಸ್ಟಾರ್ ನಟರೂ ನನ್ನ ಬಳಿ ಬಂದಿಲ್ಲ, ಸುದೀಪ್ ಬಿಟ್ಟರೇ ಅವರ್ಯಾರಿಗೂ ನಾನು ಕಂಡಿಲ್ಲ, ಕರುಣೆ ತೋರಿಲ್ಲ ಎಂದು ಅಳಲು ತೋಡಿಕೊಂಡರು. ಇದೀಗ ಮತ್ತೆ ವಿಜಯಲಕ್ಷ್ಮಿ ಬಗ್ಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ನಟಿ ವಿಜಯಲಕ್ಷ್ಮಿಗೆ ಮಲ್ಯ ಆಸ್ಪತ್ರೆಯಿಂದ ಹೊರ ಹೋಗುವಂತೆ ಒತ್ತಾಯಿಸಿ ಮಲ್ಯ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ವಿ.ಕೆ.ಎಸ್ಶ್ರೀನಿವಾಸ್ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ ನಟಿ ವಿಜಯಲಕ್ಷ್ಮಿ.
ಆಸ್ಪತ್ರೆಯಲ್ಲಿದ್ದುಕೊಂಡು ನ್ಯೂಸ್ ಸೆನ್ಸ್ ಕ್ರಿಯೇಟ್ ಮಾಡ್ತಾ ಇದ್ಯಾ, ನಿನ್ನಂಥವರನ್ನು ನಾನು ಎಷ್ಟು ಜನರನ್ನು ನೋಡಿದ್ದೀನಿ, ಮೊದಲು ಆಸ್ಪತ್ರೆಯಿಂದ ಹೊರ ಹೋಗು ಎಂದೆಲ್ಲಾ ತುಂಬಾ ಪ್ರೆಸರ್ ಹಾಕ್ತಿದ್ದಾರೆ, ಇತರ ವೈದ್ಯರು ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ವಿಜಯಲಕ್ಷ್ಮಿಆರೋಪ ಮಾಡಿದ್ದಾರೆ. ನನಗೆ ಇನ್ನೂ ಚಿಕಿತ್ಸೆ ಪೂರ್ಣ ಆಗಿಲ್ಲ, ಇದ್ದಕ್ಕಿದ್ದ ಹಾಗೇ ನೀನು ಆಸ್ಪತ್ರೆಯಿಂದ ಹೊರ ಹೋಗು ಎಂದರೇ ಎಲ್ಲಿಗೆ ಹೋಗೋದು ಅಂತಾ ಎಂದು ಅಳಲು ತೋಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದ ಕಾರಣ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವೆ. ಕಲಾವಿದರು ಎಷ್ಟು ಕೇಳಿಕೊಂಡರೂ ಸಹಾಯಕ್ಕೆ ಬರುತ್ತಿಲ್ಲ, ಅದಕ್ಕೇನು ನಾನು ತಪ್ಪು ಮಾಡಿದ್ದೀನಿ ಅಂತಾನೂ ಗೊತ್ತಿಲ್ಲ, ಇದರ ಮಧ್ಯೆ ಇವರು ಕೂಡ ಟಾರ್ಚರ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Comments