‘ಯಜಮಾನ’ ರಿಲೀಸ್’ನಲ್ಲೇ ಚಾಲೆಂಜಿಂಗ್ ಸ್ಟಾರ್’ ಗೆ ಸಿಕ್ತು ಸುದೀಪ್, ಯಶ್’ರಿಂದ ಬಿಗ್ ಸರ್ಪ್ರೈಸ್ : ಏನ್ ಗೊತ್ತಾ..?!!!
ಸ್ಯಾಂಡಲ್’ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾ ಸದ್ಯ ರಾಜ್ಯಾದ್ಯಂತ ರಿಲೀಸ್ ಆಗಿದೆ. ಈಗಾಗಲೇ ಚಿತ್ರ ನೋಡಿದ ಅಭಿಮಾನಿಗಳು ಸೂಪರ್ ಎಂದು ಹೊಗಳಿದ್ದಾರೆ. ಈ ನಡುವೆ ಡಿ ಬಾಸ್ ಖ್ಯಾತಿಯ ದರ್ಶನ್, ಬಾಸ್ ವಿಚಾರವಾಗಿ ಎರಡು ಮೂರು ದಿನಗಳ ಹಿಂದೆ ಮಾತನಾಡಿದ್ದರು. ಅವರನ್ನು ಅಟ್ಟಾಡಿಸಿಕೊಂಡು ಹೊಡೀಬೇಕು ಎಂದು ಹೇಳಿದ್ದರು. ಖಾಸಗಿ ಸುದ್ದಿ ವಾಹಿನಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು ಯಜಮಾನ ಸಿನಿಮಾ ರಿಲೀಸ್ ಬಗ್ಗೆ ಮಾತನಾಡುತ್ತಾ, ಫ್ಯಾನ್ಸ್ ವಾರ್ ಬಗ್ಗೆಯೂ ಬಿಚ್ಚಿಟ್ಟರು.
ಸಿನಿಮಾದಲ್ಲಿ ಸ್ಟಾರ್ ನಟರ ಮಸಲತ್ತು ಏನಿಲ್ಲಾ, ಸ್ಕ್ರಿಪ್ಟ್ ರೈಟರ್, ಡೈಲಾಗ್ ರೈಟರ್ ಏನು ಕೊಡ್ತಾರೋ ಅದನ್ನು ನಾವು ಹೇಳುತ್ತೇವೆ, ನಮಗೆ ಅವರು ಈ ಡೈಲಾಗ್ ಇದೆ ಎಂದು ಕೂಡ ಹೇಳಲ್ಲಾ, ನಾವು ಅದರ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳಲ್ಲಾ. ಸಿನಿಮಾ ರಿಲೀಸ್ ಆದಮೇಲೆ ಕಾಂಟ್ರೋವರ್ಸಿಗೆ ಒಳಗಾದ ಮೇಲೆಯೇ ನಮಗೂ ತಿಳಿಯೋದು ಎಂದಿದ್ದರು. ದಯಮಾಡಿ ಅಭಿಮಾನಿಗಳಿಗರ ಮನವಿ ಮಾಡಿಕೊಂಡಿದ್ದರು. ಸ್ಟಾರ್ ನಡುವೆ ಕಿಚ್ಚು ಹಚ್ಚಬೇಡಿ ಎಂದಿದ್ರು. ಆದರೆ ಇದೀಗ ಯಜಮಾನ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲೇ ದರ್ಶನ್ ಗೆ ಸ್ಯಾಂಡಲ್’ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಮತ್ತು ರಾಕಿಂಗ್ ಸ್ಟಾರ್ ಯಶ್ ದಿಢೀರ್ ಸರ್ಪ್ರೈಸ್ಡ್ ಕೊಟ್ಟಿದ್ದಾರೆ. ಏನು ಗೊತ್ತಾ..? ಆ ಸರ್ಪೈಸ್ ನೋಡಿ ಡಿ ಬಾಸ್ ಅಭಮಾನಿಗಳಿಗೆ ಖುಷಿಯಾಗಿದ್ಯಂತೆ. ಬೇರೆ ಸ್ಟಾರ್ ಸಿನಿಮಾ ರಿಲೀಸ್ ಆದಾಗ ಬೇರೆ ನಟನ ಅಭಿಮಾನಿಗಳು ಅವರ ಬಗ್ಗೆ ನೆಗಟೀವ್ ಕಮೆಂಟ್ಸ್ ಹಾಕುವುದು , ಪೈರಸಿ ಮಾಡುವುದು ಮಾಡುತ್ತಿದ್ದರೂ,ಆದರೆ ಈ ಬಗ್ಗೆ ಯಶ್ ಮತ್ತು ಸುದೀಪ್ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿ ದರ್ಶನ್ ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಕೋ ಸ್ಟಾರ್ ಸಿನಿಮಾಗಳು ರಿಲೀಸ್ ಆದಾಗ ಅವರಿಗೆ ವಿಶ್ ಮಾಡುವುದು ಕಾಮನ್ ಆದರೆ ಈ ಬಾರಿ ಯಶ್ ಮತ್ತು ಸುದೀಪ್ ತಮ್ಮ ಫ್ಯಾನ್ಸ್, ಫಾಲೋಯರ್ಸ್ ಗೆ ಕಿವಿಮಾತು ಹೇಳುವುದರ ಮೂಲಕ ಡಿ ಬಾಸ್ ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅದೇನು ಎಂದರೆ..
ಇಂದು ದರ್ಶನ್ ಸಿನಿಮಾ ರಿಲೀಸ್ ಆಗ್ತಾ ಇದೆ. ಅವರ ಚಿತ್ರಕ್ಕೆ ನಿಮ್ಮೆಲ್ಲಾ ಸಪೋರ್ಟ್ ಬೇಕು, ಯಾರು ಯಜಮಾನ ಸಿನಿಮಾವನ್ನು ಪೈರಸಿ ಮಾಡಬೇಡಿ, ನೆಗಟೀವ್ ಕಮೆಂಟ್ ಮಾಡುವುದು ಮಾಡಬೇಡಿ. ನಮ್ಮ ಕನ್ನಡ ಸಿನಿಮಾ ಬೇರೆ ಭಾಷೆಗಳ ಸಿನಿಮಾಗೆ ಸೈಡ್ ಹೊಡೀಬೇಕು, ಬೇರೆ ಭಾಷೆ ಸಿನಿಮಾಗಳ ಮುಂದೆ ನಮ್ಮ ಕನ್ನಡ ಸಿನಿಮಾ ತೊಡೆತಟ್ಟಿ ನಿಲ್ಲಬೇಕು. ನೀವೆಲ್ಲಾ ಇದಕ್ಕೆ ಬೆಂಬಲಿಸಬೇಕಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ದೇ ಯಜಮನಾ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.ಇದನ್ನು ತಮ್ಮ ಟ್ಟಿಟ್ಟರ್ ಪೇಜ್ ನಲ್ಲಿ ಹಾಕಿಕೊಂಡಿರುವ ಯಶ್ ಮತ್ತು ಸುದೀಪ್, ದರ್ಶನ್ ನಡುವೆ ಯಾವ ತಿಕ್ಕಾಟಗಳು ಇಲ್ಲ. ಕೆಲವೊಮ್ಮೆ ಇಂಡಸ್ಟ್ರಿಯಲ್ಲಿ ಭಿನ್ನಾಬಿಪ್ರಾಯಗಳು ಇರುತ್ತವೆ, ಆದರೆ ಅದನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಬೆಟ್ಟ ಮಾಡುವುದರಿಂದ ಅವರ ನಡುವೆ ಅಂತರ ಇನ್ನು ಹೆಚ್ಚಾಗುತ್ತಾರೆ. ಒಟ್ಟಾರೆ ದರ್ಶಗೆ ಕೊಟ್ಟ ಸರ್ಪೈಸ್ ನಿಂದಾಗಿ ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟರು ಎಲ್ಲಾ ಒಂದಾಗಿದ್ದಾರೆ ಎಂಬುದನ್ನು ಗಮನಿಸಬಹುದು. ಇತ್ತೀಚೆಗೆ ಸುದೀಪ್ ಅವರ ದಿ ವಿಲನ್, ಯಶ್ ಅವರ ಕೆಜಿಎಫ್, ಪುನೀತ್ ರಾಜ್ಕುಮಾರ್ ಅವರ ನಟ ಸಾರ್ವಭೌಮ ರಿಲೀಸ್ ಆದಾಗ ಒಟ್ಟಾರೆ ಎಲ್ಲಾ ಸಿನಿಮಾ ನಟರು ಪರಸ್ಪರ ಬೆಸ್ಟ್ ವಿಶಸ್ ತಿಳಿಸಿರೋದನ್ನು ಕೂಡ ನಾವು ನೋಡಬಹುದು.
Comments