ಇನ್ಫೋಸಿಸ್ ಸುಧಾಮೂರ್ತಿ ಹೆಸರಿನಲ್ಲಿ ತೆಲಗು ನಟ ವಿಜಯ್ ದೇವರಕೊಂಡಗೆ ಪತ್ರ…! ಆಫರ್ ಏನ್ ಗೊತ್ತಾ...?!!!
ತೆಲುಗಿನಲ್ಲಿ ಸ್ಟಾರ್ ನಟ ವಿಜಯ್ ದೇವರಕೊಂಡಗೆ ಭಾರೀ ಬೇಡಿಕೆ. ಒಂದಾನೊಂದು ಕಾಲದಲ್ಲಿ ಕೇವಲ 50 ರೂ.ಗೆ ಪರದಾಡಿದೆ, ಈಗ ನನ್ನ ಸಂಪಾದನೆಯನ್ನು ನಾನು ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಗೀತಾ ಗೋವಿಂದಂ ಖ್ಯಾತಿಯ ಈ ನಟ. ಸದ್ಯ ಇನ್ಫೋಸಿಸ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಕಡೆಯಿಂದ ತೆಲುಗು ನಟ ವಿಜಯ್’ ಗೆ ಪತ್ರವೊಂದನ್ನು ಬರೆಯಲಾಗಿದೆ. ಆದರೆ ಆ ಪತ್ರ ನಟನ ಕೈಗೆ ಸಿಕ್ಕಿಲ್ಲ. ಅಸಲಿಗೆ ಆ ಪತ್ರದಲ್ಲೇನಿದೆ ಗೊತ್ತಾ...?
ಹೊಸ ಅಪ್ಲಿಕೇಶ್ನ’ಗೆ ರಾಯಭಾರಿಯಾಗುವಂತೆ ಕೋರಿ ವಿಜಯ್'ಗೆ ಲೆಟರ್ ಬರೆಯಲಾಗಿದೆ. ಅಂದಹಾಗೇ ಸುಧಾಮೂರ್ತಿ ಅವರ ಹೆಸರಿನ ಲೆಟರ್’ಹೆಡ್ ನ್ನು ನಕಲಿ ಸೃಷ್ಟಿಸಿ ಅದನ್ನು ವಿಜಯ್ ದೇವರಕೊಂಡಗೆ ಪೋಸ್ಟ್ ಮಾಡಲಾಗಿದೆ. ಈ ಸಂಬಂಧ, ಜಯನಗರ ಪೊಲೀಸ್ ಠಾಣೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ನಿವೃತ್ತ ಸೇನಾಧಿಕಾರಿ ಎಂ. ರಮೇಶ್ ಎಂಬುವವರು ದೂರು ನೀಡಿದ್ದಾರೆ. ಸುಧಾಮೂರ್ತಿ ಅವರ ಹೆಸರಿನ ನಕಲಿ ಲೆಟರ್' ಹೆಡ್ ಸೃಷ್ಟಿಸಿ, ಅವರ ಸಹಿಯನ್ನು ನಕಲು ಮಾಡಿ ತೆಲುಗು ನಟ ವಿಜಯ್ ದೇವರಕೊಂಡಾಗೆ ಯಾರೋ ಕಿಡಿಗೇಡಿ ಸ್ಪೀಡ್ ಪೋಸ್ಟ್ ಮಾಡಿದ್ದಾನೆ. ಆದರೆ ವಿಳಾಸ ತಪ್ಪಿದ್ದರಿಂದ ಮತ್ತೆ ಆ ಲೆಟರ್ ಇನ್ಫೋಸಿಸ್ ಕಚೇರಿಯನ್ನು ತಲುಪಿದೆ. ಈ ನಕಲಿ ಲೆಟರ್‌ಹೆಡ್‌ನಲ್ಲಿ ಸುಧಾಮೂರ್ತಿ ಅವರ ಪ್ರಾಯೋಜಕತ್ವದಲ್ಲಿ 'ಆಫರ್ಸ್ ನಿಯರ್ ಬೈ' ಎಂಬ ಮೊಬೈಲ್ ಅಪ್ಲಿಕೇಷನ್ ನಿರ್ಮಿಸಿರುವುದಾಗಿ ಸುಳ್ಳು ವಿವರವನ್ನು ಆರೋಪಿ ನೀಡಿದ್ದ. ಜತೆಗೆ, ರಾಯಭಾರಿ ಆಗುವಂತೆ ಚಿತ್ರನಟನನ್ನು ಕೋರಿ ಸ್ಪೀಡ್ ಪೋಸ್ಟ್ ಮಾಡಿದ್ದ. ಈಗಾಗಲೇ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಯಾರು ಈ ಪತ್ರ ಬರೆದಿದ್ದಾರೆಂಬುದನ್ನು ಬೇಗ ಕಂಡುಹಿಡಿಯಲಾಗುವುದು , ಪ್ರಕರಣ ದಾಖಲಾಗಿದೆ. ತನಿಖೆ ಕಾರ್ಯ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Comments