'ಯಜಮಾನ'ನ ಪಕ್ಕದಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಸ್ಟಾರ್'ನ ಕಟೌಟ್, ಯಾರದ್ದು ಗೊತ್ತಾ.. ..? ದಚ್ಚು ಅಭಿಮಾನಿಗಳು ಬೆರಗಾಗಿದ್ಯಾಕೆ..!!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯಜಮಾನ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆ ಆಗುವ ದಿನ ಸ್ಟಾರ್ ನಟರ ಕಟೌಟ್ ನಿಲ್ಲುವುದು ಸಾಮಾನ್ಯ. ಆದರೆ ದರ್ಶನ್ ಅವರ ಯಜಮಾನ ಸಿನಿಮಾ ರಿಲೀಸ್’ಗೂ ಮುನ್ನವೇ ಮತ್ತೊಬ್ಬ ಸ್ಟಾರ್ ಅವರ ಕಟೌಟ್ ಕೂಡ ನಿಂತಿದೆ. ಅಂದಹಾಗೇ ಥಿಯೇಟರ್ ಮುಂದೆ ಆ 30 ಅಡಿ ಕಟೌಟ್ ನೋಡಿದ ಅಭಿಮಾನಿಗಳು ವಾಹ್ವ್ ಎನ್ನಿತ್ತಿದ್ದಾರೆ. ಈಗಾಗಲೇ ಆ ಕಟೌಟ್ ಅಂಬಿ ಅಥವಾ ವಿಷ್ಣುದ್ದೋ ಎಂದು ಗೆಸ್ ಮಾಡಿದ್ರೆ ನಿಮ್ಮ ಊಹೇ ಸುಳ್ಳು. ಮತ್ಯಾರದ್ದು ಅಂತಾ ಯೋಚಿಸ್ತ ಇದ್ದೀರಾ…
ಅಂದುಕೊಂಡಂತೆ ಎಲ್ಲವೂ ಹಾಗಿದ್ರೆ ಯಜಮಾನ ಸಿನಿಮಾಗೂ ಮುನ್ನವೇ ಕುರುಕ್ಷೇತ್ರ ರಿಲೀಸ್ ಆಗಬೇಕಿತ್ತು. ಆದರೆ ಇನ್ನು ಕುರುಕ್ಷೇತ್ರದ ಕೆಲಸ ಮುಗಿದಿಲ್ಲ. ಆದರೆ ಅಷ್ಟೇ ಜೋಶ್ ನಲ್ಲಿಯೇ ಯಜಮಾನ ಬಿಡುಗಡೆ ಮಾಡಲಾಗಿದೆ. ಸಿಕ್ಕಾಪಟ್ಟೆ ಪ್ರಮೋಷನ್ ಪಡೆದುಕೊಂಡ ಯಜಮಾನನನ್ನು ಇಂದು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಅಂದಹಾಗೇ ಥಿಯೇಟರ್ ಮುಂದೆ ದರ್ಶನ್ ಜೊತೆ 30 ಅಡಿ ಕಟೌಟ್ ನಿಂತಿರೋದು ಬೇರೆ ಯಾರದ್ದು ಅಲ್ಲಾ, ಮಗ ವಿನೀಶ್’ದ್ದು. ಹಾ ಹೌದು… ಯಜಮಾನ ಸಿನಿಮಾದ ಒಂದು ವಿಶೇಷ ಹಾಡಿನಲ್ಲಿ ದರ್ಶನ್ ಜೊತೆ ಅವರ ಜೂನಿಯರ್ ಕೂಡ ಸ್ಟೆಪ್ಪು ಹಾಕಿದ್ದಾರೆ. ಐರಾವತ ನಂತರ ದರ್ಶನ್ ಮತ್ತು ವಿನೀಶ್ ಒಟ್ಟಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೇ ಈ ಹಿಂದೆ ಬೆಂಗಳೂರು ಪ್ಯಾಲೇಸ್ ಗ್ರೌಂಡ್ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿನಿಮಾ ಸೆಟ್ ಗೆ ದಿಢೀರ್ ಅಂತಾ ಭೇಟಿಕೊಟ್ಟಿದ್ದರು. ಆ ಸಮಯದಲ್ಲಿ ದರ್ಶನ್ ಜೊತೆ ಯಜಮಾನದಲ್ಲಿ ವಿನೀಶ್ ಕೂಡ ಇರಲಿದ್ದಾರೆ ಎಂಬ ಸೀಕ್ರೇಟ್ ರಿವೀಲ್ ಮಾಡಿದ್ದರು. ನರ್ತಕಿ ಥಿಯೇಟರ್ ಮುಂದೆ ವಿನೀಶ್ ರ 30 ಅಡಿ ಕಟೌಟ್ ನಿಲ್ಲಿಸಲಾಗಿದ್ದು, ಅಭಿಮಾನಿಗಳು ಸೂಪರ್ ಎನ್ನುತ್ತಿದ್ದಾರೆ. ಜೂನಿಯರ್ ಚಾಲೆಂಜಿಂಗ್ ಸ್ಟಾರ್ ಕಟೌಟ್ ಕಂಡು ಅಭಿಮಾನಿಗಳು ಬೆರಗಾಗಿದ್ದಂತೂ ನಿಜ. ಇನ್ನು ಸಿನಿಮಾದಲ್ಲಿ ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ.
Comments