ಕೊನೆಗೂ ನಟಿ ವಿಜಯಲಕ್ಷ್ಮಿ ಸಹಾಯಕ್ಕೆ ಬಂದ ಬಿಗ್’ಬಾಸ್ ಸ್ಪರ್ಧಿ..!!!

ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿರುವ ಸ್ಯಾಂಡಲ್’ವುಡ್’ನ ನಟಿ ವಿಜಯಲಕ್ಷ್ಮಿ, ತನಗೆ ಆರ್ಥಿಕ ನೆರವು ನೀಡಿ ಎಂದು ಅಂಗಲಾಚಿದ್ದರು. ಮೂರು ತಿಂಗಳ ಹಿಂದೆಯೇ ತನ್ನ ಜೀವನ ಸಂಕಷ್ಟದಲ್ಲಿದೆ. ಯಾರಾದರು ನೆರವಿಗೆ ಬನ್ನಿ ಎಂದು ಮಾಧ್ಯಮಗಳ ಮುಮದೆ ಅಳಲು ತೋಡಿಕೊಂಡಿದ್ದರು. ನಿನ್ನೆಯಷ್ಟೇ ಸ್ವತಃ ವಿಜಯಲಕ್ಷ್ಮಿ ಅವರೇ ಆಸ್ಪತ್ರೆಯಿಂದಲೇ ದರ್ಶನ್, ಶಿವಣ್ಣ, ಯಶ್, ಪುನೀತ್ ಗೆ ಯಾಕೆ ನನ್ನ ನೆನಪಾಗ್ತಿಲ್ಲ, ಅವರ್ಯಾಕೆ ನನ್ನನ್ನು ನೆನಪಿಸಿಕೊಳ್ಳುತ್ತಿಲ್ಲ ಎಂದು ಕಣ್ಣೀರಧಾರೆ ಹರಿಸಿದರು.ಯಾಕೆ ಇಂಡಸ್ಟ್ರಿ ನನ್ನ ಮೇಲೆ ಕರುಣೆ ತೋರುತ್ತಿಲ್ಲ, ಸುದೀಪ್ ಹೊರತಾಗಿ ನನಗ್ಯಾರು ಸಹಾಯ ಮಾಡುತ್ತಿಲ್ಲವೆಂದು ಕಣ್ಣೀರು ಹಾಕಿದ್ರು. ಸದ್ಯ ಸ್ಯಾಂಡಲ್ವುಡ್ ನಟಿಯೊಬ್ಬರು ವಿಜಯಲಲಕ್ಷ್ಮಿ’ಗೆ ಸಹಾಯ ಮಾಡುವುದರ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.
ಇಂದು ಕನ್ನಡದ ನಟಿ ಕಾರುಣ್ಯರಾಂ ಅವರು ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ನಟಿ ವಿಜಲಕ್ಷ್ಮಿಗೆ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡಿದ್ದಾರೆ. ಸದ್ಯ ಕಾರುಣ್ಯ ಕನ್ನಡದ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿದ್ದಾರೆ. ಕಾರುಣ್ಯ ಬಿಗ್ಬಾಸ್ ಸೀಸನ್-4 ರಲ್ಲಿ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು.ನಟಿ ವಿಜಯಲಕ್ಷ್ಮಿ ಡಾ. ರಾಜ್ ಮತ್ತು ಪಾರ್ವತಮ್ಮ ಅವರನ್ನು ನೆನೆದು ಬಹಳ ದುಃಖಿತರಾದರು. ಅವರು ನನ್ನ ಈ ಸ್ಥಿತಿ ನೋಡಿ ಸುಮ್ಮನೇ ಕೂರುತ್ತಿರಲಿಲ್ಲ. ಅಪ್ಪಾಜಿ ಇರಬೇಕಿತ್ತು, ಏನಾದರೂ ಸಹಾಯ ಮಾಡುವವರು. ಆದರೆ ಶಿವಣ್ಣನಿಗಾಗಲೀ, ರಾಘಣ್ಣನಿಗಾಗಲೀ ನನ್ನ ನೆನಪಾಗ್ತಿಲ್ಲ ಯಾಕೆ ಎಂದು ಅಂಗಲಾಚಿದ್ರು. ದೊಡ್ಡ ಮಟ್ಟದ ಸಹಾಯ ಬೇಡ, ನಿಮ್ಮ ಕೈಲಾದಷ್ಟು ನನಗೆ ಹೆಲ್ಪ್ ಮಾಡಿ ಎಂದು ಅಂಗಲಾಚುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಿಚ್ಚ ಸುದೀಪ್ ಒಂದು ಲಕ್ಷದ ರೂ. ಆರ್ಥಿಕ ನೆರವು ನೀಡಿದ್ದಾರೆ. ಇನ್ನು ಕಲಾವಿದರ ಸಂಘದಿಂದಲೂ ಹಣದ ನೆರವು ಸಿಕ್ಕಿದೆ.
Comments