ಹೆಸರೆಳೇದೇ ಕಾಂಗ್ರೆಸ್ ಪದ್ಮಾವತಿಗೆ ಸಖತ್ತಾಗಿ ಮಣ್ಣು ಮುಕ್ಕಿಸಿದ ನವರಸನಾಯಕ...!!!
ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಯಾವುದಾದರೊಂದು ವಿಚಾರಕ್ಕೆ ಕಾಂಟ್ರೋವರ್ಸಿಗೆ ಒಳಗಾಗುತ್ತಲೇ . ಇರುತ್ತಾರೆ. ಅದರಲ್ಲೂ ಟ್ವೀಟ್ ವಾರ್ ಮೂಲಕ ಮತ್ತೊಮ್ಮೆ ಮುಖಭಂಗಕ್ಕೀಡಾಗಿದ್ದಾರೆ. ರಮ್ಯಾರ ಹೆಸರೇಳದೇ ಟ್ವಿಟ್ಟರ್ ಮೂಲಕ ಗುದ್ದಿದ್ದಾರೆ ನಟ ಜಗ್ಗೇಶ್. ಇಡೀ ದೇಶವೇ ಮೋದಿಯನ್ನು ಮೆಚ್ಚುತ್ತದೆ. ಮೋದಿಯ ಕಾರ್ಯವನ್ನು ಶ್ಲಾಘಿಸುವಾಗ ಸುಮ್ಮನಿದ್ದು ಈಗ ಭಾರತೀಯ ಪೈಲೆಟ್ ಪಾಕ್ ವಶದಲ್ಲಿದ್ದಾಗ ಕೆಲವರು ಎದ್ದು ನಿಂತು ಮಾತನಾಡುವ ಧೈರ್ಯ ಮಾಡಿದ್ದಾರೆ.
ಜೀವನ ಕೊಟ್ಟಿದ್ದು ಕನ್ನಡ, ಅನ್ನ ತಿಂದಿದ್ದು ಕನ್ನಡದಲ್ಲಿ, ಚಪ್ಪಾಳೆ ತೆಗೆದುಕೊಂಡಿದ್ದೂ ಕನ್ನಡಿಗರಿಂದಲೇ ಮಾತನಾಡೋದು ಕನ್ನಡಿಗರ ವಿರುದ್ಧ. ಇದು ಸಮಯ ಸಾಧಕಿಯ ಸಮಯ. ಕನ್ನಡಿಗರ ಚಪ್ಪಾಳೆ ಪಡೆದು ಮಾತನಾಡಲು ಅವಕಾಶ ಸಿಕ್ಕಿತು ಎಂದು ವ್ಯರ್ಥ ಮಾತು ಶುರುವಿಟ್ಟಿದ್ದಾಳೆ ಸಮಯ ಸಾಧಕಿ ಎಂದು ಹೆಸರು ಹೇಳದೇ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ. ಅಂದಹಾಗೇ ರಮ್ಯಾ ಮಾತಿಗೆ ಹೆಸರೇಳದೇ ಜಗ್ಗೇಶ್ ಟ್ವೀಟ್ ಮಾಡುವುದರ ಮೂಲಕ ಟಾಂಗ್ ನೀಡಿದ್ದಾರೆ. ರಮ್ಯಾ ಈ ಹಿಂದೆ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಪಾಕಿಸ್ತಾನ ಪ್ರತ್ಯುತ್ತರ ನೀಡಬಹುದು ಎಂಬುದು ನಿಮಗೆ ಗೊತ್ತಿರಲಿಲ್ಲವೇ, ನೀವೇನು ನಿದ್ರಿಸುತ್ತಿದ್ದೀರಾ… ಬಂಧಿಸಲ್ಪಟ್ಟ ಪೈಲೆಟ್ ಬಗ್ಗೆ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲವೆಂದು ಹೇಳಿಕೆ ನೀಡಿದ್ದರು. ಈ ಮಾತಿಗೆ ನವರಸನಾಯಕ, ಬಿಜೆಪಿ ಮುಖಂಡ ತಿರುಗೇಟು ಕೊಟ್ಟಿದ್ದಾರೆ.
Comments