ನಟಿ ತನುಶ್ರೀ ದತ್ತಾ ಬಾಯಲ್ಲಿ ಮತ್ತೇ #MeTo...!!!
ಸ್ಯಾಂಡಲ್’ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದ ಮೀಟೂ ಬಿಸಿ ಇನ್ನು ತಣ್ನಗಾದಂತಿಲ್ಲ. ಬಾಲಿವುಡ್ ನಲ್ಲಿ ದೊಡ್ಡಮಟ್ಟದ ಸುದ್ದಿ ಮಾಡಿದ ಮೀಟೂ ಮತ್ತೆ ಸದ್ದಾಗುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಮೊದಲ ಬಾರಿಗೆ ಮೀಟೂ ಶಬ್ಧ ಬಳಸಿದ್ದು ನಟಿ ತನುಶ್ರೀ ದತ್ತಾ.ಖ್ಐಆತ ನಿರ್ದೇಶಕ ನಾನಾ ಪಾಟೇಕರ್ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಸುಮಾರು 10 ವರ್ಷಗಳ ಹಿಂದೆ ಸಿನಿಮಾ ಶೂಟಿಂಗ್ ಸೆಟ್’ನಲ್ಲಿ ನಾನಾ ಪಾಟೇಕರ್ ನನ್ನ ಬಳಿ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪ ಮಾಡಿದ್ರು.
ಒಂದಷ್ಟು ಬಾಲಿವುಡ್ ಮಂದಿ ತನುಶ್ರೀ ದತ್ತಾ ಪರ ನಿಂತರೆ, ಮತ್ತೆ ಕೆಲವರು ನಾನಾ ಪಾಟೇಕರ್ ಪರ ಮಾತನಾಡಿದ್ರು. ಆದರೆ ಇದೀಗ ತನುಶ್ರೀ ದತ್ತಾ ಮೀಟೂ ಪದ ಬಳಸಿದ್ದಾರೆ, ‘‘Inspiration’’ ಎಂಬ ಕಿರುಚಿತ್ರದ ಮೂಲಕ ಬಾಲಿವುಡ್ನಲ್ಲಿ ನಡೆದ ಲೈಂಗಿಕ ಲೈಂಗಿಕ ಕಿರುಕುಳದ ಬಗ್ಗೆ ಬಿಚ್ಚಿಡಲು ಸಜ್ಜಾಗಿದ್ದಾರೆ. ಚಿತ್ರದ ಸಂಭಾಷಣೆಯನ್ನು ಅವರೇ ಬರೆದಿದ್ದಾರಂತೆ. ಮುಂದೆ ಚಿತ್ರೋದ್ಯಮಕ್ಕೆ ಕಾಲಿಡುವ ನಟಿಯರಿಗೆ ಇದು ಪಾಠವಾಗಬೇಕಿದೆ. ಮಾರ್ಚ್-8 ಅಂತರಾಷ್್ಟರೀಯ ಮಹಿಳಾ ದಿನಾಚರಣೆಯಂದು ಆನ್ಲೈನ್ ನಲ್ಲಿ ಈ ಕಿರುಚಿತ್ರವನ್ನು ಬಿಡುಗಡೆಮಾಡುವುದಾಗಿ ತಿಳಿಸಿದ್ದಾಋಎ. ಇತರೆ ಕ್ಷೇತ್ರಗಳಲ್ಲಿ ಹೆನ್ಣುಮಕ್ಕಳು ಶೋಷಣೆಗೆ ಒಳಗಾಗುವ ಸ್ಥಿತಿಯನ್ನು ಈ ಕಿರುಚಿತ್ರ ಹೇಳಲಿದೆ ಎಂದು ಅವರು ತಿಳಿಸಿದ್ದಾರೆ.ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಆನ್ಲೈನ್ನಲ್ಲಿ ಈ ಕಿರುಚಿತ್ರ ಬಿಡುಗಡೆಯಾಗಲಿದೆ. ಮಾರ್ಗದರ್ಶಕರು ಅಥವಾ ಮಾರ್ಗದರ್ಶನ ಇಲ್ಲದೇ ಇತರೆ ಕ್ಷೇತ್ರಗಳಲ್ಲಿ ಶೋಷಣೆಗೆ ಒಳಗಾಗುವ ಹೆಣ್ಮಕ್ಕಳ ಶೋಚನೀಯ ಸ್ಥಿತಿಯನ್ನ ಈ ಕಿರುಚಿತ್ರ ಹೇಳಲಿದ್ಯಂತೆ.
Comments