ನನ್ನ ಪತಿ ಮೇಲೆ ನನಗೆ ಕೋಪವಿಲ್ಲ, ಅವರೇ ಬಂದು ಕರೆದುಕೊಂಡು ಹೋಗಲೀ : ಉಲ್ಟಾ ಹೊಡೆದ 'ಅಗ್ನಿಸಾಕ್ಷಿ' ಅಖಿಲ್ ಪತ್ನಿ…!!!

ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ಅಗ್ನಿಸಾಕ್ಷಿಯ ಹೀರೋ ಅಖಿಲ್ ಪಾತ್ರಧಾರಿ ರಾಜೇಶ್ ಧೃವಾ ವಿರುದ್ಧ ಕಿರುಕುಳ ಆರೋಪ ಪ್ರಕರಣ ದಾಖಲಾಗಿತ್ತು. ರಾಜೇಶ್ ಅವರ ಪತ್ನಿಯೇ ಗಂಡನ ವಿರುದ್ಧ ದೂರು ನೀಡಿದ್ದರು. ಇಂದು ವಿಚಾರಣೆಗೆ ಹಾಜರಾದ ರಾಜೇಶ್ ಪತ್ನಿ ಶೃತಿ ನನ್ನ ಪತಿ ಮೇಲೆ ನನಗೆ ಯಾವ ಕೋಪ ಇಲ್ಲ. ಅವರಿಗೆ ಶಿಕ್ಷೆ ನೀಡಬೇಕೆಂದು ನಾನು ಎಂದೂ ಅಂದುಕೊಂಡಿಲ್ಲ. ಅವರು ನನ್ನನ್ನು ಕರೆದುಕೊಂಡು ಹೋಗಲೀ ಎಂದು ನಾನು ಈ ರೀತಿ ಮಾಡುತ್ತಿದ್ದೇನೆ. ನಾನು ಡ್ರಿಂಕ್ಸ್ ಮಾಡುವಾಗ ಅವರೇ ವಿಡಿಯೋ ಮಾಡಿದ್ದಾರೆ, ಅಲ್ಲದೇ ಅದನ್ನು ನಾನು ತಮಾಷೆಗಾಗಿಯೇ ಮಾಡಿದ್ದೇನೆಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಡ್ರಿಂಕ್ಸ್ ಮಾಡುವಾಗ ಬೇರೆಯವರ ಮುಂದೆ ಮಾಡಲಿಲ್ಲ, ರಾಜೇಶ್ ನನ್ನ ಮುಂದೆಯೇ ಇದ್ದರು. ನನ್ನ ತಾಯಿಯನ್ನು ನೋಡಿಕೊಳ್ಳುವುದಿಲ್ಲವೆಂದು ರಾಜೇಶ್ ನನ್ನ ಮೇಲೆ ಆರೋಪ ಮಾಡಿದ್ರು, ಆದರೆ ಅವರ ತಾಯಿ ಈಗ ಧಾರವಾಡದಲ್ಲಿದ್ದಾರೆ ಎಂದು ಶೃತಿ ತಿಳಿಸಿದ್ದಾರೆ. ಸದ್ಯ ಅವರು ನನ್ನನ್ನು ಬಂದು ಕರೆದುಕೊಂಡು ಹೋಗಲೀ. ವಿಚಾರಣೆಯಲ್ಲಿ ಅವರು ಏನು ಕೇಳುತ್ತಾರೋ ಅದನ್ನು ಹೇಳುತ್ತೇನೆ, ಇಂದು ಕರೆದಿದ್ದಾರೆ ಅದಕ್ಕಾಗಿ ಬಂದಿರುವೆ. ನನ್ನ ಗಂಡನ ಮೇಲೆ ನನಗೆ ಯಾವುದೇ ಕೋಪವಿಲ್ಲ, ಅವರು ನನ್ನ ಬಳಿಯೇ ಇರಬೇಕು ಅದಕ್ಕಾಗಿ ಇದೆಲ್ಲಾ ಅಂದರು. ನಟ ರಾಜೇಶ್ ಧೃವಾ 2017 ರಲ್ಲಿ ಶೃತಿಯನ್ನು ಮದುವೆಯಾಗಿದ್ದರು. ಆ ನಂತರ ಬೇರೆ ಹುಡುಗಿಯರ ಜೊತೆ ಅಫೇರ್ ಇಟ್ಟುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ವರದಕ್ಷಿಣೆ ಹೆಸರಿನಲ್ಲಿ ನನಗೆ ಟಾರ್ಚರ್ ನೀಡಿ ಮನೆಯಿಂದ ಹೊರಗೆ ಹಾಕಿದ್ದರು. ಮದುವೆಯಾಗಿದ್ದರೂ ನನಗೆ ಮದುವೆಯಾಗಿಲ್ಲವೆಂದೇ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಧೃವಾ ಪತ್ನಿ ಶೃತಿ ಕುಮಾರ್ಸವಾಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶೃತಿ ಆರೋಪಕ್ಕೆ ರಾಜೇಶ್ ಕೂಡ ಖಡಕ್ ಆಗಿಯೇ ತನಗೆ ಅಫೇರ್ ಇದ್ದುದ್ದಾಗಿ, ತಾನು ಈಗ ಬಿಟ್ಟಿದ್ದಾಗಿ, ಶೃತಿ ನಡತೆ ಸರಿಯಿಲ್ಲವೆಂದು ಪ್ರತಿದೂರು ಕೂಡ ದಾಖಲಿಸಿದ್ದಾರೆ. ಈ ಇಬ್ಬರು ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ಇಟ್ಟುಕೊಂಡಿದ್ದರು, ಮದುವೆಯಾದ ಬಳಿಕ ಮುಖ್ಯಮಂತ್ರಿ ಚಂದ್ರು ಮನೆಯಲ್ಲಿ ಬಾಡಿಗೆ ಇದ್ದರು ಎಂದು ತಿಳಿದುಬಂದಿದೆ.
Comments