ಐಪಿಎಲ್’ನಲ್ಲಿ ಆರ್’ಸಿಬಿ ಸೋಲಲು ಅಗ್ನಿಸಾಕ್ಷಿ ಧಾರವಾಹಿ ಕಾರಣವಂತೆ..!!! ಹೇಗೆ ಅಂತೀರಾ..?

ಕ್ರಿಕೆಟ್ ಅಭಿಮಾನಿಗಳಿಗೆ ಈಗ ಹಬ್ಬವೋ ಹಬ್ಬ..!! ಅಂತೂ ಇಂತೂ ಮ್ಯಾಚ್ ಶುರುವಾಗೆ ಹೋಯ್ತು.. ಟಿವಿ ಮುಂದೆ ರಿಮೋಟ್ ಇಡ್ಕೊಂಡು ಕೂತಿಕೊಂಡರೇ ಟೈಮ್ ಹೋಗೋದೆ ಗೊತ್ತಾಗಲ್ಲ..ಒಂದು ಕಡೆ ಗಂಡಸರು ಮ್ಯಾಚ್ ಅಂತಿದ್ರೆ ಮತ್ತೊಂದು ಕಡೆ ಹೆಂಗಸರು ಧಾರವಾಹಿ ಅಂತಾರೆ.. ಮಾಡೋ ಕೆಲಸಗಳನ್ನು ಬಿಟ್ಟು ಧಾರವಾಹಿ ನೋಡಲು ಶುರು ಮಾಡ್ತಾರೆ ನಮ್ಮ ಹೆಂಗಸರು…ಅದರಲ್ಲೂ ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿಯಂತೂ ಪ್ರೇಕ್ಷಕರನ್ನು ಸೆಳೆಯುವಲ್ಲಿ, ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ..
ಇದೀಗ ಆ ಧಾರವಾಹಿಯು ಹಾಗೂ ಪ್ರೇಕ್ಷಕರು ಟ್ರೋಲ್ ಗೆ ಗುರಿಯಾಗಿದ್ದಾರೆ. ವಿಲನ್ ಚಂದ್ರಿಕಾ ಬಣ್ಣ ಧಾರವಾಹಿಯಲ್ಲಿ ಬಯಲಾಗಿದೆ. ಈಗಲಾದರೂ ಧಾರವಾಹಿಯನ್ನು ಮುಗಿಸಿ ಎಂದು ಪ್ರೇಕ್ಷಕರು ಗೋಳಾಡುತ್ತಿದ್ದಾರೆ... ಇನ್ನೇನು ಐಪಿಎಲ್ ಶುರುವಾಗುತ್ತದೆ. ಅದೂ ಅಗ್ನಿಸಾಕ್ಷಿ ಧಾರವಾಹಿ ಪ್ರಸಾರವಾಗುವ ಎಂಟು ಗಂಟೆ ಹೊತ್ತಿಗೇ ಮ್ಯಾಚ್ ನಡೆಯುತ್ತದೆ. ಐಪಿಎಲ್ ಗೆ ಮೊದಲು ಅಗ್ನಿಸಾಕ್ಷಿ ಮುಗಿದಿಲ್ಲ ಎಂದರೆ ರಿಮೋಟ್ ಕೈಗೆ ಸಿಗುವುದೇ ಇಲ್ಲ… ಈ ಬಗ್ಗೆ ಕೆಲವು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ... ಇನ್ನು ಕೆಲವರು ಅಗ್ನಿಸಾಕ್ಷಿ ಧಾರವಾಹಿಯನ್ನು ಮುಗಿಸಿಲ್ಲ ಅಂದ್ರೆ ಸೆಟ್ ಗೇ ಬಂದು ಧರಣಿ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಆರ್ ಸಿಬಿ ತಂಡ ಐಪಿಎಲ್ ನಲ್ಲಿ ಪ್ರತೀ ಬಾರಿ ಸೋಲಲು ಅಗ್ನಿಸಾಕ್ಷಿಯೇ ಕಾರಣ ಎಂದು ಕೆಲವು ವೀಕ್ಷಕರು ಹೊಸ ಆರೋಪವನ್ನೂ ಕೂಡ ಮಾಡಿದ್ದಾರೆ.ಅದಕ್ಕೆ ಕಾರಣ ನಾವು ಧಾರವಾಹಿ ನೋಡಲು ಬಿಡಲ್ಲ ಅಂತ ಆರ್ ಸಿಬಿ ಮೇಲೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಶಾಪ ಹಾಕುತ್ತಿರುತ್ತಾರೆ ಎಂದೂ ಕೆಲವರು ಹೊಸ ಬಾಂಬ್ ಸಿಡಿಸಿದ್ದಾರೆ… ಅದೇನೆ ಆಗಲಿ ಧಾರವಾಹಿಗೂ ಮ್ಯಾಚ್ ಸೋಲಲು ಏನ್ ಸಂಬಂಧ ಹೇಳಿ.. ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿ ಬಿಡ್ತಾರೆ ನಮ್ ಜನ…
Comments