ಸುದೀಪ್‘ರನ್ನು ಬಿಟ್ಟರೆ ದರ್ಶನ್, ಯಶ್,ಪುನೀತ್ ಶಿವಣ್ಣನಿಗೆ ನನ್ನ ನೆನಪ್ಯಾಕೆ ಬರ್ತಿಲ್ಲಾ: ನಟಿ ವಿಜಯಲಕ್ಷ್ಮಿ ಕಣ್ಣೀರ ಧಾರೆ…!!!
ನಟಿ ವಿಜಯಲಕ್ಷಿ ಒಂದು ಕಾಲದಲ್ಲಿ ಸ್ಯಾಂಡಲ್’ವುಡ್ ನ್ನು ಆಳಿದ ನಂ.1 ನಟಿ. ಆದರೆ ಅವರ ಜೀವನ ಪರಿಸ್ಥಿತಿ ಈಗ ತುಂಬಾ ಶೋಚನೀಯವಾಗಿದೆ. ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೇ ಕಲಾವಿದರನ್ನು ಅಂಗಲಾಚಿದ್ದಾರೆ. ಈಗಾಗಲೇ ಅನೇಕ ಬಾರಿ ಮೀಡಿಯಾ ಮುಂದೆಮಾತನಾಡಿದ್ದ ಅವರು, ಮತ್ತೊಮ್ಮೆ ತಾವೇ ವಿಡಿಯೋ ಮೂಲಕ ದುಃಖಿತರಾಗಿ ಮಾತನಾಡಿದ್ದು ವೈರಲ್ ಆಗಿದೆ. ನನಗೆ ಸಹಾಯ ಮಾಡಿ ಎಂದು ಎಷ್ಟು ಕಣ್ಣೀರು ಸುರಿಸಿದ್ರೂ ನನ್ನ ಕಷ್ಟಕ್ಕೆ ಸುದೀಪ್ ಬಿಟ್ಟು ಕಲಾವಿದರ ಸಂಘ ಹೊರತಾಗಿ ಯಾರು ಬಂದಿಲ್ಲ. ಮಾತಿಗೂ ಮುನ್ನವೇ ನಟಿ ವಿಜಯಲಕ್ಷ್ಮಿ ಬಹಳ ದುಃಖದಿಂದ ಮಾತನಾಡಿದ್ರು. ನಾನು ಅನಾಥಳಾಗಿದ್ದೇನೆ, ರಾಜ್ಕುಮಾರ್ ಮತ್ತು ಪಾರ್ವತಮ್ಮ ಇದ್ದಿದ್ದರೆ ನನ್ನನ್ನು ಈ ಸ್ಥಿತಿಗೆ ಬರೋಕೆ ಬಿಡ್ತಾಯಿರಲಿಲ್ಲ ಎಂದು ಕಣ್ಣೀರು ಹಾಕಿದ್ರು.
ಆದರೆ ಅವರು ಈಗ ಇಲ್ಲ, ಅವರಿಲ್ಲದೇ ನಾನು ಅನಾಥಾಳಗಿದ್ದೇನೆ. ಇಂಡಸ್ಟ್ರಿಯವರು ಯಾಕೆ ನನ್ನತ್ತ ತಿರುಗಿ ನೋಡ್ತಾ ಇಲ್ಲಾ, ಅಂತಹ ತಪ್ಪೇನು ಮಾಡಿದ್ದೀನಿ, ನನಗೆ ಗೊತ್ತಾಗ್ತಿಲ್ಲ. ನನ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಫಸ್ಟ್ ನನಗೆ ಮನೆ ಇಲ್ಲ, ಬಾಡಿಗೆ ಮನೆಗೆ ಹೋಗೋಣವೆಂದರೇ ಕೊಡೋಕೆ ಅಡ್ವಾನ್ಸ್ ಇಲ್ಲ, ಮನೆಯೂಟ ಇಲ್ಲದೇ ನನ್ನ ಆರೋಗ್ಯ ಕೆಟ್ಟಿದೆ. ಎಷ್ಟು ಬಾರಿ ಯಾರಾದರೂ ಸಹಾಯ ಮಾಡಿ ಎಂದು ಗೋಗರೆದರೂ ನನ್ನ ಬಳಿ ಯಾರು ಬರುತ್ತಿಲ್ಲವೇಕೆ ಎಂದು ಗಳಗಳನೆ ಅತ್ತುಬಿಟ್ಟರು. ಇಂಡಸ್ಟ್ರಿಯಲ್ಲಿ ದರ್ಶನ್, ಶಿವಣ್ಣ, ಪುನಿತ್, ಯಶ್ ಇದ್ದಾರೆ, ಯಾಕೆ ಅವರು ನನ್ನ ಬಳಿ ಮಾತನಾಡುತ್ತಿಲ್ಲ. ನನ್ನ ಬಳಿ ಬರುತ್ತಿಲ್ಲ, ಅವರಿಗೆ ನನ್ನ ನನ್ನ ನೆನಪು ಯಾಕೆ ಬಂದಿಲ್ಲ. ನಾನೇನು ಅಂತಹ ತಪ್ಪು ಮಾಡಿದ್ದೀನಿ, ದೊಡ್ಡ ಮಟ್ಟದ ಹಣ ಬೇಡ , ಕೈಲಾದ ನೆರವು ನೀಡಿ ಎಂದು ಕೇಳಿಕೊಂಡರೂ ಯಾಕೆ ನನ್ನ ಬಳಿ ಬರುತ್ತಿಲ್ಲವೆಂದು ಬಹಳ ದುಃಖದಿಂದ ಮಾತನಾಡಿದ್ದಾರೆ. ನನಗೆ ಇಂತಹ ಶಿಕ್ಷೆ ಯಾಕೆ ಎಂದು ದಯಾನೀಯವಾಗಿ ಕೇಳಿಕೊಂಡಿದ್ದಾರೆ. ನನ್ನ ಬಳಿ ಒಮ್ಮೆ ಮಾತನಾಡುತ್ತಾರೆ, ಮತ್ತೆ ಫೋನ್ ಮಾಡಿದ್ರೆ ಫೋನ್ ಪಿಕ್ ಮಾಡಲ್ಲಾ ಎಂದು ಒಂದೇ ಸಮನೆ ಅಳೋಕೆ ಶುರು ಮಾಡಿದ್ರು. ನಾನು ದಿಢೀರ್ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ, ಮನೆಯಲ್ಲಿ ಸ್ವಲ್ಪ ರೆಸ್ಟ್ ಮಾಡಿ ಹೋಗಬೇಕು. ಆಸ್ಪತ್ರೆಯಿಂದ ಹೋಗೋಕೆ ನನ್ನ ಬಳಿ ಹಣವಿಲ್ಲ. ಮೂರು ತಿಂಗಳಿಂದ ಯಾರು ನನ್ನ ವಿಚಾರಿಸ್ತಾ ಇಲ್ಲ. ಸುದೀಪ್’ಗಿರುವ ಕರುಣೆ ಬೇರೆ ಯಾರಿಗೂ ಇಲ್ಲಾ, ಯಾಕೆ..? ತುಂಬಾ ಚಿಂತಾಜನಕವಾಗಿದೆ ನನ್ನ ಲೈಫ್, ನನ್ನ ತಪ್ಪು ಏನು ಅಂಥಾ ಹೇಳಿ, ಇಲ್ಲ ನನಗೆ ಇಂಡಸ್ಟ್ರಿ ಮೇಲೆ ಗಿಲ್ಟಿಫೀಲ್ ಕಾಡುತ್ತದೇ ಪ್ಲೀಸ್ ನನಗೆ ಹೆಲ್ಪ್ ಮಾಡಿ ಎಂದು ಕರುಣಾಜನಕವಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ.
ಸುದೀಪ್ ಮೂರು ದಿನಗಳ ಹಿಂದಷ್ಟೇ ನಟಿ ವಿಜಯಲಲಕ್ಷ್ಮಿಗೆ ಒಂದು ಲಕ್ಷ ರೂ. ನೀಡುವುದರ ಮೂಲಕ ಆರ್ಥಿಕವಾಗಿ ನೆರವು ನೀಡಿದ್ದರು. ಇನ್ನು ಕಲಾವಿದರ ಸಂಘದ ವತಿಯಿಂದ ಸಹಾಯ ನೀಡಲಾಗಿದೆ. ಅದರ ಹೊರತಾಗಿ ಇಡೀ ಇಂಡಸ್ಟ್ರಿ ನನಗೆ ಸಹಾಯ ಮಾಡುತ್ತಿಲ್ಲವೆಂಬುದು ನಟಿಯ ಅಳಲು. ನಾಗಮಂಡಲ ಸಿನಿಮಾ ಮೂಲಕ ಸ್ಯಾಂಲಡ್ವುಡ್ ಗೆ ಎಂಟ್ರಿಕೊಟ್ಟ ವಿಜಯಲಕ್ಷ್ಮಿ ಸಾಹಸಸಿಂಹ ವಿಷ್ಣುವರ್ಧನ್, ರಾಮ್ ಕುಮಾರ್, ರಮೇಶ್, ಶಿವಣ್ಣ ಜೊತೆ ನಟಿಸಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
Comments