ಎರಡನೇ ಮಗುವಿಗೆ ತಾಯಿಯಾಗ್ತಿದ್ದಾರೆ ಬಾಲಿವುಡ್ ಕ್ವೀನ್ ಕರೀನಾ..?!!!
ಬಾಲಿವುಡ್ ಕ್ವೀನ್ ಕರೀನಾ ಕಪೂರ್ ಮತ್ತೊಮ್ಮೆ ಅಮ್ಮನಾಗ್ತಿರುವ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅವರ ಅಭಿಮಾನಿಗಳು. ಅಂದಹಾಗೇ ಕರಿನಾ ಅವರ ಹುಬ್ಬು ಹೊಟ್ಟೆಯ (ಬೇಬಿ ಬಂಪ್) ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿವೆ. ಕರೀನಾ ಈಗ ಎರಡನೇ ಮಗುವಿಗೆ ಗರ್ಭವತಿ, ಹೌದಾ... ಸೈಫ್ ಅಲಿಖಾನ್ ಮತ್ತು ಕರಿನಾಗೆ ಈಗಾಗಲೇ ಎರಡು ವರ್ಷದ ತೈಮೂರ್ ಇದ್ದಾನೆ. ಸೆಲೆಬ್ರಿಟಿ ಗಳ ಮಕ್ಕಳ ಪೈಕಿ ತೈಮೂರ್ ಭಾರೀ ಸುದ್ದಿ ಮಾಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ತೈಮೂರ್'ಗೆ ಸಿಕ್ಕಾಪಟ್ಟೆ ಫ್ಯಾನ್ಸ್, ಫಾಲೋಯರ್ಸ್ ಇದ್ದಾರೆ. ಹೋದಕಡೆಯೆಲ್ಲಾ ಕರೀನಾ ತನ್ನ ಮಗುವಿನೊಂದಿಗೆ ಇರುತ್ತಿದ್ದರು, ತೈಮೂರನ್ನು ನೋಡಿಕೊಳ್ಳಲು ಒಬ್ಬ ಪರ್ಮನೆಂಟ್ ದಾದಿಯನ್ನು ಕೂಡ ನೇಮಕ ಮಾಡಿಕೊಂಡಿದ್ದಾರೆ.
ಇದರ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವೂ ಆಗಿತ್ತು. ಇದೀಗ ಮತ್ತೆ ಕರೀನಾ ಮತ್ತೊಂದು ಮಗುವಿಗೆ ತಾಯಾಗ್ತಿದ್ದಾರೆ…!ಆದರೆ ಅಸಲಿ ಕಥೆ ಏನ್ ಗೊತ್ತಾ..?ಅಂದಹಾಗೇ ಕರೀನಾ ಗರ್ಭಿಣಿಯಾಗ್ತಿರುವುದು ರಿಯಲ್ ಲೈಫ್ ನಲ್ಲಿ ಅಲ್ಲ ಬದಲು ರೀಲ್ ನಲ್ಲಿ. ಅವರ ಮುಂಬರುವ ಚಿತ್ರ ಗುಡ್ ನ್ಯೂಸ್ ನಲ್ಲಿ ಕರೀನಾ ಗರ್ಭಿಣಿ ಪಾತ್ರ ಮಾಡಬೇಕಿದೆ.ರಾಜ್ ಮೆಹ್ತಾ ನಿರ್ದೇಶನದ ಗುಡ್ ನ್ಯೂಸ್ ನಲ್ಲಿ ಕರೀನಾ ಪ್ರಗ್ನೆಂಟ್ ರೋಲ್ನಲ್ಲಿ ನಟಿಸಬೇಕಿದೆ. ಆ ಸ್ಟಿಲ್ ಫೋಟೋಗಳೇ ಸಾಮಾಜಿಕ ಜಾಲತಾಣಗಲಲ್ಲಿ ಹೆಚ್ಚು ವೈರಲ್ ಆಗಿವೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹೀರೋ ಆಗಿ ಕಾಣಿಸಿಕೊಂಡರೇ ಕರೀನಾ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಒಟ್ಟಾರೆ ನೆಟ್ಟಿಗರು ಈ ಫೋಟೋಗಳನ್ನು ವೈರಲ್ ಮಾಡಿದ್ದು, ಕರೀನಾ ಅವರರು ರಿಯಲ್ ನಲ್ಲಿ ಗರ್ಭಿಣಿಯಾದ ದಿನಗಳನ್ನು ನೆನಪಿಸುತ್ತಿವೆ.
Comments