ಶಾರೂಕ್ ಖಾನ್ ಸೇರಿದಂತೆ ಬಾಲಿವುಡ್ ಹಲವು ಮಂದಿಗೆ ನೋಟಿಸ್..!!

ಅದ್ಯಾಕೋ ಗೊತ್ತಿಲ್ಲ… ಬಾಲಿವುಡ್ ನಟ ನಟಿಯರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.. ಇದೀಗ ಬಾಲಿವುಡ್ ನಟರಾದ ಶಾರುಕ್ ಖಾನ್ ಅನಿಲ್ ಕಪೂರ್, ವಿವೇಕ್ ಒಬೇರಾಯ್ ಸೇರಿದಂತೆ ಇನ್ನೂ ಹಲವರಿಗೂ ಕೂಡ ನೋಟಿಸ್ ಜಾರಿ ಮಾಡಲಾಗಿದೆ.Qnet ಸ್ಕ್ಯಾಮ್ ಸಂಬಂಧ ಬಾಲಿವುಡ್ ನಟ ಜಾಕಿ ಶ್ರಾಫ್, ಬೊಮನ್ ಇರಾನಿ, ಕ್ರಿಕೆಟರ್ ಯುವರಾಜ್ ಸಿಂಗ್, ನಟಿ ಪೂಜಾ ಹೆಗ್ಡೆ, ಅಲ್ಲು ಸಿರೀಸ್ ಗೂ ಸೈಬರಾಬಾದ್ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ….ಈ Qnet ಸ್ಕ್ಯಾಮ್ ಗೆ ಸಂಬಂಧ ಪಟ್ಟಂತೆ ಒಟ್ಟು 500 ಮಂದಿಗೆ ನೋಟಿಸ್ ನೀಡಲಾಗಿದ್ದು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 60ಕ್ಕೂ ಹೆಚ್ಚು ಮಂದಿಯನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ಈ ಮೇಲೆ ತಿಳಿಸಿರುವ ನಟರು ಹಾಗೂ ಇನ್ನೂ ಹಲವರು ಕೂಡ ಹಣವನ್ನು ಪಡೆದುಕೊಂಡು Qnet ಕಂಪನಿಯನ್ನು ಪ್ರಮೋಟ್ ಮಾಡಿದ್ದು, ಈ ನಿಟ್ಟಿನಲ್ಲಿ ನೋಟಿಸ್ ನೀಡಲಾಗಿದೆ. ಅಷ್ಟೆ ಅಲ್ಲದೇ ಮಾರ್ಚ್ 4ರ ಒಳಗಾಗಿ ತನಿಖೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ನೆಟ್ವರ್ಕ್ ಮಾರ್ಕೆಟಿಂಗ್ ಮಾಡುವ ಈ ಕಂಪನಿಯ ವ್ಯವಹಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಸಂಬಂಧ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ.. ಒಂದು ವೇಳೆ ಮಾರ್ಚ್ 4 ರ ಒಳಗಾಗಿ ತನಿಖೆಗೆ ಹಾಜರಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
Comments