ನಿಮ್ಮ ಮಕ್ಕಳು ಎಷ್ಟು ಹೆಣ್ಣುಬಾಕರು ಅಂತಾ ನೀವೆ ನೋಡಿ, ಸಾಕ್ಷಿ ಸಮೇತ ಸ್ಟಾರ್ ಕುಟುಂಬದ ವಿರುದ್ಧ ಸಿಡಿದೆದ್ದ ನಟಿ...!!!

ಕೆಲ ದಿನಗಳಿಂದೆ ನಟಿ ಶ್ರೀರೆಡ್ಡಿಯ ಕಾಸ್ಟಿಂಗ್ ಕೌಚ್ ಸುದ್ದಿ ಇಡೀ ಸೌತ್ ಇಂಡಸ್ಟ್ರಿಯನ್ನೇ ಗಿರಕಿ ಹೊಡೀತು. ಸ್ಟಾರ್ ನಟರೊಬ್ಬರ ಸಹೋದರ ತನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಗಂಭಿರ ಆರೋಪ ಮಾಡಿದ್ದರು. ತನಗೆ, ಅವಕಾಶ ಕೊಡುವುದಾಗಿ ಹೇಳಿ ನನ್ನನ್ನು ಬಳಸಿಕೊಂಡು ಆ ನಂತರ ಕೈ ಬಿಟ್ಟಿದ್ದಾನೆ ಎಂದು ಒಬ್ಬ ಸ್ಟಾರ್ ಕುಟುಂಬದವರ ಮೇಲೆ ಆರೋಪ ಮಾಡಿದ್ರು. ಅಷ್ಟೇ ಅಲ್ಲಾ, ಅರೆಬೆತ್ತಲೆಯಾಗಿ ರಸ್ತೆ ಮಧ್ಯೆ ಕುಳಿತು ನನಗೆ ನ್ಯಾಯ ಒದಗಿಸಿಕೊಡಿ ಎಂದು ಕೇಳಿಕೊಂಡ ಶ್ರೀ ರೆಡ್ಡಿಯ ಸುದ್ದಿ ಇಡೀ ಟಾಲಿವುಡ್ನಷ್ಟೇ ಅಲ್ಲಾ, ಬಾಲಿವುಡ್ ಮತ್ತು ಸ್ಯಾಂಡಲ್ವುಡ್'ನ್ನೇ ನಡುಗಿಸಿಬಿಟ್ಟಿತು. ದಿನಕ್ಕೊಬ್ಬರ ಹೆಸರು ಹೇಳಿ ಅವರ ಮೇಲೆ ಆರೋಪ ಮಾಡಿದ್ದ ನಟಿ ಶ್ರೀರೆಡ್ಡಿ ನಟ ಪವನ್ ಕಲ್ಯಾಣ್ ಅವರನ್ನು ಬಿಟ್ಟಿರಲಿಲ್ಲ, ಅವರ ಮೇಲೂ ಆರೋಪ ಮಾಡಿದ್ರು. ಈಗ ಮತ್ತೆ ಫೇಸ್ಬುಕ್ ಮೂಲಕ ಸುದ್ದಿಯಾಗಿದ್ದಾರೆ.
ಒಂದಷ್ಟು ದಿನ ಶ್ರೀರೆಡ್ಡಿ ವಿಚಾರ ಬಿಸಿಬಿಸಿ ಸುದ್ದಿಯಾಗಿತ್ತು. ದಿನಕಳೆದಂತೇ ತಣ್ಣಾಗಾಗಿತ್ತು. ಈಗ ಮತ್ತೆ ಶ್ರೀರೆಡ್ಡಿ ಸುದ್ದಿಯಲ್ಲಿದ್ದಾರೆ. ಅದೇ ಕಾಸ್ಟಿಂಗ್ ಕೌಚ್ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಈ ಹಿಂದೆ ಟಾಲಿವುಡ್’ನ ಖ್ಯಾತ ಸ್ಟಾರ್ ನಟ ರಾಣಾ ಹಾಗೂ ಆತನ ತಮ್ಮನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಶ್ರೀರೆಡ್ಡಿ, ಈಗ ಅಣ್ಣತಮ್ಮಂದಿರ ಬಣ್ಣ ಬಯಲು ಮಾಡಿದ್ದಾರೆ. ಫೇಸ್ಬುಕ್ನಲ್ಲಿ ನಟಿ ತ್ರಿಶಾ ಕೆನ್ನೆಗೆ ರಾಣಾ ಮುತ್ತಿಡುವ ಹಾಗೂ ಅವರ ತಮ್ಮ ಅಭಿರಾಮ್ ತನಗೆ ಮುತ್ತು ಕೊಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳ ಕೆಳಗೆ ಕ್ಯಾಪ್ಶನ್ ಹಾಕಿರುವ ಆಕೆ ರಾಣಾ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.
ಕುಟುಂಬದ ಗೌರವ, ಸಂಸ್ಕೃತಿ ಬಗ್ಗೆ ಸದಾ ಮಾತನಾಡುವ ಸುರೇಶ್ ಬಾಬು ಅವರೇ ನಿಮ್ಮ ಮಕ್ಕಳಿಗೆ ಇದನ್ನೇ ಕಲಿಸಿದ್ದೀರಾ ? ಇವರು ಅವರ ತಾತನನ್ನು ಮೀರಿಸುತ್ತಾರೆ ಎಂಬುದನ್ನು ಬರೆದು ಪೋಸ್ಟ್ ಮಾಡಿದ್ದಾರೆ.ನಟಿ ಶ್ರೀ ರೆಡ್ಡಿ ಸಿನಿಮಾ ಅವಕಾಶಕ್ಕಾಗಿ ಬರುವ ಹೆಣ್ಣುಮಕ್ಕಳಿಗೆ ಇದೊಂದು ಪಾಠವಾಗಬೇಕಿದೆ ಎಂದು ಹೇಳಿ ಬೀದಿಮಧ್ಯೆ ಕುಳಿತು ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಿದ್ದರು. ಒಂದಷ್ಟು ಮಂದಿ ಶ್ರೀರೆಡ್ಡಿ ಪರ ನಿಂತರೆ ಮತ್ತೆ ಕೆಲವರು ಈಕೆಯ ಮೇಲೆ ಹರಿಹಾಯ್ದಿದ್ದಾರೆ. ಅಭಿರಾಮ್ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ, ಅವಕಾಶ ಕೊಡಿಸುವುದಾಗಿ ಹೇಳಿ ನನ್ನನ್ನು ಕೈ ಬಿಟ್ಟಿದ್ದಾನೆ ಎಂದು ಅಭಿರಾಮ್ ಜೊತೆಗಿನ ಚಾಟಿಂಗ್ ಮೆಸೇಜ್'ಗಳನ್ನು ಕೂಡ ನಟಿ ಶ್ರೀ ರೆಡ್ಡಿ ರಿವೀಲ್ ಮಾಡಿದ್ರು.
Comments